ತಿ.ನರಸೀಪುರ: ಮೈಸೂರು- ತಿ.ನರಸೀಪುರ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಬಳಿ ತಾಲೂಕು ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಬೆಂಗಳೂರಿನಲ್ಲಿ ಕಬ್ಬು ಬೆಳೆಗಾರರಬಂಧನ ಖಂಡಿಸಿ ರಸ್ತೆ ತಡೆ ನಡೆಸಿ ಪ್ರತಿಭಟನಾ ಧರಣಿ ನಡೆಸಿದರು.
ಈ ವೇಳೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ಕಳೆದ ಅನೇಕತಿಂಗಳುಗಳಿಂದ ನಿರಂತರ ವಾಗಿ ಕಬ್ಬಿಗೆ ನ್ಯಾಯಯುತ ಬೆಲೆನೀಡು ವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದರೂ ಸಹ ಮುಖ್ಯ ಮಂತ್ರಿಗಳು ಹಾಗೂ ಸರ್ಕಾರ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ತಾಲೂಕು ಸಂಘದ ಅಧ್ಯಕ್ಷ ಕುರುಬೂರು ಸಿದ್ದೇಶ್, ಸರ್ಕಾರ ಕೆಲವು ಜಿಲ್ಲೆಗಳಲ್ಲಿ ಸಬ್ಸಿಡಿ ನೀಡಿ ಕೆಲ ಭಾಗದ ರೈತರಿಗೆ ಅನ್ಯಾಯವೆಸಗಿದ್ದಾರೆ. ಸಭೆಗಳನ್ನು ಮಾಡಿ ಭರವಸೆ ನೀಡಿ ಬಳಿಕ ಬೆಲೆ ನಿಗದಿ ಮಾಡದೇ ರೈತರನ್ನು ವಂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದ ಕಬ್ಬು ಬೆಳೆಗಾರರು ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಶಾಂತಿಯುತವಾಗಿಪ್ರತಿಭಟನೆ ಮಾಡುತ್ತಿದ್ದ ವೇಳೆ ಶನಿವಾರ ಪೊಲೀಸ ರನ್ನು ಬಿಟ್ಟು ಹೋರಾಟಗಾರ ರನ್ನು ಬಂಧಿಸಿ ರುವುದು ಖಂಡನೀಯ ಎಂದು ಹೇಳಿದರು.
ಇದೇ ವೇಳೆ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಕೂಗಿದರು. ಬಂಧಿತರನ್ನು ಕೂಡಲೇ ಬಿಡುಗಡೆ ಮಾಡಿ, ಕಬ್ಬಿನ ಬೆಲೆ ದರ ನಿಗದಿ ಮಾಡಿ ರೈತರಿಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿದರು.
ಸಂಘದ ಮುಖಂಡರಾದ ಕುರು ಬೂರು ಗೌರಿಶಂಕರ್,ಅಪ್ಪಣ್ಣ, ಬಸವರಾಜು ಬಿ.ಪಿ.ಪರಶಿವ ಮೂರ್ತಿ, ವಾಚ್ ಕುಮಾರ್, ಯೋಗೇಶ್, ಶಿವರಾಜು, ರಾಜೇಶ್, ಗುರು ಸ್ವಾಮಿ, ನಿಂಗರಾಜು, ಮಲ್ಲೇಶ್, ಶಂಭು, ಪುಟ್ಟರಾಜು, ನಾಗೇಶ್ ಇದ್ದರು.