Advertisement

ಭೂಮಿ ಕೊಟ್ಟು 20 ವರ್ಷವಾದ್ರೂ ರೈತರಿಗೆ ಪರಿಹಾರ ನೀಡಿಲ್ಲ

01:56 PM Mar 14, 2021 | Team Udayavani |

ಅರಕಲಗೂಡು: ತಾಲೂಕಿನ ಏತ ನೀರಾವರಿ ಯೋಜನೆಗಳಿಂದ ಭೂಮಿ ಕಳೆದುಕೊಂಡರೈತರಿಗೆ ಪರಿಹಾರ ಕೊಡಿಸುವಂತೆ ಒತ್ತಾಯಿಸಿ ಜಿಪಂ ಸದಸ್ಯೆ ರತ್ನಮ್ಮ ಲೋಕೇಶ್‌ ಶಾಸಕರಿಗೆ ಮನವಿ ಸಲ್ಲಿಸಿದರು.

Advertisement

ತಾಪಂ ಆವರಣದಲ್ಲಿ ಶಾಸಕ ಎ.ಟಿ. ರಾಮಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಅವರು, ಅಡಕೆ ಬೊಮ್ಮನಹಳ್ಳಿ, ಹುಚ್ಚನಕೊಪ್ಪಲು, ಏತ ನೀರಾವರಿ ಯೋಜನೆಗೆರೈತರ ಭೂಮಿಯನ್ನು ವಶಪಡಿಸಿಕೊಂಡು 20 ವರ್ಷ ಕಳೆದರೂ ಪರಿಹಾರ ನೀಡದೆ ಅನ್ಯಾಯ ಮಾಡಲಾಗುತ್ತಿದೆ. ಅಧಿಕಾರಿಗಳನ್ನು ಪ್ರಶ್ನಿಸಿದರೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಸಬೂಬನ್ನುನೀಡುತ್ತಾರೆ. ಸರ್ಕಾರವನ್ನು ವಿಚಾರಿಸಿದರೆಸಂಬಂಧಿಸಿದ ಇಲಾಖೆಯಿಂದ ಪೂರಕದಾಖಲೆಗಳು ಬಂದಿಲ್ಲವೆಂಬ ಉತ ¤ರ ನೀಡುತ್ತಾರೆ.ಇವರ ನಡುವೆ ರೈತ ಬಲಿಪಶುವಾಗುತ್ತಿದ್ದಾರೆ.ಆದ್ದರಿಂದ ತಾವು ವಿಧಾನಸಭಾ ಅಧಿವೇಶನದಲ್ಲಿಚರ್ಚಿಸಿ ರೈತರಿಗೆ ನ್ಯಾಯ ದೊರಕಿಸುವಂತೆ ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶಾಸಕರು, ಈ ವಿಷಯದಲ್ಲಿ ಸಿಎಂ, ಸಂಬಂಧಿಸಿದ ಇಲಾಖಾಮುಖ್ಯಸ್ಥರೊಂದಿಗೆ ಚರ್ಚಿಸಲಾಗಿದೆ. ರೈತರುನೀಡುವ ದಾಖಲೆಗಳಲ್ಲಿ ಲೋಪವಾಗಿದೆ ಎಂದುಉತ್ತರಿಸುತ್ತಾರೆ. ಆದ್ದರಿಂದ ಅರಕಲಗೂಡುಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದು, ಪರಿಹಾರಕ್ಕೆ ದಾಖಲೆಗಳನ್ನು ನೀಡದೆ ಇರುವ ರೈತರಿಂದ ಪಡೆದು ತಕ್ಷಣದಲ್ಲೇ ಸರ್ಕಾರಕ್ಕೆ ಕಳುಹಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ನಾಲೆ ಮುಚ್ಚಬೇಡಿ: ಪರಿಹಾರ ಬಂದಿಲ್ಲವೆಂಬ ಕಾರಣಕ್ಕೆ ಕೆಲ ರೈತರು ತಮ್ಮ ಜಮೀನಿನಲ್ಲಿ ಹಾದು ಹೋಗಿರುವ ನಾಲೆಗಳನ್ನು ಮುಚ್ಚುವ ಕಾರ್ಯಕೆ Rಮುಂದಾಗುತ್ತಿದ್ದಾರೆ ಎಂಬುವುದು ತಿಳಿದುಬಂದಿದೆ. ಇದು ಸರಿಯಾದ ಮಾರ್ಗವಲ್ಲ,ಒಂದು ವೇಳೆ ನಾಲೆಯನ್ನು ಮುಚ್ಚಿದರೆಮುಂದಿನ ಕೆರೆಗಳಿಗೆ ನೀರು ತುಂಬಿಸುವುದುಕಷ್ಟವಾಗುತ ¤ದೆ. ನಿಮಗೆ ಪರಿಹಾರವನ್ನುಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ.ತಾವು ಸಮರ್ಪಕ ದಾಖಲೆಗಳನ್ನು ಸಂಬಂಧಿಸಿದಇಲಾಖೆಗೆ ನೀಡುವಂತೆ ಮನವಿ ಮಾಡಿದರು. ಮನವಿ ಸ್ವೀಕರಿಸಿದ ನಂತರ ಶಾಸಕರು, ರಾಜ್ಯ ಮತ್ತು ಕೇಂದ್ರದಲ್ಲಿ ತಮ್ಮ ಪಕ್ಷವೇಆಡಳಿತದಲ್ಲಿದೆ. ತಾವೇ ತಮ್ಮ ಪಕ್ಷದ ಮುಖಂಡರಮನವಿ ಮಾಡಿ, ರೈತರಿಗೆ ನ್ಯಾಯದೊರಕಿಸಬಹುದಲ್ಲವೇ ಎಂದು ತಿಳಿಸುವ ಮೂಲಕ ರತ್ನಮ್ಮಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next