ಮಾಲೂರು: ಕಳೆದ ಎರಡು ತಿಂಗಳುಗಳಿಂದ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಪರಿಗಣಿಸದೆ ರೈತ ವಿರೋಧಿ ನೀತಿ ಮತ್ತು ಕೃಷಿ ನೀತಿ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯ ಕರ್ತರು ಪಟ್ಟಣದ ಬಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಮುನಿಸ್ವಾಮಿ ಗೌಡ ನೇತೃತ್ವದಲ್ಲಿ ಸಂಘಟಿತರಾದ ಕಾರ್ಯಕರ್ತರು ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀತಿ ಖಂಡಿಸಿದರು.
ದೆಹಲಿಯಲ್ಲಿ ನಡೆಸುತ್ತಿರುವ ರೈತ ಪ್ರತಿಭಟನೆ ಹತ್ತಿಕ್ಕುವ ಉದ್ದೇಶದಿಂದ ಕೇಂದ್ರ ಸರ್ಕಾರ ರೈತರ ಮೇಲೆ ಪೊಲೀಸ್ ಹಾಗೂ ಸೇನಾ ಪಡೆಯ ಬಲ ಪ್ರಯೋಗ ಮಾಡಲು ಸಜ್ಜಾಗಿದ್ದು, ಆಡಳಿತಾರೂಢ ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ದೂರಿದರು. ಪ್ರತಿಭಟನೆ ನಂತರ ಪೊಲೀಸ್ ಇಲಾಖೆಯ ಮೂಲಕ ಸರ್ಕಾರಕ್ಕೆ ಮನವಿ ರವಾನಿಸಿದರು.
ಇದನ್ನೂ ಓದಿ :ಗೇರು ಕೃಷಿಯಲ್ಲಿ ಕಂಡುಬರುವಂತಹ ಚಹಾ ಸೊಳ್ಳೆ ರೋಗದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ,
ಪ್ರತಿಭಟನೆಯಲ್ಲಿ ಕೆಪಿಆರ್‌ಎಸ್‌ನ ಮುನಿ ಸ್ವಾಮಿ ಗೌಡ ವೆಂಕಟಪ್ಪ, ಸಿಪಿಎಂನ ವೆಂಕಟಾ ಚಲಪತಿ, ರೈತ ಸಂಘದ ನರಸಿಂಹಯ್ಯ, ಕೋಡೂರು ಗೋಪಾಲಯ್ಯ, ಎಂ.ಗೌಡ ಮತ್ತಿತರರು ಭಾಗವಹಿಸಿದ್ದರು.