Advertisement

ಮುಂಗಾರು ಬಿತ್ತನೆಗೆ ರೈತರು ಸಜ್ಜು

01:18 PM May 22, 2018 | |

ಯಾದಗಿರಿ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಕೆಲವೇ ದಿನ ಬಾಕಿ ಉಳಿದಿದ್ದು, ಈಗಾಗಲೇ ಜಿಲ್ಲಾದ್ಯಂತ ರೈತರು ಭೂಮಿ ಹದಮಾಡಿ ಬಿತ್ತನೆಗೆ ಸಜ್ಜುಗೊಂಡಿದ್ದಾರೆ. ಯಾದಗಿರಿ, ಸುರಪುರ, ಶಹಾಪುರ ಹಾಗೂ ಗುರುಮಠಕಲ್‌ ಮತಕ್ಷೇತ್ರದ ಬಳಗೇರಾ, ಮುಂಡರಗಿ, ಬಳಿಚಕ್ರ, ಸೈದಾಪುರ, ದೋರನಳ್ಳಿ, ಖಾನಾಪುರ, ವಡಗೇರಾ, ಹತ್ತಿಕುಣಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಈಗಾಗಲೇ ರೈತರು ಭೂಮಿ ಹದ ಮಾಡಿ ಬಿತ್ತನೆಗೆ ಸಕಲ ಸಿದ್ಧತೆ ಮಾಡಿಕೊಂಡು ಮಳೆಗಾಗಿ ಕಾಯುತ್ತಿದ್ದಾರೆ.

Advertisement

ಪ್ರಸಕ್ತ ಸಾಲಿನಲ್ಲಿ ಕೃಷಿ ಇಲಾಖೆ ಮುಂಗಾರು ಹಂಗಾಮಿನಲ್ಲಿ ಯಾದಗಿರಿ 71,650 ಶಹಾಪುರ 99,940 ಸುರಪುರ ತಾಲೂಕಿನಲ್ಲಿ 97,602 ಸೇರಿದಂತೆ ಜಿಲ್ಲಾದ್ಯಂತ 2,69,192 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹಾಕಿಕೊಂಡಿದೆ. ಅದರಲ್ಲಿ ಭತ್ತ, ಜೋಳ ಮೆಕ್ಕೆ ಜೋಳ, ಸಜ್ಜೆ ಸೇರಿದಂತೆ ಇತರೆ ತೃಣ ಧಾನ್ಯಗಳನ್ನು ನೀರಾವರಿ ಕ್ಷೇತ್ರದಲ್ಲಿ 57,250 ಹೆಕ್ಟೇರ್‌ ಪ್ರದೇಶ ಹಾಗೂ ಖುಷ್ಕಿ ಪ್ರದೇಶದಲ್ಲಿ 24,000 ಸೇರಿದಂತೆ ಒಟ್ಟು 81,250 ಹೆಕ್ಟರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ಹೊಂದಲಾಗಿದೆ.

ತೊಗರಿ, ಹೆಸರು, ಅವರೆ, ಮಟಕಿ, ಹುರುಳಿ, ಉದ್ದು ಸೇರಿದಂತೆ ಇತರೆ ದ್ವಿದಳ ಧಾನ್ಯಗಳು ನೀರಾವರಿ ಕ್ಷೇತ್ರದಲ್ಲಿ
8400 ಹೆಕ್ಟರ್‌, ಖುಷ್ಕಿಯಲ್ಲಿ 84,150 ಹೆಕ್ಟರ್‌ ಸೇರಿದಂತೆ ಒಟ್ಟು 92,550 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಶೇಂಗಾ, ಎಳ್ಳು, ಸೂರ್ಯಕಾಂತಿ, ಗುರೆಳ್ಳು, ಸಾಸಿವೆ, ಕುಸುಬಿ ಸೇರಿದಂತೆ ಎಣ್ಣೆಕಾಳು ಬೆಳೆಗಳು ನೀರಾವರಿ ಕ್ಷೇತ್ರದಲ್ಲಿ 5,800 ಹೆಕ್ಟೇರ್‌ ಪ್ರದೇಶ, ಖುಷಿ ಪ್ರದೇಶದಲ್ಲಿ 31,180 ಸೇರಿದಂತೆ ಒಟ್ಟು 36,980 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲು ಗುರಿ ಹೊಂದಿದೆ.

ಹತ್ತಿ, ಕಬ್ಬು ಸೇರಿದಂತೆ ವಾಣಿಜ್ಯ ಬೆಳೆಗಳನ್ನು ನೀರಾವರಿ ಕ್ಷೇತ್ರದಲ್ಲಿ 38,412 ಹೆಕ್ಟೇರ್‌ ಪ್ರದೇಶ, ಖುಷ್ಕಿ ಪ್ರದೇಶದಲ್ಲಿ 20,000 ಸೇರಿದಂತೆ ಜಿಲ್ಲಾದ್ಯಂತ ಒಟ್ಟು 58412 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲು ನಿರ್ಧರಿಸಲಾಗಿದೆ.

ಮುಂಗಾರು ಹಂಗಾಮಿನಲ್ಲಿ ಜಿಲ್ಲಾದ್ಯಂತ ಭತ್ತ 55 ಸಾವಿರ ಹೆಕ್ಟೇರ್‌ ಪ್ರದೇಶ, ತೊಗರಿ 57,600 ಹೆಕ್ಟೇರ್‌ ಪ್ರದೇಶ, ಹತ್ತಿ 55,000 ಹೆಕ್ಟೇರ್‌ ಪ್ರದೇಶದಲ್ಲಿ ಈ ಮೂರು ಬೆಳೆಗಳನ್ನು ಅತೀ ಹೆಚ್ಚು ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

Advertisement

ಕಳೆದ ವರ್ಷ ಜಿಲ್ಲೆಯಾದ್ಯಂತ ಒಟ್ಟು 2,69,174 ಹೆಕ್ಟೇರ್‌ ಪ್ರದೇಶದಲ್ಲಿ 2,17,800 ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಶೇ. 80.91ರಷ್ಟು ಬಿತ್ತನೆಯಾತ್ತು. ಪ್ರತಿ ವರ್ಷ ಬರಗಾಲದಿಂದ ತತ್ತರಿಸಿರುವ ರೈತರು ಹೊಸ ಉತ್ಸಾಹದೊಂದಿಗೆ ಭೂಮಿ ಹದ ಮಾಡಿಕೊಂಡು ಬಿತ್ತನೆಗೆ ಮುಂದಾಗಿದ್ದಾರೆ. ಈ ವರ್ಷ ಉತ್ತಮ ಮಳೆಯಾಗಿ ಕೃಷಿಕರ ಕೈಯನ್ನು ವರುಣ ದೇವ ಹಿಡಿಯುವವನೇ ಕಾಯ್ದು ನೋಡಬೇಕಿದೆ.

ಮುಂಗಾರು ಹಂಗಾಮಿಗೆ ಕೆಲವೇ ದಿನ ಬಾಕಿ ಉಳಿದಿದ್ದು, ಈಗಾಗಲೇ ಭೂಮಿ ಹದ ಮಾಡಿಕೊಳ್ಳುತ್ತಿದ್ದೇವೆ. ನಾಲ್ಕು ಎಕರೆ ಜಮೀನು ಹೊಂದಿದ್ದು, ತೊಗರಿ ಬೆಳೆಯುವ ನಿರ್ಧಾರ ಮಾಡಿದ್ದೇನೆ.
 ಶರಣಪ್ಪಗೌಡ, ಬಂದಳ್ಳಿ ರೈತ 

ಜಿಲ್ಲಾದ್ಯಂತ ರೈತರು ಭೂಮಿ ಹದಮಾಡುತ್ತಿದ್ದು, ಕೃಷಿ ಇಲಾಖೆ ಸಹ ಮುಂಗಾರು ಹಂಗಾಮಿಗಾಗಿ ಜಿಲ್ಲೆಗೆ ಬೇಕಾಗುವ ಬೀಜ, ರಸಗೊಬ್ಬರ ದಾಸ್ತಾನು ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮಂಗಳವಾರ ಸಭೆ ಕರೆಯಲಾಗಿದೆ.
 ರಾಜಕುಮಾರ, ಕೃಷಿ ಅಧಿಕಾರಿ ಯಾದಗಿರಿ

Advertisement

Udayavani is now on Telegram. Click here to join our channel and stay updated with the latest news.

Next