Advertisement

ಕೊಪ್ಪಳದಲ್ಲಿ ರೈತಪರ ಸಂಘಟನೆಗಳಿಂದ ರಾ. ಹೆದ್ದಾರಿ-13 ಬಳಿ ಪ್ರತಿಭಟನೆ

12:05 PM Feb 06, 2021 | Team Udayavani |

ಕೊಪ್ಪಳ: ದೆಹಲಿಯ ರೈತರ ಬೆಂಬಲಿಸಿ ಕೊಪ್ಪಳ ತಾಲೂಕಿನ ಹಿಟ್ನಾಳ ಟೋಲ್ ಗೇಟ್ ನ ರಾಷ್ಟ್ರೀಯ ಹೆದ್ದಾರಿ-13 ರಸ್ತೆ ಬಳಿ ರೈತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

Advertisement

ಎಲ್ಲೆಡೆ ಹೆದ್ದಾರಿ ತಡೆ ಕರೆ ನೀಡಿದ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಆಪ್, ಸಿಐಟಿಯು, ರೈತಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ರೈತರನ್ನು ಬೆಂಬಲಿಸಿದಕ್ಕಾಗಿ ಕೊಲೆ, ಅತ್ಯಾಚಾರ ಬೆದರಿಕೆ : ಬ್ರಿಟಿಷ್ ನಟಿ

ಕೇಂದ್ರ ಸರ್ಕಾರ ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಬೇಕು. ಸರ್ಕಾರ ಮೂರು ಕಾಯ್ದೆ ಜಾರಿ ಮಾಡುವ ಮೂಲಕ ರೈತರ ಬದುಕಿಗೆ ಕುತ್ತು ತಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ರೈತರ ಹಿತ ಕಾಯುವುದನ್ನ ಬಿಟ್ಟು ಉಳಿದೆಲ್ಲವನ್ನ ಮಾಡುತ್ತಿದ್ದಾರೆ ಎಂದರು.

Advertisement

ಕಾಯ್ದೆಗಳನ್ನ ವಿರೋಧಿಸಿ ದೆಹಲಿಯಲ್ಲಿ ರೈತರು ಮಳೆ, ಚಳಿ, ಬಿಸಿಲು ಎನ್ನದೆ ಹೋರಾಟ ಮಾಡುತ್ತಿವೆ. ಕೇಂದ್ರ ಸರ್ಕಾರಕ್ಕೆ ಕಿಂಚಿತ್ತು ಕಾಳಜಿ ಇಲ್ಲ. ಕೂಡಲೇ ಮೂರು ಕಾಯ್ದೆ ಹಿಂಡೆಯಬೇಕು ಎಂದು ಒತ್ತಾಯಿಸಿ ಹಿಟ್ನಾಳ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ-13 ರಸ್ತೆ ಬಳಿ ಪ್ರತಿಭಟನೆ ನಡೆಸಿದರು. ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ಪ್ರತಿಭಟನೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next