Advertisement

ಸಕ್ಕರೆ ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ

05:10 PM Sep 14, 2021 | Team Udayavani |

ಚಾಮರಾಜನಗರ: ರೈತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಬಣ್ಣಾರಿ ಅಮ್ಮನ್‌ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ಶರವಣ ಅವರನ್ನು ಬೇರೆಡೆ ವರ್ಗ ಮಾಡದಿರುವ ಕ್ರಮ ಖಂಡಿಸಿ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಮುಂಭಾಗ ಸೋಮವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಜಿಲ್ಲಾಡಳಿತ, ಬಣ್ಣಾರಿ ಅಮ್ಮನ್‌ ಸಕ್ಕರೆಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಶರವಣ ವಿರುದ್ಧ ಘೋಷಣೆಕೂಗಿದರು.

ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್‌ ಮಾತನಾಡಿ, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ರೈತರು ಹಾಗೂ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯ ಸಭೆಯಲ್ಲಿ  ಕಾರ್ಖಾನೆಯ ಉಪಾಧ್ಯಕ್ಷ ಶರವಣ ಅವರು ರೈತಸಂಘದಬಗ್ಗೆಅವಹೇಳನಕಾರಿಯಾಗಿ
ಮಾತನಾಡಿದ್ದರು. ಇದನ್ನು ಖಂಡಿಸಿ ಅಂದು ಪ್ರತಿಭಟನೆ ಸಹ ಮಾಡಲಾಗಿತ್ತು. ಈ ವೇಳೆ 15 ದಿನದೊಳಗೆ ಶರವಣ ಅವರನ್ನು ವರ್ಗ ಮಾಡಲು ಅವಕಾಶ ಕಲ್ಪಿಸುವಂತೆ ಕೇಳಿಕೊಂಡಿದ್ದ ಜಿಲ್ಲಾಧಿಕಾರಿ ಹಾಗೂ ಸಕ್ಕರೆಕಾರ್ಖಾನೆಯ ವೆಂಕಟೇಶಮೂರ್ತಿ ಅವರ ಮಾತಿಗೆ ಬೆಲೆ ಕೊಟ್ಟು ಅವಕಾಶ ನೀಡಲಾಗಿತ್ತು. ಆದರೆ, 15 ದಿನಗಳು ಕಳೆದರೂ ಇನ್ನೂ ವರ್ಗಾವಣೆ ಮಾಡಿಲ್ಲ ಎಂದರು.

ಇದನ್ನೂ ಓದಿ:ಗುಜರಾತ್ ನಲ್ಲಿ ಭಾರೀ ಮಳೆ; ರಾಜ್ ಕೋಟ್, ಜಾಮ್ ನಗರದಲ್ಲಿ ಪ್ರವಾಹ, IAF ಕಾರ್ಯಾಚರಣೆ

ಅಲ್ಲದೇ ಜಿಲ್ಲಾಡಳಿತವು ಶರವಣ ಅವರನ್ನು ವರ್ಗ ಮಾಡಲಾಗಿದೆಯೇ ಇಲ್ಲ ಮುಂದುವರಿಸಲಾಗಿದೆಯೇ ಎಂಬುದನ್ನು ಸಹ ಪರಿಶೀಲಿಸಿಲ್ಲ. ಅಧಿಕಾರಿಗಳನ್ನು ಕೇಳಿದಾಗ ಪರಿಶೀಲಿಸಿ ಹೇಳುವುದಾಗಿ ಹೇಳುತ್ತಾರೆ. ಬೇಡಿಕೆ ಈಡೇರಿಸದಿದ್ದರೆ ಚಳವಳಿಯನ್ನು ಮುಂದುರಿಸಲಾಗುವುದು. ಅಲ್ಲದೇ ಇಲ್ಲೇ ಅಡುಗೆ ಮಾಡಿ ಮಲಗುತ್ತೇವೆ ಎಂದು ಎಚ್ಚರಿಸಿದರು. ಈ ವೇಳೆ ಆಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ್‌ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಜಗ್ಗದ ರೈತ ಸಂಘದ ಪದಾಧಿಕಾರಿಗಳು, ವರ್ಗಾವಣೆಆದೇಶ ಪತ್ರ ತರುವ ತನಕ ಪ್ರತಿಭಟನೆ ಮುಂದುರಿಸಲಾಗುವುದು ಎಂದರು.

Advertisement

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಗುರುಪ್ರಸಾದ್‌, ಮುಖಂಡರಾದ ಅತ್ತಹಳ್ಳಿ ದೇವರಾಜ್‌, ಕಿರಗಸೂರು ಶಂಕರ್‌, ಮೇಲಾಜಿಪುರ ವಿಜಿ, ಅಡ್ಡ ರವಿ, ಕುರುಬೂರು ಸಿದ್ದೇಶ್‌, ಶಂಭು, ನಂಜುಂಡಸ್ವಾಮಿ, ಲಿಂಗರಾಜು, ವಾಚ್‌ ಕುಮಾರ್‌, ಬೆನಕನಹಳ್ಳಿ ಪರಶಿವಮೂರ್ತಿ, ಗೌರೀಶ್‌, ಮಂಜು, ಶಿವಸ್ವಾಮಿ, ರಾಜೇಂದ್ರ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next