ನಂಜನಗೂಡು: ಮಹರಾಷ್ರ್ಟ ಏಕೀಕರಣ ಸಮಿತಿಯವರು ಬೆಳಗಾವಿಯಲ್ಲಿ ಕನ್ನಡ ಧ್ವಜ ಸುಟ್ಟು ಸ್ವಾತಂತ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಹಾನಿ ಮಾಡಿದ್ದನ್ನು ಖಂಡಿಸಿ ನಂಜನಗೂಡಿನ ತಾಲೂಕು ಕಛೇರಿ ಮುಂಭಾಗದಲ್ಲಿ ರಾಜ್ಯ ರೈತ ಸಂಘದ ನೇತೃತದಲ್ಲಿ ಪ್ರತಿಭಟನೆ ನಡೆಯಿತು.
ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಳ್ಳದ ರಾಜ್ಯಸರ್ಕಾರದ ವಿರುದ್ದ ಪ್ರತಿಭಟನಾಕಾರರು ಹರಿಹಾಯ್ದು,ಕಿಡಗೇಡಿಗಳ ವಿರುದಗದ ತಕ್ಷಣ ಕ್ರಮ ಕೈಗೊಳ್ಳಲು ಆಗ್ರಹಿಸಿ ತಹಶಿಲ್ದಾರ ಭೈರಯ್ಯನವರಿಗೆ ಮನವಿ ಸಲ್ಲಿಸಿದರು .
ರೈತ ಸಂಘಟನೆಯ ಈ ಪ್ರತಿಭಟನೆಗೆ ತಾಲೂಕು ನಾಯಕರ ಸಂಘದ ನಾಯಕರು ಸಾಥ್ ನೀಡಿ ತಮ್ಮ ಕನ್ನಡದ ಕೆಚ್ಚನ್ನು ಪ್ರರ್ದಶಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಕಾರ್ಯದರ್ಶಿ ಹಿಮ್ಮಾವು ರಘು, ತಾಲೂಕು ಅಧ್ಯಕ್ಷ ಸತೀಶ್ ರಾವಗ ನಾಯಕರ ಸಂಘದ ಮುಖಂಡ ಎಸ್ ಸಿ ಬಸವರಾಜು ಬಂಗಾರ ಸ್ವಾಮಿ ,ಪಿ ಶ್ರೀನಿವಾಸ್ ದೊರೆಸ್ವಾಮಿ ನಾಯಕ ತಾಲೂಕು ಅಧ್ಯಕ್ಷ ನಾಗರಾಜು ಮತ್ತಿತರರು ಭಾಗಿಯಾಗಿದ್ದರು.