Advertisement
ತಾಲೂಕು ಕಚೇರಿ ಸಭಾಂಗಣದಲ್ಲಿ ನಿಗದಿಯಾಗಿದ್ದ ಸಭೆಗೆ ತಹಶೀಲ್ದಾರ್ ಒರತು ಪಡಿಸಿ ಬೆಸ್ಕಾಂ ಎಇಇ, ಆರೋಗ್ಯಾಧಿಕಾರಿ, ಕೆಎಸ್‌ಆರ್‌ಟಿಸಿ ಮ್ಯಾನೇಜರ್, ಅಬಕಾರಿ ಅಧಿಕಾರಿಗಳು ಎರಡು ಗಂಟೆ ಸಮಯ ಕಳೆದರೂ, ಬಾರದ ನಿಟ್ಟಿನಲ್ಲಿ ರೈತ ಸಂಘದ ಅಧ್ಯಕ್ಷ ಲೋಕೇಶ್ ಸೇರಿದಂತೆ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಕಾಡುಪ್ರಾಣಿಗಳ ಹಾವಳಿ: ರೈತ ಮುಖಂಡ ಬೈರೇ ಗೌಡ ಮಾತನಾಡಿ, ಕಾಡುಪ್ರಾಣಿಗಳಿಗೆ ಬಲಿಯಾಗುವ ರೈತರ ಕುರಿ, ಮೇಕೆ, ಹಸುಗಳಿಗೆ ಅರಣ್ಯ ಇಲಾಖೆ ಮಕ್ಕಿಕಾಮಕ್ಕಿ ಪರಿಹಾರ ನೀಡುತ್ತಿದೆ. ರೈತರು ಉಳುಮೆ ಮಾಡುವ ಜಮೀನಿನ ಬಳಿ ಕಂದಾಯ ಅಧಿಕಾರಿಗಳು ತೆರಳದಂತೆ ಅರಣ್ಯಾಧಿಕಾರಿ ಗೀತಾಂಜಲಿ ಆದೇಶಿಸಿದರೂ, ಕಿಮ್ಮತ್ತು ಇಲ್ಲದಂತಾಗಿದೆ. ಗ್ರಾಮ ಮತ್ತು ಶಾಲೆಗಳ ಬಳಿ ಪ್ರತ್ಯಕ್ಷದಿಂದ ರೈತರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಬೀತರಾಗಿದ್ದಾರೆ ಎಂದು ಆರೋಪಿಸಿದರು.
ರೈತರ ಎಲ್ಲಾ ಸಮಸ್ಯೆಗೆ ಪರಿಹಾರ: ತಹಶೀಲ್ದಾರ್ ಜಿ. ಸುರೇಂದ್ರ ಮೂರ್ತಿ ಮಾತನಾಡಿ, ಕಾನೂನು ರೀತಿ ಪರಿಶೀಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಉಳುಮೆ ಚೀಟಿ ನೀಡಲು ಕ್ರಮಕೈಗೊಳ್ಳಲಾಗುವುದು. ರೆಕಾರ್ಡ್ ರೂಂನಲ್ಲಿ ನಿರ್ವಹಣೆ ಇಲ್ಲದೆ ರೆಕಾರ್ಡ್ ಗಳು ನಾಶವಾಗಿದ್ದು, ಉಳಿದ ದಾಖಲೆಗಳನ್ನು ನಿರ್ವಹಣೆ ಮಾಡಿ ಜನಸಾಮಾನ್ಯರಿಗೆ ದಾಖಲೆ ಸಿಗುವಂತೆ ಮಾಡಲಾಗುವುದು. ಇಲಾಖೆಯಲ್ಲಿ ಅನಧಿಕೃತವಾಗಿ ಯಾರು ಕೆಲಸ ಮಾಡುತ್ತಿಲ್ಲ. ರೈತರ ಎಲ್ಲಾ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.
ಡಾಬಾಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ಇಲ್ಲ: ಅಬಕಾರಿ ಇಲಾಖೆಯ ಎಂ.ನಾರಾಯಣ್ ಮಾತನಾಡಿ, ತಾಲೂಕಿನ ಯಾವುದೇ ಮದ್ಯದಂಗಡಿಗಳಲ್ಲಿ ಎಂಆರ್‌ಪಿ ದರಕ್ಕಿಂತ ಹೆಚ್ಚು ಮಾರಾಟ ಮಾಡುವಂತಿಲ್ಲ, ಡಾಬಾಗಳಲ್ಲಿ ಮದ್ಯ ಮಾರಾಟ ಮಾಡಲು ಅನುಮತಿ ಇಲ್ಲ. ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವರ ವಿರುದ್ಧ ಕೇಸ್ ದಾಖಲಿಸಲಾಗಿದ್ದು, ದೂರು ಬಂದ ಸ್ಥಳಕ್ಕೆ ಭೇಟಿ ನೀಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶಿರಸ್ತೆದಾರ್ ಶಿವಮೂರ್ತಿ, ಟಿಎಚ್‌ಒ ಎಂ.ಸಿ. ಚಂದ್ರಶೇಖರಯ್ಯ, ಅಕ್ಷರ ದಾಸೋಹ ಗಂಗಾಧರ್, ರೈತ ಸಂಘದ ಯುವ ಅಧ್ಯಕ್ಷ ರವಿಕುಮಾರ್, ಶಿವಲಿಂಗಯ್ಯ, ನಿಂಗಣ್ಣ, ಜಯಣ್ಣ, ಬುಡಾನ್ ಸಾಬ್, ದಿವಾಕರ, ಮುನಿರಾಜು, ರಾಜಣ್ಣ, ರಾಮಕೃಷ್ಣಯ್ಯ, ಹನುಮಂತಯ್ಯ, ರವಿಕುಮಾರ್ ಇದ್ದರು.