Advertisement

ಕಸ ವಿಲೇವಾರಿ ಘಟಕಕ್ಕೆ ರೈತರ ವಿರೋಧ

12:37 PM Sep 25, 2020 | Suhan S |

ಕನಕಪುರ: ಕೃಷಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗುತ್ತಿರುವ ಕಸ ವಿಲೇವಾರಿ ಘಟಕ ನಿರ್ಮಾಣ ತಡೆಯಲು ಬಂದ ರೈತರ ಮೇಲೆ ಕೆಲವು ರಾಜಕಾರಣಿಗಳು ದಬ್ಟಾಳಿಕೆ ನಡೆಸುತ್ತಿದ್ದಾರೆ ಎಂದು ಸ್ಥಳಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಸಾತನೂರು ಹೋಬಳಿ ಸೂರನಹಳ್ಳಿ ಗ್ರಾಮದ ಸರ್ವೆ ನಂ.17ರ ಬಳಿ ಇರುವ ಬಾಪೂಜಿ ಕಾಲೋನಿ ಬಳಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಕಾಮಗಾರಿ ಆರಂಭಿಸುತ್ತಿದ್ದಂತೆ ಸ್ಥಳಕ್ಕೆ ಬಂದ ರೈತರು ಪ್ರತಿಭಟನೆ ಆರಂಭಿಸಿದರು.

ಪ್ರಭಾವಿ ರಾಜಕಾರಣಿಗಳ ಬೆಂಬಲವಿದೆ ಎಂದು ಸ್ಥಳಿಯ ರಾಜಕಾರಣಿಗಳು ಬಡವರಕೃಷಿ ಭೂಮಿಯಲ್ಲಿಕಸ ವಿಲೇವಾರಿ ಘಟಕ ನಿರ್ಮಿಸಿ ನಮ್ಮ ಜೀವನಕ್ಕೆ ಆಧಾರವಾಗಿರುವ ಕೃಷಿ ಭೂಮಿ ಕಿತ್ತುಕೊÙಲು ‌Û ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

ಇಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಯಾದರೆ, ಸುತ್ತಮುತ್ತಲ ಕೆರೆಕುಂಟೆಗಳು ಮಲೀನವಾಗುತ್ತವೆ.ಈ ಕಸವಿಲೇವಾರಿಘಟಕ ಸ್ಥಾಪಿಸಲು ಮುಂದಾಗಿರುವ ಜಮೀನಿನ ಪಕ್ಕದಲೇ ಆನೇಕ ಗ್ರಾಮಗಳಿಗೆ ಸಂಪರ್ಕ ಕಲಿಸುವ ರಸ್ತೆ ಇದೆ. ಪುಣ್ಯ ಪ್ರಸಿದ್ಧ ಕಬ್ಟಾಳಮ್ಮನ ದೇವಾಲಯಕ್ಕೆ ಬರುವ ಬರುವ ಭಕ್ತರಿಗೂ ಇದರಿಂದ ತೊಂದರೆ ತಪ್ಪಿದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಅನುಮೋದನೆ ಪಡೆದು ಪ್ರಸ್ತುತ ಘಟಕವನ್ನು ಹೊಸಕಬ್ಟಾಳು ಗ್ರಾಮದ ಸರ್ವೆ ನಂ.26ರ ಜಾಗದಲ್ಲಿ ಘಟಕ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಅಲ್ಲಿನ ಸ್ಥಳಿಯ ಜನರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲ್ಲಿ ಕಾಮಗಾರಿ ನಡೆಸಲು ಬಂದಿದ್ದಾರೆ. ಕಾಮಗಾರಿ ಆರಂಭಕ್ಕೂ ಮುನ್ನ ಇಲ್ಲಿನ ಸಾಧಕ ಬಾಧಕಗಳನ್ನು ತಿಳಿಯದೆ ಘಟಕ ಸ್ಥಾಪಿಸಲು ಮುಂದಾಗಿರುವುದು ಸರಿಯಲ್ಲ. ರೈತ ವಿರೋಧಿ ಕಾಮಗಾರಿಯನ್ನು ನಿಲ್ಲಿಸದಿದ್ದರೆ, ವಿಧಾನಸೌಧ ಹಾಗೂ ಕಂದಾಯ ಸಚಿವರ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದರು.

Advertisement

ಪ್ರತಿಭಟನೆಯಲ್ಲಿ ಬಸವೇಗೌಡ, ಸೋಮಶೇಖರ್‌, ಗೌರಮ್ಮ, ಭಾಗ್ಯ ಶಿವಶಂಕರ್‌, ಶಿವಮ್ಮಬೋರೇಗೌಡ,ಭಾಗ್ಯಮ್ಮ ತಮ್ಮಯ್ಯ, ಪ್ರಭು, ಪ್ರಶಾಂತ್‌, ಗ್ರಾಪಂ ಮಾಜಿ ಸದಸ್ಯ ಸಿದ್ದರಾಜು, ಮಲ್ಲೇಶ್‌, ಮಲ್ಲಿಕಾರ್ಜುನ್‌ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next