Advertisement

ಅರಣ್ಯಾಧಿಕಾರಿಗಳ ಕಿರುಕುಳ ಖಂಡಿಸಿ ಸಿಡಿದೆದ್ದ ರೈತರು

12:53 PM Feb 18, 2023 | Team Udayavani |

ಜಾವಗಲ್‌: ಜಾವಗಲ್‌ ಹೋಬಳಿ ಕೆರೆಕೋಡಿಹಳ್ಳಿ-ಧನಂಜಯಪುರ ಗ್ರಾಮದ ಹರಿಹರೇಶ್ವರ ದೇಗು ಲದ ತಪ್ಪಲಿನಲ್ಲಿ ನೂರಾರು ರೈತರು ಕನಕಂಚೇನಹಳ್ಳಿ ಪಟೇಲ್‌ ಪ್ರಸನ್ನಕುಮಾರ್‌ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳ ವಿರೋಧಿಸಿ ಪ್ರತಿಭಟನೆ ನಡೆಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ರೈತರಿಗೆ ವಿನಾಕಾರಣ ತೊಂದರೆಕೊಟ್ಟು ಪದೇ-ಪದೇ ರೈತರ ಮನೆ ಬಾಗಿಲಿಗೆ ಹೋಗಿ ನೋಟಿಸ್‌ ಜಾರಿ ಮಾಡುತ್ತಿರುವ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಾವಗಲ್‌ ಹೋಬಳಿ ನೀಲಿಗಿರಿ ಕಾವಲು 1 ಮತ್ತು 2ಪಿ ಪೈಕಿ ಒಟ್ಟು 4586 ಎಕರೆ ಜಮೀನಿದ್ದು ಈಗಾಗಲೇ ಹೋಬಳಿಯ ಜಾವಗಲ್‌, ಕೆರೆಕೋಡಿಹಳ್ಳಿ, ಧನಂಜಯಪುರ, ನೇರ್ಲಿಗೆ, ತಿಮ್ಮನಹಳ್ಳಿ, ಕೆಂಗನಹಳ್ಳಿ, ಮೊಸಳೆ, ಮಲದೇವಿಹಳ್ಳಿ ಸೇರಿದಂತೆ ನೂರಾರು ರೈತರು ನಾಲ್ಕೈದು ತಲೆಮಾರಿನಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ತೆಂಗಿನ ಸಸಿ, ಗಿಡ-ಮರ ನೆಟ್ಟು ಬದುಕು ಕಟ್ಟಿಕೊಂಡಿದ್ದಾರೆ.

ರೈತರಿಗೆ ಕಿರುಕುಳ ಆರೋಪ: ಇತ್ತೀಚಿನ ದಿನಗಳಲ್ಲಿ ಸ್ಥಳೀಯ ಅರಣ್ಯ ಅಧಿಕಾರಿಗಳು ನೊಟೀಸ್‌ ನೀಡಿ ಕಿರುಕುಳ ಕೊಡುತ್ತಿದ್ದಾರೆ. ಇದನ್ನು ಕೂಡಲೇ ನಿಲ್ಲಿಸಿ, ರೈತರು ಸಾಗುವಳಿ ಮಾಡುತ್ತಿರುವ ಭೂಮಿಗೆ ತೊಂದರೆ ಆಗದಂತೆ ಸರ್ಕಾರ ಆದೇ ಶಿಸಿ ರೈತರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಅಧಿಕಾರಿಗಳು ಕಿರುಕುಳ ನಿಲ್ಲಿಸದಿದ್ದಲ್ಲಿ ಮುಂದಿನ ದಿನ ಗಳಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Advertisement

ರೈತರ ಬದುಕು ಬೀದಿಗೆ: ರೈತ ಗಿರಿಗೌಡ ಮಾತನಾಡಿ, ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದ ಉಳುಮೆ ಮಾಡಿಕೊಂಡು ಜೀವನ ನಡೆಸಿಕೊಂಡು ಬರುತ್ತಿದ್ದು, ಈ ಜಮೀನನ ಮೇಲೆ ಬ್ಯಾಂಕ್‌ಗಳಲ್ಲಿ ಸಾಲ ಪಡೆದುಕೊಂಡಿರುತ್ತೇವೆ. ಈಗ ಏಕಾ ಏಕಿ ನಮ್ಮ ಜಾಗವೆಂದು ಇಲಾಖಾ ಅಧಿಕಾರಿಗಳು ನೊಟೀಸ್‌ ನೀಡುತ್ತಿದ್ದಾರೆ. ಇದರಿಂದಾಗಿ ನೂರಾರು ಕುಟುಂಬ ಗಳಿಗೆ ಜೀವನಾಧಾರವಾಗಿರುವ ಜಮೀನನ್ನು ತೆರವುಗೊಳಿಸಿದರೆ, ಸಂಸಾರಗಳು ಬೀದಿಪಾಲಾಗುತ್ತವೆ ಎಂದು ತೀ ವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ಸುದ್ದಿ ತಿಳಿದು ಮಾಜಿ ಸಚಿವ ಬಿ.ಶಿವರಾಮ್‌, ಸಂತೋಷ್‌ ಕೆಂಚಾಂಬ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ರೈತರಿಗೆ ಧೆ„ರ್ಯ ತುಂಬಿ ಅರಣ್ಯ ಇಲಾಖೆ ಅಧಿಕಾರಿಗಳು ಏಕಾಏಕಿ ಹಳ್ಳಿಗಳಿಗೆ ತೆರಳಿ ರೈತರಿಲ್ಲದ ವೇ ಳೆ ಮನೆಗಳಿಗೆ ಹೋಗಿ ಮನೆಯಲ್ಲಿ ಇದ್ದವರ ಕೈಯಲ್ಲಿ ನೋಟೀಸ್‌ ನೀಡುತ್ತಿರುವುದು ಆಕ್ಷಮ್ಯ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲಮಾಡಿಕೊಡುವುದಾಗಿ ಭರವಸೆ ನೀಡಿದರು. ಸ್ಥ

ಳಕ್ಕೆ ಆಗಮಿಸಿದ ರಾಜಸ್ವ ನಿರೀಕ್ಷಕ ಗೋವಿಂದರಾಜು, ಅರಣ್ಯ ಇಲಾಖೆ ಆರ್‌ ಎಫ್‌ಒ ಅಮಿತ್‌ ಗೌಡರಿಗೆ ರೈತ ಮುಖಂಡ ಕನಕಂಚೆನಹಳ್ಳಿ ಪಟೇಲ್‌ ಪ್ರಸನ್ನಕುಮಾರ್‌ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದರು. ರೈತ ಮುಖಂಡರಾದ ಆಯುಬ್‌ಪಾಶಾ, ಏಜಾಜ್‌ಪಾಶಾ, ಹನುಮಂತು, ದಸ್ತಗೀರ್‌, ಮಲ್ಲಯ್ಯ, ಭೈರಪ್ಪ, ನಾಗೇಂದ್ರ, ಯತೀಶ್‌, ಸಂಪತ್‌, ಪವನ್‌, ಪ್ರಭಾಕರ್‌ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next