Advertisement

ರೈತರು ಸಂಘಟಿತರಾಗಿ ಸೌಲಭ್ಯ ಬಳಸಿಕೊಳ್ಳಿ

12:04 PM Feb 24, 2017 | Team Udayavani |

ತಿ.ನರಸೀಪುರ: ರೈತರು ಸಂಘಟಿತರಾಗುವ ಮೂಲಕ ತಮಗೆ ಸಿಗಬೇಕಾದ ಸರ್ಕಾರದ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಹೇಳಿದರು.

Advertisement

ರಾಜ್ಯ ರೈತ ಸಂಘದ ವತಿಯಿಂದ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಸ್ಥಾಪಿಸಲ್ಪಟ್ಟ ಗ್ರಾಮ ಘಟಕ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.ರೈತರಲ್ಲಿನ ಒಗ್ಗಟ್ಟಿನ ಕೊರತೆಯಿಂದಾಗಿ 35 ವರ್ಷಗಳ ಅವಧಿಯಲ್ಲಿ ಸರ್ಕಾರಗಳು ರೈತ ಪರ ಕೆಲಸ ನಿರ್ವಹಿಸುತ್ತಿಲ್ಲ ಎಂದು ದೂರಿದರು.

ರಾಜ್ಯದಲ್ಲಿ ರೈತ ಬೆಳೆದ ಬೆಳೆಗಳಿಗೆ ವೈಜಾnನಿಕ ಬೆಲೆ ಸಿಗುತ್ತಿಲ್ಲ. ರೈತರು ಬೆಳೆದಂತಹ ಬೆಳೆ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಇಲ್ಲದ ಕಾರಣ ದಿನದಿಂದ ದಿನಕ್ಕೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿ ರೈತರ ಬೆಳೆಗೆ ಸೂಕ್ತ ಬೆಲೆ ಇಲ್ಲದೆ ರೈತರು ಸಂಕಷ್ಟ ಎದುರಿಸುವಂತಾಗಿದೆ. ರಾಜ್ಯದಲ್ಲಿ ಬರಗಾಲ ಕೂಡ ಆವರಿಸಿದೆ ಎಂದು ತಿಳಿಸಿದರು.

ಈಗಾಗಲೇ ಸಾಕಷ್ಟು ರೈತರು ಆತ್ಮಹತ್ಯೆ ಶರಣಾಗಿದ್ದರೂ ಸರ್ಕಾರಗಳು ಕಾಳಜಿ ತೋರುತ್ತಿಲ್ಲ, ರೈತರು ಪ್ರತಿಯೊಂದು ಗ್ರಾಮಮಟ್ಟದಲ್ಲಿ ಸಂಘಟನೆಯ ಮಾಡಿ ನಿರಂತರವಾಗಿ ಹೋರಾಟ ನಡೆಸಿ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಗ್ರಾಮದಲ್ಲಿ ನೂರಕ್ಕೂ ಹೆಚ್ಚು ರೈತರು ರಾಜ್ಯ ರೈತ ಸಂಘಕ್ಕೆ ಸೇರ್ಪಡೆಗೊಂಡರು.

ಗ್ರಾಮದಲ್ಲಿ ನೂತನ ಗ್ರಾಮ ಘಟಕದ ನಾಮಫ‌ಲಕವನ್ನು ರಾಜ್ಯ ವರಿಷ್ಠ ಅಶ್ವತ್ಥರಾಜೇಅರಸ್‌ ಅನಾವರಣ ಗೊಳಿಸಿದರು. ರಾಜ್ಯ ವರಿಷ್ಠ ಕೆ.ಎಂ. ಪುಟ್ಟಸ್ವಾಮಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸರಗೂರು ನಟರಾಜು, ಜಿಲ್ಲಾ ಉಪಾಧ್ಯಕ್ಷ ಕೆ.ಜಿ.ಶಿವಪ್ರಸಾದ್‌, ಗ್ರಾಮ ಘಟಕದ ಅಧ್ಯಕ್ಷ ಶಿವರುದ್ರಪ್ಪ, ಪ್ರಧಾನ ಕಾರ್ಯದರ್ಶಿ ಗುರು ಮೂರ್ತಿ, ಉಪಾಧ್ಯಕ್ಷ ನಾಗರಾಜು, ರವಿಕುಮಾರ್‌, ರವಿಚಂದ್ರ,ಕುಮಾರ್‌, ಬಿ.ಪಿ. ಶಿವಸ್ವಾಮಿ, ಮೈಕ್‌ ಮಹಾಲಿಂಗಪ್ಪ, ಅತ್ತಹಳ್ಳಿ ಶಿವನಂಜು, ಬನ್ನೂರು ಹುಚ್ಚೇಗೌಡ, ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next