Advertisement
ಜಿಲ್ಲೆಯ ಕುಂದಾಪುರ, ಬೈಂದೂರು, ಕೋಟ ವ್ಯಾಪ್ತಿಯ 18,000 ಹೆಕ್ಟೇರ್ ಪ್ರದೇಶದಲ್ಲಿ 4 ಸಾವಿರಕ್ಕೂ ಹೆಚ್ಚು ರೈತರು ನೆಲಗಡಲೆ ಬೆಳೆಯುತ್ತಾರೆ. ಕೆಲವು ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ಅಲ್ಪ ಪ್ರಮಾಣದಲ್ಲಿ ಪೂರೈಕೆಯಾಗಿದ್ದು, ಕೆಲವು ಕೇಂದ್ರಗಳಿಗೆ ಇನ್ನೂ ಬಂದಿಲ್ಲ.
Related Articles
Advertisement
ರೈತ ಸಂಪರ್ಕ ಕೇಂದ್ರದಲ್ಲಿ ಒಂದು ಕೆ.ಜಿ. ಬೀಜಕ್ಕೆ 70 ರೂ. ಇದ್ದು ರೈತರಿಗೆ ಈ ಬಾರಿ ಸಬ್ಸಿಡಿ ದರದಲ್ಲಿ 54 ರೂ. ನಿಗದಿಪಡಿಸಲಾಗಿದೆ. ಅದೇ ಖಾಸಗಿ ಅಥವಾ ಬೇರೆ ಕಡೆಯಿಂದ ತರಿಸುವುದಾದರೆ 60ರಿಂದ 70 ರೂ. ವರೆಗೂ ಇದೆ. ಕುಂದಾಪುರ ರೈತಸಂಪರ್ಕ ಕೇಂದ್ರಕ್ಕೆ 50 ಕ್ವಿಂಟಾಲ್ ಟಿಎಂವಿ – 2 ಬೀಜ ತರಿಸಲಾಗಿದೆ. ಬೈಂದೂರಲ್ಲಿ 300 ಕ್ವಿಂಟಾಲ್ ಬೇಡಿಕೆಯಿದ್ದು, ಈಗ 80 ಕ್ವಿಂಟಾಲ್ ಜಿಪಿಬಿಡಿ-4 ತರಿಸಲಾಗಿದೆ.
ದ್ವಿದಳ ಧಾನ್ಯ ದಾಸ್ತಾನು :
ಉಡುಪಿ ಜಿಲ್ಲೆಯಲ್ಲಿ ಈ ಹಂಗಾಮಿನಲ್ಲಿ ನೆಲಗಡಲೆ ಹೊರತುಪಡಿಸಿ ಉದ್ದು, ಹೆಸರು ಬೆಳೆಯಲಾಗುತ್ತಿದ್ದು, ಅವುಗಳನ್ನು ಈಗಾಗಲೇ ಮಂಡ್ಯದಿಂದ ಅಗತ್ಯವಿರುವಷ್ಟು ತರಿಸಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಗತ್ಯವಿರುವಷ್ಟು ಪೂರೈಕ : ಈ ಬಾರಿ ಜಿಲ್ಲೆಯಿಂದ 650 ಕ್ವಿಂಟಾಲ್ ನೆಲಗಡಲೆ ಬೀಜಕ್ಕೆ ಬೇಡಿಕೆ ಕಳುಹಿಸಲಾಗಿದೆ. ಕೋಟ ರೈತ ಸಂಪರ್ಕ ಕೇಂದ್ರಕ್ಕೆ ಅಗತ್ಯವಿರುವಷ್ಟು ತರಿಸಲಾಗಿದೆ. ಕುಂದಾಪುರ, ಬೈಂದೂರಿಗೂ ಬಂದಿದ್ದು, ರೈತರಿಗೆ ಕೂಡಲೇ ವಿತರಿಸಲಾಗುವುದು. ಅಗತ್ಯವಿರುವಷ್ಟನ್ನೂ ಪೂರೈಸಲಾಗುವುದು. – ಎಚ್. ಕೆಂಪೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಉಡುಪಿ
ಹೊರಗಡೆಯಿಂದ ಖರೀದಿ : ನನಗೆ ವರ್ಷಕ್ಕೆ ಒಂದು ಕ್ವಿಂಟಾಲ್ ವರೆಗೆ ಬೀಜದ ಅಗತ್ಯವಿದೆ. ಆದರೆ ಗದ್ದೆಯ ತೇವಾಂಶ ಕಡಿಮೆಯಾಗು ತ್ತಿರುವ ಕಡೆಗಳಲ್ಲಿ ಬಿತ್ತನೆ ಮಾಡಲು ತುರ್ತಾಗಿ 40 ಕೆ.ಜಿ. ಅಗತ್ಯವಿತ್ತು. ಇಲಾಖೆಯಲ್ಲಿ ಕೇಳಿದಾಗ ಒಂದೆರಡು ದಿನ ಆಗಬಹುದು ಎಂದರು. ಹಾಗಾಗಿ ಹೊರಗಿನಿಂದ ಕೆ.ಜಿ.ಗೆ 60 ರೂ. ಕೊಟ್ಟು ತರಿಸಿದ್ದೇನೆ. – ಶೀನ, ಹೇರಂಜಾಲು, ನೆಲಗಡಲೆ ಕೃಷಿಕ