ಹಾಸನ: ಹಾಲು ಉತ್ಪಾದಕರು ಮತ್ತು ತೋಟದ ಬೆಳೆಗಾರರ ಉತ್ಪನ್ನಗಳಿಗೆ ಮಾರಕವಾಗ ಲಿದ್ದರೂ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದದಿಂದ ಕೃಷಿಯನ್ನು ಹೊರಗಿಡಬೇಕೆಂದು ಆಗ್ರಹಿಸಿ ರೈತ ಸಂಘದ ಕಾರ್ಯರ್ಕರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಹೇಮಾವತಿ ಪ್ರತಿಮೆಬಳಿಯಂದ ಜಿಲ್ಲಾಧಿಕಾರಿ ಕಚೇರಿಗೆ ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ನೇತೃತ್ವ ದಲ್ಲಿ ಮೆರವಣಿಗೆಯಲ್ಲಿ ಬಂದು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
15 ದೇಶಗಳೊಂದಿಗೆ ಭಾರತ ಮಾತುಕತೆ: ಆಸಿಯಾನ್ ದೇಶಗಳು ಸೇರಿದಂತೆ ದೊಡ್ಡ ಕೈಗಾರಿಕಾ ಆರ್ಥಿಕತೆ ಹೊಂದಿರುವ ಚೀನಾ ಜಪಾನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಂತಹ ಇತರ 15 ದೇಶಗಳೊಂದಿಗೆ ಭಾರತ ಸರ್ಕಾರದ ಆರ್ ಸಿಇಪಿ ಮಾತುಕತೆ ನಡೆಸುತ್ತಿದೆ. ಆರ್‌ಸಿಇಪಿ ದೇಶದ ಆಹಾರ ಮತ್ತು ಕೃಷಿ ಕ್ಷೇತ್ರಕ್ಕೆ ದೊಡ್ಡ ಬೆದರಿಕೆಯಾಗಿದ್ದು, ಮುಂದಿನ ನವೆಂಬರ್ ಆರಂಭದ ವೇಳೆಗೆ ಮಾತುಕತೆಗಳು ಮುಕ್ತಾಯ ಗೊಳ್ಳಲಿದೆ ಎಂದು ಮಾಹಿತಿಯಿದೆ. ಆರ್ ಸಿಇಪಿ ಮತ್ತು ಇತರ ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳಿಂದ ಕೃಷಿಯನ್ನು ಹೊರಗಿಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಕೃಷಿ, ಹೈನುಗಾರಿಕೆಗೆ ಆರ್‌ಸಿಇಪಿ ಮಾರಕ: ಆರ್‌ಸಿಇಪಿ ಮುಕ್ತ ವ್ಯಾಪಾರ ಒಪ್ಪಂದ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ. ಇದರಿಂದಾಗಿ ಆನೇಕ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಮುಂದಾಗುತ್ತವೆ. ಇದರಿಂದಾಗಿ ನಮ್ಮ ದೇಶದ ಲಕ್ಷಾಂತರ ಸಣ್ಣ ರೈತರ, ವಿಶೇಷವಾಗಿ ಮಹಿಳೆಯರ ಜೀವ ನೋಪಾಯವನ್ನು ಬೆಂಬಲಿಸುವ ಹೈನುಗಾರಿಕೆ ಕ್ಷೇತ್ರ ತೀವ್ರ ಅಪಾಯಕ್ಕೆ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬೀಜ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಲು ಹೆಚ್ಚಿನ ಅಧಿಕಾರವನ್ನು ಪಡೆಯುತ್ತವೆ ಮತ್ತು ಬೀಜಗಳನ್ನು ಉಳಿಸಿ ನಿಮಯ ಮಾಡಿಕೊಳ್ಳುವಾಗ ರೈತರು ಅಪರಾಧಿಗಳಾಗುತ್ತಾರೆ. ದೇಶಿ ನಿಗಮಗಳು ರಾಷ್ಟ್ರೀಯ ನ್ಯಾಯಾಲಯಗಳನ್ನು ಬೈಪಾಸ್ ಮಾಡಬಹುದು ಮತ್ತು ನಮ್ಮ ಸ್ವಂತ ರೈತರಿಗೆ ಮತ್ತು ಕಾರ್ಮಿಕರಿಗೆ ಸಹಾಯ ಮಾಡಿದಲ್ಲಿ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಬಹುದು. ಮಧ್ಯಸ್ಥಿಕೆ ನ್ಯಾಯಮಂಡಳಿಗಳಲ್ಲಿ ಹೂಡಿಕೆದಾರ-ರಾಜ್ಯ ವಾದ ಇತ್ಯರ್ಥ (ಐಎಸ್ ಡಿಎಸ್) ಕಾರ್ಯ ವಿಧಾನಗಳ ಕುರಿತು ಚರ್ಚಿಸಲಾಗುತ್ತಿದೆ.
ಸೋರಿಕೆಯಾದ ದಾಖಲೆಗಳು ದೇಶಿ ಹೂಡಿಕೆದಾರರು ಕೃಷಿ ಭೂಮಿಯನ್ನು ಖರೀದಿಸಲು ಸಾಧ್ಯವಾಗುತ್ತದೆ ಮತ್ತು ಸರಕು ಮತ್ತು ಸೇವೆಗಳ ಸರ್ಕಾರಿ, ಸಾರ್ವಜನಿಕ ಸಂಗ್ರ ಹಣೆ ದೇಶಿ ನಿಗಮಗಳು ಸಹ ಬೆಂಬಲ ವನ್ನು ಪಡೆಯ ಬಹುದು ಎಂಬುದನ್ನು ಸೂಚಿಸುತ್ತದೆ ಎಂದು ಪ್ರತಿಭಟನಾಕಾರರು ಆಪಾದಿಸಿದರು.
ಚಿಲ್ಲರೆ ವ್ಯಾಪಾರಕ್ಕೂ ಕುತ್ತು: ಸೂಪರ್ ಮಾರ್ಕೆಟ್ ಮತ್ತು ದೊಡ್ಡ ಕಂಪನಿಗಳ ನೇರ ಚಿಲ್ಲರೆ ವ್ಯಾಪಾರವು ಸ್ಥಳೀಯ ಮಾರುಕಟ್ಟೆಗಳನ್ನು ಅಳಿಸಿ ಅಳಿಸಿ ಹೆಚ್ಚಿನ ಶಕ್ತಿಯನ್ನು ಪಡೆಯುತ್ತವೆ. ಈ ಒಪ್ಪಂದಕ್ಕೆ ಭಾರತ ಸರ್ಕಾರವು ಸಹಿ ಹಾಕಬಾರದು ಮತ್ತು ಕೃಷಿಯನ್ನು ಈ ಒಪ್ಪಂದದಿಂದ ಹೊರಗಿಡಬೇಕೆಂದು ಪ್ರತಿಭಟ ನಾಕಾರರು ಒತ್ತಾಯಿಸಿದರು. ರೈತ ಸಂಘದ ಮುಖಂಡರಾದ ರಾಜೇಗೌಡ, ಸ್ವಾಮಿ ಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.