Advertisement

‘ರೈತರು ಸವಲತ್ತುಗಳನ್ನು ಸದುಪಯೋಗಿಸಿ’

12:12 AM Jul 28, 2019 | sudhir |

ಉಡುಪಿ: ರೈತರು ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸವಲತ್ತುಗಳನ್ನು ಉಪ ಯೋಗಿಸಿಕೊಳ್ಳಬೇಕು. ಸಹಕಾರ ಸಂಘಗಳಲ್ಲಿ ಸಿಗುವ ಬಡ್ಡಿರಹಿತ ಸಾಲಗಳ ಪ್ರಯೋಜನವನ್ನು ಪಡೆಯುವಂತೆ ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ಹೇಳಿದರು.

Advertisement

ಜಿಲ್ಲಾ ಕೃಷಿಕ ಸಂಘದ ಆಶ್ರಯದಲ್ಲಿ ಉಡುಪಿ ರೆಸಿಡೆನ್ಸಿ ಸಭಾಂಗಣದಲ್ಲಿ ಶನಿವಾರ ನಡೆದ ‘ಕೃಷಿ ಮಾಹಿತಿ ಶಿಬಿರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಿಸಾನ್‌ ಸಮ್ಮಾನ್‌ ಯೋಜನೆಯನ್ನು ಎಲ್ಲ ರೈತರು ನೋಂದಾಯಿಸಿಕೊಳ್ಳುವಂತೆ ಕರೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಇದರಿಂದ ಬಹಳಷ್ಟು ಅನುಕೂಲ ಆಗಲಿದೆ ಎಂದರು.

ಸವಲತ್ತುಗಳನ್ನು ಉಪಯೋಗಿಸಿ

ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದೆ. ರೈತರು ಸುಲಭ ಸಹಜ ಕೃಷಿಗಳಾದ ಮಾವು, ತೆಂಗು, ಅಡಿಕೆ ಬೆಳೆಗಳತ್ತ ಮನಸ್ಸು ಮಾಡಬೇಕು. ಕೃಷಿ ಇಲಾಖೆಯಲ್ಲಿ ಲಭ್ಯವಿರುವ ಸವಲತ್ತುಗಳನ್ನು ಉಪಯೋಗಿಸಿಕೊಳ್ಳಬೇಕು ಎಂದರು.

Advertisement

ಜಲಜಾಗೃತಿ ಅಗತ್ಯ

ಪ್ರತೀ ಮನೆಯಲ್ಲೂ ಕೊಳವೆಬಾವಿಗೆ ನೀರಿಂಗಿ ಸುವ ಕೆಲಸ ಆಗಬೇಕು. ಈ ರೀತಿಯ ಸರಳ ವಿಧಾನಗಳನ್ನು ಅನುಸರಿಸುವುದರಿಂದ ನೀರಿನ ಬವಣೆ ನಿವಾರಣೆಯಾಗಲಿದೆ. ಜಲಜಾಗೃತಿ ಮಾಡುವುದ ರಿಂದ ಕೃಷಿ ಕ್ಷೇತ್ರವೂ ಅಭಿವೃದ್ಧಿಯಾಗಲಿದೆ. ಸರಕಾರಿ ಯೋಜನೆಗಳನ್ನು ಬಳಸುವಲ್ಲಿ ಹಿಂದೇಟು ಹಾಕುತ್ತಿರು ವುದು ಕೂಡ ನಾವು ಕೃಷಿ ಚಟುವಟಿಕೆಯಲ್ಲಿ ಹಿಂದುಳಿಯಲು ಕಾರಣ ಎಂದರು.

ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿ

ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಮಾತನಾಡಿ, ಕೃಷಿಕ ಸಂಘದ ಮೂಲಕ ಜಿಲ್ಲೆಯ ರೈತರಿಗೆ ಮಾಹಿತಿ ನೀಡುವ ಕೆಲಸ ಆಗುತ್ತಿದೆ. ರೈತರು ಶೇ.100ರಷ್ಟು ವೈಜ್ಞಾನಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು. ಹೊಸ ಕೃಷಿ ಪದ್ಧತಿಗಳತ್ತ ಮನಸ್ಸು ಮಾಡಬೇಕು. ಕೃಷಿಯ ಬಗ್ಗೆ ಪ್ರತೀ ಗ್ರಾಮ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸುವ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟಕ್ಕೆ ಅತೀ ಹೆಚ್ಚು ಪ್ರಾಮುಖ್ಯತೆ ಇದ್ದು, ರೈತರಿಗೆ ಸಮಯಪ್ರಜ್ಞೆ ಅತೀ ಅಗತ್ಯ. ಒಗ್ಗಟ್ಟಿನಿಂದ ಹೋರಾಡುವ ಮೂಲಕ ರೈತರು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಿದೆ ಎಂದರು.
ಬೆಳೆ ವಿಮೆ ಮಾಡಿಕೊಳ್ಳಿ

ತೋಟಗಾರಿಕೆ ಇಲಾಖೆಯ ಅಧಿಕಾರಿ ದೀಪಾ ಮಾತನಾಡಿ, ರೈತರು ಬೆಳೆದ ಬೆಳೆಗಳಿಗೆ ಕಡ್ಡಾಯವಾಗಿ ಬೆಳೆ ವಿಮೆ ಮಾಡಿಕೊಳ್ಳಬೇಕು. ಮಳೆಬರುವಂತಹ ಸಮಯದಲ್ಲಿ ನೀರಿಂಗಿಸುವ ಕೆಲಸ ಮಾಡಿದರೆ ಬೇಸಗೆಯಲ್ಲಿ ಉದ್ಭವಿಸುವ ನೀರಿನ ಸಮಸ್ಯೆಯನ್ನು ತಡೆಗಟ್ಟಬಹುದು. ರೈತರಿಗೆ ಕೃಷಿಗೆ ಸಂಬಂಧಿಸಿದ ಮಾಹಿತಿ ಬೇಕಿದ್ದಲ್ಲಿ ಯಾವತ್ತೂ ಕೂಡ ಇಲಾಖೆ ನೀಡಲು ಸಿದ್ಧವಿದೆ. ತರಬೇತಿಗಳನ್ನು ನೀಡುವ ಕೆಲಸವನ್ನೂ ಮಾಡಲಾಗುವುದು ಎಂದರು.
Advertisement

Udayavani is now on Telegram. Click here to join our channel and stay updated with the latest news.

Next