Advertisement

ಚೆಕ್‌ಡ್ಯಾಂ, ಸಮುದಾಯ ಭವನಗಳನ್ನು ಹುಡುಕಿಕೊಡಿ

02:30 PM Feb 28, 2023 | Team Udayavani |

ಕೋಲಾರ: ಕೆಆರ್‌ಐಡಿಎಲ್‌ ಇಲಾಖೆಯಡಿ ಜಿಲ್ಲಾದ್ಯಂತ ಕಳೆದುಹೋಗಿರುವ ಚೆಕ್‌ ಡ್ಯಾಂ, ಸಮುದಾಯ ಭವನಗಳನ್ನು ಹುಡುಕಿಕೊಟ್ಟು ಕೋಟಿಕೋಟಿ ಭ್ರಷ್ಟಾಚಾರವೆಸಗಿರುವ ಆಸ್ತಿಯನ್ನುಹರಾಜು ಹಾಕಿ ಕಾಮಗಾರಿಗಳನನ್ನು ಪೂರ್ಣಗೊಳಿಸಬೇಕು ಎಂದು ರೈತಸಂಘದಿಂದ ಭೂಸೇನಾ ಇಲಾಖೆಯೆದುರು ಹೋರಾಟ ಮಾಡಿ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಲಾಯಿತು.

Advertisement

ಟೆಂಡರ್‌ ಇಲ್ಲದೆ ಕಾಮಗಾರಿ ನಿರ್ವಹಿಸುವ ಭೂಸೇನಾ ಇಲಾಖೆ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟು ಆನೆ ನಡೆದಿದ್ದೇ ದಾರಿ ಎಂಬಂತೆ ಅಲ್ಲಿನ ಎಂಜಿನಿಯರ್‌ಗಳಾದ ಕೋದಂಡ ರಾಮಯ್ಯ, ವಿಜಯ್‌ಕುಮಾರ್‌ ಅವರು ಇಲಾಖೆಯನ್ನೇ ಮಾರಾಟಕ್ಕೆ ಇಟ್ಟಿದ್ದರೂ ಕ್ರಮ ಕೈಗೊಳ್ಳಬೇಕಾದ ಜನಪ್ರನಿಧಿಗಳು ನಾಪತ್ತೆಯಾಗಿ ದ್ದಾರೆ ಎಂದು ಅವ್ಯವಸ್ಥೆ ವಿರುದ್ಧ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.

ವಿಜಯ್‌ ಕುಮಾರ್‌ ಅವರು ತಮ್ಮ ಮಗನ ಹೆಸರಿನಲ್ಲಿ ಅಕ್ರಮ ಟೆಂಡರ್‌ ಸೃಷ್ಠಿ ಮಾಡಿ ಜಿಲ್ಲಾದ್ಯಂತ 60 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಬೇಕಾದ ಚೆಕ್‌ ಡ್ಯಾಂ, ದೇವಸ್ಥಾನದ ಸಿಸಿ ರಸ್ತೆ, ಸಮುದಾಯ ಭವನಗಳನ್ನು ನಿರ್ಮಾಣ ಮಾಡದೆಯೇ ಬಿಲ್‌ ಮಾಡಿಕೊಂಡು ಸಾರ್ವಜನಿಕರ ದೂರುಗಳ ಹಿನ್ನೆಲೆಯಲ್ಲಿ ಕೆಲಸದಿಂದ ವಜಾ ಮಾಡಿದ್ದರೂ ಈ ಇಬ್ಬರ ಅವ ಯಲ್ಲಿ ನಡೆದಿರುವ ಹಗರಣವನ್ನು ತನಿಖೆ ಮಾಡುವಲ್ಲಿ ಹಿರಿಯ ಅಧಿಕಾರಿಗಳು ವಿಫಲವಾಗಿ ಭ್ರಷ್ಟ ಅಧಿಕಾರಿಗಳಿಗೆ ನೆರವಾಗಲು ಕಡಿಮೆ ಹಣ ದುರುಪಯೋಗದ ಕಡತ ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್‌ ಮಾತನಾಡಿ, ಕಾಮಗಾರಿ ಪೂರ್ಣಗೊಂಡರೆ ಟೈಲ್ಸ್‌ ಇಲ್ಲ, ಟೈಲ್ಸ್‌ ಇದ್ದರೆ ಸಿಮೆಂಟ್‌ ಇಲ್ಲ ಇವೆರಡೂ ಇದ್ದರೆ ನಿಗದಿಯ ಸ್ಥಳದಲ್ಲಿ ಭವನಗಳೇ ಇಲ್ಲದಜೊತೆಗೆ ಅಂತರ್ಜಲ ಅಭಿವೃದ್ಧಿಗೆ ನಿರ್ಮಿಸಿರುವ ಚೆಕ್‌ ಡ್ಯಾಂಗಳು ಹಳೆಯ ಕಾಮಗಾರಿಗಳಿಗೆ ಹೊಸ ರೂಪ ಕೊಟ್ಟು ಹೊಸ ಕಡತವನ್ನು ಸೃಷ್ಟಿ ಮಾಡಿ ಹಣ ಲೂಟಿ ಮಾಡುವ ಜತೆಗೆ ಬೇರೆ ಇಲಾಖೆಯ ಕಾಮಗಾರಿಗೆ ತನ್ನದೇ ಕಾಮಗಾರಿ ಎಂದು ಬೇರೆ ಇಲಾಖೆಯ ಜತೆ ಒಳಒಪ್ಪಂದ ಮಾಡಿಕೊಂಡು ಹಣವನ್ನು ಲೂಟಿ ಮಾಡಿದ್ದಾರೆ ಎಂದು ದೂರಿದರು.

ಒಂದು ವಾರದೊಳಗೆ ಇಲಾಖೆಯಲ್ಲಿ 2010ರಿಂದ ಕೋದಂಡರಾಮಯ್ಯ, ವಿಜಯ್‌ ಕುಮಾರ್‌, ಮಂಜುನಾಥ್‌, ಭಾಸ್ಕರ್‌ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳನ್ನು ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಿ ಕಳೆದುಹೋಗಿರುವ ಚೆಕ್‌ ಡ್ಯಾಂ, ಸಮುದಾಯ ಭವನಗಳನ್ನುಹುಡುಕಿಕೊಟ್ಟು ಇಲಾಖೆಯಲ್ಲಿ ಭ್ರಷ್ಟಾಚಾರತೆಗೆ ಕಡಿವಾಣ ಹಾಕಿ ಸಾರ್ವಜನಿಕರ ಹಣವನ್ನು ವ್ಯರ್ಥವಾಗದಂತೆ ಜನರಿಗೆ ಅನುಕೂಲವಾಗುವ ರೀತಿ ಕಾಮಗಾರಿಗಳನ್ನು ಮಾಡುವ ನಿಯಮಗಳನ್ನು ಪಾಲನೆ ಮಾಡಬೇಕು. ಇಲ್ಲವಾದರೆ ಎಲ್ಲಾ ದಾಖಲೆಗಳ ಸಮೇತ ನ್ಯಾಯಕ್ಕಾಗಿ ಲೋಕಾಯುಕ್ತ ಇಲಾಖೆ ಮೊರೆ ಹೋಗುವ ಎಚ್ಚರಿಕೆಯನ್ನು ನೀಡಿದರು.

Advertisement

ಭೂ ಸೇನಾ ಅಧಿ ಕಾರಿ ಮಂಜುನಾಥ್‌ ಮನವಿ ಸ್ವೀಕರಿಸಿ ಕ್ರಮದ ಭರವಸೆ ನೀಡಿದರು. ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಕಾರ್ಯಾಧ್ಯಕ್ಷವಕ್ಕಲೇರಿ ಹನುಮಯ್ಯ, ರಾಜ್ಯ ಪ್ರ.ಕಾ. ಫಾರೂಖ್‌ ಪಾಷ, ಬಂಗಾರಿ ಮಂಜು, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್‌, ಸಂದೀಪ್‌ರೆಡ್ಡಿ, ಸಂದೀಪ್‌ಗೌಡ, ರಾಮಸಾಗರ ವೇಣು, ಗಿರೀಶ್‌, ಮಂಗಸಂದ್ರ ತಿಮ್ಮಣ್ಣ, ಶೈಲ, ಚೌಡಮ್ಮ, ಸುಪ್ರೀಂಚಲ, ಚಂದ್ರಪ್ಪ, ಕೋಟೆ ಶ್ರೀನಿವಾಸ್‌ ಇತರರಿದ್ದರು.

ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವ :  ಜಿಲ್ಲಾದ್ಯಂತ ಸರ್ಕಾರಿ ಕಾಮಗಾರಿಗಳಿಗೆ ಟೆಂಡರ್‌ ಇಲ್ಲದೆ ಕೋಟಿ ಅನುದಾನವನ್ನು ಕೆಆರ್‌ಐಡಿಎಲ್‌ ಸಂಸ್ಥೆಗೆ ಬಿಡುಗಡೆಯಾಗುವ ಜತೆಗೆ 6 ತಾಲೂಕಿನ ಶಾಸಕರು, ಸಂಸದರು, ಎಂಎಲ್ಸಿಗಳ ಅನುದಾನದಲ್ಲಿ ಸಿಸಿರಸ್ತೆ, ಹೈಮಾಸ್ಟ್‌ ಲೈಟ್‌, ಸಮುದಾಯ ಭವನಗಳು, ಚೆಕ್‌ಡ್ಯಾಂಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂ. ಹಣವನ್ನು ಇಲಾಖೆಗೆ ಬಿಡುಗಡೆಯಾಗುತ್ತಿದ್ದರೂ ಟೆಂಡರ್‌ ಇಲ್ಲದೆ ಕಾಮಗಾರಿ ಮಾಡುವುದನ್ನು ಬಂಡವಾಳವಾಗಿಸಿಕೊಂಡು ಅಲ್ಲಿನ ಅಧಿಕಾರಿಗಳು ಹಣ ನಕಲಿ ದಾಖಲೆಗಳನ್ನು ಸೃಷ್ಟಿಸಿ ಲೂಟಿ ಮಾಡಿರುವುದಕ್ಕೆ ಇತ್ತೀಚೆಗೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಕೋದಂಡಪ್ಪ ಹಾಗೂ ವಿಜಯ್‌ ಕುಮಾರ್‌ ಅವಧಿಯಲ್ಲಿ ನಡೆದಿರುವ ಹಗರಣಗಳು ವಿಧಾನಸೌಧದಲ್ಲಿ ಚರ್ಚೆಯಾಗಿ ಇಲಾಖೆಯ ಗೌರವ ಕಳೆದುಕೊಂಡಿದ್ದರೂ ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಿಲ್ಲ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಸಮಧಾನ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next