ದೇವನಹಳ್ಳಿ: ರಾಗಿ ಖರೀದಿ, ಹಾಲಿನ ದರ ಏರಿಕೆ, ಕೃಷಿ ಕಾಯ್ದೆ ವಾಪಸಾತಿ ಮಾಡದ ರಾಜ್ಯ ಸರ್ಕಾರದ ವಿರೋಧಿ ನೀತಿ ಖಂಡಿಸಿ ತಾಲೂಕು ರೈತಸಂಘದವತಿಯಿಂದ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಪ್ರತಿಭಟನೆ ನಡೆಯಿತು.
ರೈತರ ವಿರೋಧಿ: ರಾಜ್ಯ ರೈತಸಂಘದ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ಈಗಾಗಲೇ ವಾಪಸ್ ಪಡೆದಿದೆ. ಕೃಷಿ ಕಾಯ್ದೆಹಿಂಪಡೆಯುವಂತೆ ಒತ್ತಾಯಿಸಿ ದೇಶಾದ್ಯಂತ ರೈತರುಒಂದೂವರೆ ವರ್ಷ ಪ್ರತಿಭಟನೆ ನಡೆಸಿದ ಪರಿಣಾಮಕೇಂದ್ರ ಸರ್ಕಾರ ಕಾಯ್ದೆಗಳನ್ನುಬೇಷರತ್ತಾಗಿಹಿಂಪಡೆಯಿತು. ಆದರೆ, ರಾಜ್ಯಸರ್ಕಾರ ಈಕಾಯ್ದೆಗಳನ್ನು ವಾಪಸ್ ಪಡೆಯದೆ ರೈತವಿರೋಧಿಧೋರಣೆ ಮುಂದುವರಿಸುತ್ತಿದೆ ಎಂದು ಹೇಳಿದರು.
ರಾಜ್ಯದ ಕೃಷಿ ಭೂಮಿಗೆ ತಿದ್ದುಪಡಿ ತಂದು ಬಂಡವಾಳ ಶಾಹಿಗಳ ಕೈಗೊಪ್ಪಿಸುವ, ಕೃಷಿ ಕಾಯ್ದೆತಿದ್ದುಪಡಿ ಮತ್ತು ಇಡೀ ದೇಶದ ಮಾರುಕಟ್ಟೆಯನ್ನುಖಾಸಗಿ ಕಂಪನಿಗಳ ಕೈವಶ ಮಾಡಲು ಹೊರಟಿರುವಎಪಿಎಂಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ ಎಂದು ದೂರಿದರು.
ಸಂಕಷ್ಟದ ಸ್ಥಿತಿ: ರಾಗಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿಯಲ್ಲಿ ತಾರತಮ್ಯ ಅನುಸರಿಸಿ ದೊಡ್ಡರೈತ, ಸಣ್ಣರೈತ ತಾಂತ್ರಿಕ ದೋಷಮುಂದಿಟ್ಟು ಈ ಯೋಜನೆಯಿಂದ ರೈತರನ್ನು ತಪ್ಪಿಸುವ ಹುನ್ನಾರ ನಡೆದಿದೆ. ಅಲ್ಲದೇ, ಹಾಲಿನಬೆಲೆಗೆ ಕಡಿವಾಣ ಹಾಕಿ ರೈತರನ್ನು ಸಂಕಷ್ಟಕ್ಕೆ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾನೂನಾಗಿ ಜಾರಿಗೊಳಿಸಿ: ತಾಲೂಕು ರೈತಸಂಘದ ಅಧ್ಯಕ್ಷ ಗಾರೆ ರವಿಕುಮಾರ್ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆಯಿಲ್ಲದೆ ಪರಿತಪಿಸುತ್ತಿದ್ದಾರೆ. ರೈತವಿರೋಧಿ ಸರ್ಕಾರಗಳಿಂದ ರೈತರು ತಮ್ಮ ಭೂಮಿ ಕಳೆದುಕೊಂಡುಬೀದಿಪಾಲಾಗುವ ಸ್ಥಿತಿ ಬಂದೊದಗಿದೆ. ರೈತರು ರಾಗಿಸೇರಿ ಎಲ್ಲಾ ಉತ್ಪನ್ನಗಳನ್ನು ಮಿತಿಯಿಲ್ಲದೆ ರೈತರಿಂದಖರೀದಿ ಮಾಡಲು, ಹಾಗೂ ಬೆಂಬಲ ಬೆಲೆ ಯೋಜನೆಯನ್ನು ಕಾನೂನಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಕಸಬಾ ಹೋಬಳಿ ರೈತಸಂಘದ ಅಧ್ಯಕ್ಷ ಮುನಿನಾರಾಯಣಪ್ಪ, ಹಸಿರು ಸೇನೆ ತಾಲೂಕು ಅಧ್ಯಕ್ಷ ಶಶಿಧರ್, ಸೋಲೂರು ರೈತ ಮುಖಂಡಚಿಕ್ಕೇಗೌಡ, ನವೀನ್, ಕಾನೂನು ಸಲಹೆಗಾರ ವಕೀಲಸಿದ್ಧಾರ್ಥ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷನಾರಾಯಣಸ್ವಾಮಿ, ಅಪ್ಪಯ್ಯಣ್ಣ, ಹಸಿರು ಸೇನೆಜಿಲ್ಲಾಧ್ಯಕ್ಷ ಪ್ರಕಾಶ್, ತಾಲೂಕು ಗೌರವಾಧ್ಯಕ್ಷಹನುಮಂತರಾಯಪ್ಪ, ಸಂಚಾಲಕ ಕೋಡಗುರ್ಕಿಕೃಷ್ಣಪ್ಪ, ಕುಂದಾಣ ಹೋಬಳಿ ಅಧ್ಯಕ್ಷ ರಾಮಾಂಜಿನಪ್ಪ,ಉಪಾಧ್ಯಕ್ಷ ಕೃಷ್ಣಪ್ಪ, ಕಸಬಾ ಹೋಬಳಿ ಕಾರ್ಯದರ್ಶಿ ಅಪ್ಪಾಜಿ ಮತ್ತಿತರರು ಉಪಸ್ಥಿತರಿದ್ದರು.