Advertisement

ತರಕಾರಿ, ಹೂ ಕೇಳುವರು ಇಲ್ಲದೇ, ರೈತ ಕಂಗಾಲು

03:15 PM May 01, 2021 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಇದರ ಪರಿಣಾಮ ಮಾರುಕಟ್ಟೆಯಲ್ಲಿ ತರಕಾರಿ, ಹೂವು ಖರೀದಿಗೆ ವರ್ತಕರು ಬಾರದೇ ಲೋಡ್‌ಗಟ್ಟಲೇ ತರಕಾರಿ ಉಳಿದುಕೊಳ್ಳುತ್ತಿದೆ. ಇದರಿಂದ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.

Advertisement

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ, ಹೈನುಗಾರಿಕೆ ಜೊತೆಗೆ ತರಕಾರಿ ಉತ್ಪಾದನೆಯಲ್ಲಿ ಖ್ಯಾತಿ ಹೊಂದಿರುವ ಜಿಲ್ಲೆಯಲ್ಲಿ ರೈತರು ಸಾಲ ಮಾಡಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಇರಲಿ ಕನಿಷ್ಠ ಕೂಲಿ ಹಣವೂ ಸಿಗದೇ, ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಟೊಮೆಟೋ ಬೆಲೆ ಕುಸಿದು, ರೈತರು ಮಾರುಕಟ್ಟೆಗೆ ಸಾಗಿಸಲು ಖರ್ಚು ಸಹ ಭರಿಸಲು ಸಾಧ್ಯವಾಗದೆ ತೋಟದಲ್ಲೇ ಬಿಡುತ್ತಿದ್ದಾರೆ. ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿರುವ ಅತಿ ಹೆಚ್ಚು ಅಂತರ್ಜಲ ಬಳಕೆ ಮಾಡುವ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಭಾವದಿಂದ ರೈತರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ಮಧ್ಯಪ್ರವೇಶ ಮಾಡಬೇಕೆಂಬ ಆಗ್ರಹ ಕೇಳಿಬಂದಿದೆ.

ಕೇಳುವವರೇ ಇಲ್ಲ: ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಮತ್ತೂಂದೆಡೆ ನಾಗರಿಕರಿಗೆ ಅಗತ್ಯ ವಸ್ತುಗಳ ಖರೀದಿಮಾಡಲು ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅವಕಾಶ ಒದಗಿಸಿದೆ. ಈ ಅವಧಿ ಯಲ್ಲಿ ನಗರದ ಎಪಿಎಂಸಿಗೆ ಬರುವ ಹೂಕೋಸು, ಸೌತೆಕಾಯಿ ಸಹಿತ ತರಕಾರಿ ಕೇಳವರು ಇಲ್ಲದಂತಾಗಿದೆ. ಇದರಿಂದ ರೈತರು ದಿಕ್ಕುತೋಚದೆ ನಿತ್ಯ ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಮಯ ಅವಕಾಶ ಕಲ್ಪಿಸಿ: ರಾಜ್ಯ ಸರ್ಕಾರ ಮಾರು ಕಟ್ಟೆಯಲ್ಲಿ ತರಕಾರಿ ಮತ್ತಿತರರ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿದೆ. ಆದರೆ, ಸಮಯ ಬೆಳಗ್ಗೆ 6ರಿಂದ 10 ಗಂಟೆಗೆ ಮಾತ್ರ ಸೀಮಿತ ಗೊಳಿಸಿದ್ದರಿಂದ ವರ್ತಕರು ಬರಲು ಸಮಯ ಅವಕಾಶ ಇಲ್ಲದಂತಾಗಿದೆ. ನಿಗದಿ ತ ಅವ ಧಿಯೊಳಗೆ ಮಾರು ಕಟ್ಟೆ ಬಂದ್‌ ಮಾಡಲು ಅಧಿ ಕಾರಿಗಳು ಕ್ರಮಕೈ ಗೊಳ್ಳುತ್ತಿರುವುದರಿಂದ ಸಂಜೆವರೆಗೆ ತರಕಾರಿ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕೋವಿಡ್ ಸೋಂಕು ನಿಯಂತ್ರಿಸಲು ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿದರಿಂದ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹಾಲು ಉತ್ಪಾದಕರಿಗೆ, ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಸರ್ಕಾರ ಆದೇಶವನ್ನು ಪರಿಷ್ಕರಿಸಿ ರಾತ್ರಿ 8 ಗಂಟೆಯವರೆಗೆ ಸಮಯಾವಕಾಶಒದಗಿಸಿದೆ. ಹಾಲಿನ ಮಳಿಗೆ ತೆರೆದಿರುವ ಮಾದರಿಯಲ್ಲಿ ಎಪಿಎಂಸಿಯಲ್ಲೂ ರಾತ್ರಿ 8 ಗಂಟೆಯವರೆಗೆ ತರಕಾರಿ ಉತ್ಪನ್ನ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಿ, ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ವ್ಯವಸ್ಥೆ ಮಾಡಬೇಕು. – ಭಕ್ತರಹಳ್ಳಿ ಬೈರೇಗೌಡ, ಪ್ರಧಾನ ಕಾರ್ಯದರ್ಶಿ, ರೈತ ಸಂಘ ಹಾಗೂ ಹಸಿರುಸೇನೆ (ಕೋಡಹಳ್ಳಿ ಚಂದ್ರಶೇಖರ್‌ ಬಣ)

Advertisement

 

– ತಮೀಮ್‌ಪಾಷ ಎಂ.ಎ.

Advertisement

Udayavani is now on Telegram. Click here to join our channel and stay updated with the latest news.

Next