Advertisement

ಬೈಪಾಸ್‌ ಕಾಮಗಾರಿಗೆ ರೈತರ ವಿರೋಧ

04:49 PM Feb 10, 2021 | Team Udayavani |

ಬೆಳಗಾವಿ: ಇಲ್ಲಿಯ ಹಲಗಾ-ಮಚ್ಛೆ ಬೈಪಾಸ್‌ ರಸ್ತೆ ಕಾಮಗಾರಿ ನಡೆಸಲು ಮುಂದಾದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ತೀವ್ರ ವಿರೋಧವ್ಯಕ್ತಪಡಿಸಿರುವ ರೈತರು ಜೆಸಿಬಿ ಎದುರು ಮಲಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಹಲಗಾ-ಮಚ್ಛೆ ಬೆ„ಪಾಸ್‌ ರಸ್ತೆಯನ್ನು ವಿರೋಧಿಸಿ ರೈತರು ಕೋರ್ಟ್‌ ಮೆಟ್ಟಿಲೇರಿದರೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮಾತ್ರ ಇದನ್ನುಲೆಕ್ಕಿಸದೇ ಮಂಗಳವಾರ ಬೆಳಗ್ಗೆ ರಸ್ತೆಕಾಮಗಾರಿಗೆ ಮುಂದಾಗಿದ್ದು, ಮಚ್ಛೆಬಳಿಯ ಹೊಲದಲ್ಲಿ ಜೆಸಿಬಿಯಿಂದಕಾಮಗಾರಿ ನಡೆಸುತ್ತಿದ್ದಂತೆ ರೈತರು ಜೆಸಿಬಿ ವಾಹನಗಳ ಎದುರು ಮಲಗಿ ಪ್ರಾಧಿಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಮಗಾರಿ ನಡೆಸುವುದಾದರೆ ಮೊದಲು ನಮ್ಮ ಮೇಲೆ ಹಾಯಿಸಿ, ಪ್ರಾಣ ತೆಗೆದ ಬಳಿಕ ಕಾಮಗಾರಿ ಮುಂದುವರಿಸುವಂತೆ ಹೇಳಿ ರಸ್ತೆ ಮೇಲೆ ಮಲಗಿ ಘೋಷಣೆಕೂಗಿದರು. ನಂತರ ಸ್ಥಳಕ್ಕೆ ಬಂದುಪೊಲೀಸರು ರೈತರ ಮನವೊಲಿಸಲು ಯತ್ನಿಸಿದರೂ ಪಟ್ಟು ಬಿಡದೇ ಪ್ರತಿಭಟನೆ ಮುಂದುವರಿಸಿದರು.

ಬೈಪಾಸ್‌ ರಸ್ತೆ ಮೇಲೆ ಯಾವುದೇ ಕಾರಣಕ್ಕೂ ಕೆಲಸ ನಡೆಸದಂತೆ ಕೋರ್ಟ್‌ ಆದೇಶವಿದ್ದರೂ ಪ್ರಾಧಿಕಾರ ಸುಳ್ಳು ಮಾಹಿತಿ ನೀಡುತ್ತಿದೆ. ಕೋರ್ಟ್‌ ತಡೆಯಾಜ್ಞೆ ತೆರವುಗೊಳಿಸಿರುವುದಾಗಿ ಸುಳ್ಳು ಮಾಹಿತಿ ನೀಡಿ ಪ್ರಾ ಧಿಕಾರದ ಅಧಿಕಾರಿಗಳು ಹಾಗೂಸಿಬ್ಬಂದಿ ಕಾಮಗಾರಿ ನಡೆಸುತ್ತಿರುವುದಕ್ಕೆ ತರಾಟೆಗೆತೆಗೆದುಕೊಂಡರು.

ಅಪಾರ ಸಂಖ್ಯೆಯಲ್ಲಿ ಸೇರಿದ ಈ ಭಾಗದ ರೈತರು ಪ್ರಾಧಿಕಾರ ವಿರುದ್ಧ ಘೋಷಣೆ ಕೂಗಿದರು. ನಂತರ ಮಚ್ಛೆಬಳಿಯೇ ಮಂಟಪ ಹಾಕಿ ಅಲ್ಲಿಯೇಠಿಕಾಣಿ ಹೂಡಿದ್ದಾರೆ. ಬೆಳಗ್ಗೆಯಿಂದ ಪ್ರತಿಭಟನೆ ನಡೆಸಿ ಮಧ್ಯಾಹ್ನ ಅಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿದರು.ಅಹೋರಾತ್ರಿ ಧರಣಿ ಆರಂಭಿಸುತ್ತಿದಂತೆ ಪ್ರಾಧಿಕಾರದ ಜೆಸಿಬಿ ವಾಹನಗಳು ಅಲ್ಲಿಂದ ಕಾಲ್ಕಿತ್ತಿವೆ. ರೈತ ಮುಖಂಡರಾದ ರಾಜು ಮರವೆ, ಪ್ರಕಾಶ ನಾಯಕ, ಹನುಮಂತ ಬಾಳೇಕುಂದ್ರಿ, ಜಯಶ್ರೀ ಗುರನ್ನವರ, ಉಮೇಶ ಬಿರ್ಜೆ, ತಾನಾಜಿ ಹಲಗೇಕರ, ಭೈರು ಕಂಗ್ರಾಳಕರ, ಅನಿಲ್‌ ಅನಗೋಳಕರ, ಮನೋಹರ ಕಂಗ್ರಾಳಕರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next