Advertisement

ಬೇಲೂರು: ಎರಡನೇ ದಿನಕ್ಕೆ ಕಾಲಿಟ್ಟ  ರೈತರ ಪ್ರತಿಭಟನೆ

03:43 PM Oct 12, 2022 | Team Udayavani |

ಬೇಲೂರು: ಕಾಫಿ ಬೆಳೆಗಾರರ ಹಲವು ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ 2 ನೇ ದಿನಕ್ಕೆ ಕಾಲಿಟ್ಟಿದೆ. ಸೋಮವಾರ ಆರಂಭಗೊಂಡ ಪ್ರತಿಭಟನೆ ಅಂತ್ಯದಲ್ಲಿ ತಹಶೀಲ್ದಾರ್‌ ಕಚೇರಿ ಮುಂದೆ ಧರಣಿ ನಡೆಸಿದ್ದಲ್ಲದೆ, ರಾತ್ರಿ ತಹಶೀಲ್ದಾರ್‌ ಕಚೇರಿ ಗೇಟಿನ ಬಳಿ ಮಲಗುವ ಮೂಲಕ ಅಹೋರಾತ್ರಿ ಧರಣಿ ನಡೆಸಿದರು.

Advertisement

ಮಂಗಳವಾರ ಆರಂಭಗೊಂಡ ಧರಣಿ ವೇಳೆ, ಶಾಸಕ ಕೆ.ಎಸ್‌.ಲಿಂಗೇಶ್‌, ರಾಜ್ಯ, ಕೇಂದ್ರ ಸರ್ಕಾ ರ ಹಾಗೂ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬೆದರಿಕೆ ನಿಲ್ಲಿಸಿ: ರೈತ ಸಂಘದ ಜಿಲ್ಲಾ ರೈತ ಸಂಘದ ಕಾರ್ಯದರ್ಶಿ ಬಳ್ಳೂರುಸ್ವಾಮಿಗೌಡ ಮಾತನಾಡಿದರು. ಕಾಫಿ ಬೆಳೆಗಾರರ ಪಂಪ್‌ಸೆಟ್‌ ಗಳಿಗೆ ಅನಗತ್ಯ ಬಿಲ್ಲನ್ನು ಹಾಕುವು ದು, ದಂಡದ ಜೊತೆಗೆ ಬಡ್ಡಿ ಕಟ್ಟುವಂತೆ ಒತ್ತಾಯಿಸಿ ಮಲೆನಾಡ ಭಾಗದಲ್ಲಿ ವಿಜಿಲೆ ನ್ಸ್‌ ಅವರನ್ನು ಇಟ್ಟುಕೊಂಡು ಕಾಫಿ ಬೆಳೆಗಾರರನ್ನು ಬೆದರಿಸುವುದನ್ನು ನಿಲ್ಲಿಸಬೇಕು. ಕಾಫಿ ಬೆಳೆಗಾರರಿಗೆ 10 ಎಚ್‌ಪಿ. ವರಗೆ ಉಚಿತ ವಿದ್ಯುತ್‌ ಕೊಡುವ ನೆಪದಲ್ಲಿ ಡೈರೆಕ್ಟರ್‌ ಬೆನಿಫಿಟ್‌ ಟ್ರಾನ್ಸ್‌ಫ‌ರ್‌ (ಡಿಬಿಟಿ) ರದ್ದುಪಡಿಸಬೇಕೆಂದು ಒತ್ತಾಯಿಸಿದರು.

ಸ್ಪಂದಿಸದ ಜನಪ್ರತಿನಿಧಿಗಳು: ರೈತರು ಧರಣಿ ನಡೆಸುತ್ತಿದ್ದರೂ ಶಾಸಕರಾದಿಯಾಗಿ ಯಾವುದೆ ಜನಪ್ರತಿ ನಿಧಿಗಳು ಆಗಮಿಸಿಲ್ಲ. ವಿಪಕ್ಷದಲ್ಲಿ ರುವ ಶಾಸಕರು ರೈತರಿಗೆ ಬೆಂಬಲ ನೀಡುವ ಆಲೋಚನೆ ಇಲ್ಲದಿರುವುದನ್ನು ನೋಡಿದರೆ ಆಡಳಿತ ಪಕ್ಷದೊಂದಿಗಿನ ಹೊಂದಾಣಿಕೆ ಶಂಕೆ ಯಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಪರಿಶೀಲಿಸಿದೆ: ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಚೆಸ್ಕಾಂ ಮುಖ್ಯ ಎಂಜಿನಿಯರ್‌ ಮಹಾದೇವಸ್ವಾಮಿ ಪ್ರಸಾದ್‌ ಮಾತನಾಡಿದರು.

Advertisement

ರೈತರು ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಮಾಹಿತಿ ಸಂಗ್ರಹಿಸಲಾಗಿದೆ. ಪಂಪ್‌ ಸೆಟ್‌ಗೆ ವಿದ್ಯುತ್‌ ಸಂಪ ರ್ಕ ಸ್ಥಗಿತಗೊಳಿಸಿಲ್ಲ. ಸರ್ಕಾರದ ಅನುದಾನ ರೈತರಿಗೆ ನೇರವಾಗಿ ತಲುಪಿಸಲು ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆಳೆಗಾರರು ಬಾಕಿಯಿರುವ ಹಣ ಕಂತಿನ ಮೇಲೆ ಪಾವತಿಸಲು ಅವಕಾಶವಿದೆ. ಚಾಮರಾಜನಗರ, ಮಂಡ್ಯ, ಮೈಸೂರು, ಮಡಿಕೇರಿ ರೈತರು ಅಹವಾಲು ನೀಡಿದ್ದಾರೆ. ಡಿಬಿಟಿ ರದ್ದು ಪಡಿಸುವುದು ನಮ್ಮ ವ್ಯಾಪ್ತಿಗೆ ಬರಲ್ಲ. ಸರ್ಕಾರದ ಗಮನಕ್ಕೆ ತರಲಾಗುವುದು. ರೈತರಿಂದ ಬೇಡಿಕೆ ಅರ್ಜಿ ಪಡೆ ಯುವಂತೆ ವ್ಯವಸ್ಥಾಪಕ ನಿರ್ದೇಶಕರೂ ತಿಳಿಸಿದ್ದಾರೆ. ಸರ್ಕಾರವೂ ರೈತರ ಸಮಸ್ಯೆಯನ್ನು ಪರಿಶೀಲಿ ಸಲಿದೆ. ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು ಪ್ರತಿಭನೆಕಾರರನ್ನು ಮನೋವಲಿಸಲು ತಹಶೀಲ್ದಾರ್‌ ರಮೇಶ್‌, ಚಸ್ಕಾಂ ಅಧೀಕ್ಷಕ ಸುನಿಲ್‌ ಕುಮಾರ್‌, ಎಇಇ ಚಂದ್ರಮ್ಮ ಪ್ರಯತ್ನಿಸಿದರು.

ಪ್ರತಿಭಟನೆಯಲ್ಲಿ ತಾ.ಅಧ್ಯಕ್ಷ ಬೋಗಮಲ್ಲೇಶ್‌, ಬಸವರಾಜು, ಶಿವಾನಂ ದ್‌, ಗೋಂದಶೆಟ್ಟಿ, ಶ್ರೀನಿವಾಸ್‌, ಕೆ.ಪಿ.ಕುಮಾರ್‌, ಅದ್ಧೂರಿ ಚೇತನ ಕುಮಾರ್‌, ಶ್ರೀ ನಿವಾಸ್‌, ಧರ್ಮಪಾಲ್‌, ಬಿ.ಸಿ.ನಾಗರಾಜ್‌, ಬಸವೇಗೌಡ, ಮೋಕ್ಷ ರಾಜು, ಕಿರ್ಕಿ ಹಳ್ಳಿ ರಮೇಶ್‌, ಪ್ರಸನ್ನ, ಸೋಮಶೇಖರ್‌, ಸುಮಂತ್‌, ಬೆಣ್ಣಿನಮನೆ ಶ್ರೀನಿವಾಸ್‌, ತಾರಾನಾಥ್‌, ಕಂದಾ ವರ ಮೊಗಣ್ಣಗೌಡ, ರಾಜಶೇಖರ್‌, ಸುನಿಲ್‌, ದೇವೇಗೌಡರು, ಸೋಮೇಗೌಡ, ಶ್ರೀಧರ್‌, ಸಚಿನ್‌, ಲಿಂಗೇಗೌಡ ಇತ ರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next