Advertisement
ಈ ವೇಳೆ ಭಾರತೀಯ ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಕೋಡಿಹಳ್ಳಿ ಜಗದೀಶ್ ಮಾತನಾಡಿ, ಡಿಂಕನಹಳ್ಳಿ ಗ್ರಾಮದಲ್ಲಿ ರೈತರ ಫಲವತ್ತಾದ ಭೂಮಿಯನ್ನೇ ಗುರಿಯಾಗಿಸಿಕೊಂಡು ಸುಮಾರು 36.8 ಎಕರೆ ಜಾಗವನ್ನುಪವರ್ ಸ್ಟೇಷನ್ ಸ್ಥಾಪಿಸಲು ಉದ್ದೇಶಿರುವುದುಸರಿಯಲ್ಲ. ಈ ಭಾಗದ ಸುತ್ತಮುತ್ತಲಿನ ಫಲವತ್ತಾದಭೂಮಿಯಲ್ಲಿರುವ ರೈತರ ಜೀವನಾಧಾರ ಬೆಳೆಗಳಾದತೆಂಗು, ಅಡಕೆ, ಮಾವು, ಹುಣಸೆ, ಹಲಸು ಇತ್ಯಾದಿ ಮರಗಳಿವೆ.
Related Articles
Advertisement
ಸರ್ಕಾರಕ್ಕೆ ಸಲ್ಲಿಸುತ್ತೇನೆ: ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ದಿಗ್ವಿಜಯ್ ಬೋಡ್ವೆ, ನಿಮ್ಮ ಎಲ್ಲಾ ಸಮಸ್ಯೆಗಳು ನಮಗೆ ಅರ್ಥವಾಗಿದ್ದು,ಆದರೆ ಭೂ ಸ್ವಾಧೀನಕ್ಕೆ ಮಾತ್ರ ನಮಗೆ ಅಧಿಕಾರವಿದ್ದುನೀವು ಈ ಬಗ್ಗೆ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆಚರ್ಚಿಸಬೇಕು. ನಿಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ ಎಂದರು.
ನಗರದ ಶ್ರೀ ಕೆಂಪಮ್ಮದೇವಿ ದೇವಸ್ಥಾನದಿಂದಪಾದಯಾತ್ರೆ ಮೂಲಕ ತೆರಳಿ ಉಪವಿಭಾಗಾಧಿಕಾರಿಗಳಕಚೇರಿ ಮುಂಭಾಗ ಬಿ.ಎಚ್.ರಸ್ತೆ ತಡೆದು ಪ್ರತಿಭಟನೆನಡೆಸಿ ಉಪವಿಭಾಗಾಧಿಕಾರಿಗಳ ಕಚೇರಿ ತಲುಪಿ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಬಸ್ತಿಹಳ್ಳಿ ರಾಜಣ್ಣ,ದೇವರಾಜು ತಿಮ್ಲಾಪುರ, ಶ್ರೀಕಾಂತ್ ಕೆಳಹಟ್ಟಿ, ಕೆಆರ್‌ಎಸ್ ಪಕ್ಷ ಗಂಗಾಧರ್ ಕರೀಕೆರೆ, ಕೃಷಿಕ ಸಮಾಜದಹೊನ್ನರಾಜು, ಜಯಶ್ರೀ, ಪಾಂಡುರಂಗ, ರಾಜಣ್ಣ,ದಿನೇಶ್, ಬಸವರಾಜು, ಅಜ್ಜನಪಾಳ್ಯದ ಕಾಂತರಾಜು,ಬರಗೀಹಳ್ಳಿ ಮೂರ್ತಿ ಸೇರಿದಂತೆ ನೂರಾರುಸಂಖ್ಯೆಯಲ್ಲಿ ಅರಳೀಕೆರೆ, ಸಾಲಾಪುರ, ಅಜ್ಜನಪಾಳ್ಯ,ಡಿಂಕನಹಳ್ಳಿ, ಕೋರಗೆರೆ ಬರಗಿಹಳ್ಳಿ, ಬಟ್ಟರಹಳ್ಳಿ,ಹನುಮಂತಪುರ ಸೇರಿದಂತೆ ಅಕ್ಕಪಕ್ಕದ ಗ್ರಾಮದಮಹಿಳೆಯರು, ಭೂಮಿ ಕಳೆದುಕೊಂಡವರು ಭಾಗವಹಿಸಿದ್ದರು.
ರೈತರ ಪಟ್ಟು, ವಾಗ್ವಾದ : ಎಸಿ ಯಾವುದೋ ಮೀಟಿಂಗ್‌ನಲ್ಲಿ ಬ್ಯುಸಿ ಇದ್ದಕಾರಣ ಕಚೇರಿಯ ಒಳಗಡೆ ಬಂದು ಮನವಿನೀಡಿ ಎಂದು ಸಿಬ್ಬಂದಿಗಳು ತಿಳಿಸಿದಾಗ ಆಕ್ರೋಶ ಗೊಂಡ ರೈತರು, ನಾವು ಎರಡು ಕಿ. ಮೀ. ಪಾದಯಾತ್ರೆ ಮಾಡಿ ಬಂದಿದ್ದೇವೆ. ಅಧಿಕಾರಿಗಳಾದನೀವು ಸೌಜನ್ಯಕ್ಕಾದರೂ ಬಂದು ನಮ್ಮ ಕಷ್ಟಅರ್ಥಮಾಡಿಕೊಳ್ಳದೇ ಕುಳಿತಲ್ಲಿಯೇ ಮಾತನಾಡುತ್ತಾರೆ. ಉಪವಿಭಾಗಾಧಿಕಾರಿಗಳು ಹೊರ ಗಡೆ ಬಂದು ಮನವಿ ತೆಗೆದುಕೊಳ್ಳುವವರೆಗೂನಾವು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.ನಂತರ ಉಪವಿಭಾಗಾಧಿಕಾರಿಗಳು ಬಂದು ಮನವಿ ಸ್ವೀಕರಿಸಿದರು.
ರೈತರನ್ನು ಒಕ್ಕಲೆಬ್ಬಿಸುವ ಕೆಲಸ : ಭಾರತೀಯ ಕೃಷಿಕ ಸಮಾಜದ ಗೌರವಾಧ್ಯಕ್ಷಪುಟ್ಟರಾಜು ಮಾತನಾಡಿ, ಉದ್ದೇಶ ಪೂರ್ವಕವಾಗಿಯೇ ರೈತರನ್ನು ಒಕ್ಕಲೆಬ್ಬಿಸುವ ಕೆಲಸಮಾಡಲಾಗುತ್ತಿದೆ. ರೈತರ ಜಮೀನಿನಲ್ಲಿ ಪವರ್‌ಸ್ಟೇಷನ್ ನಿರ್ಮಿಸಿ ವಿದ್ಯುತ್ ತಂತಿಗಳು ಹಾದುಹೋಗುವುದರಿಂದ ರೈತರು ಸಾವಿರಾರು ಎಕರೆಭೂಮಿಯನ್ನು ಕಳೆದುಕೊಳ್ಳಬೇಕಿದೆ. ರೈತಕುಟುಂಬಗಳು ಬೀದಿಗೆ ಬೀಳಲಿದ್ದು ನಮ್ಮ ಪ್ರಾಣಹೋದರೂ ಪರವಾಗಿಲ್ಲ ಭೂಮಿಯನ್ನುಬಿಟ್ಟುಕೊಡುವುದಿಲ್ಲ. ಬಂಜರು ಭೂಮಿ ಅಥವಾಜನರು ವಾಸಿಸುವ ಸ್ಥಳದಿಂದ ದೂರ ಇರುವ ಕಡೆಗೆ ಸ್ಟೇಷನ್ ವರ್ಗಾಯಿಸಬೇಕೆಂದು ಒತ್ತಾಯಿಸಿದರು.