Advertisement

ರೈತರ ಆರೋಗ್ಯ ಮರೆತಂತಿದೆ: ಸಚಿವ ಪ್ರಮೋದ್‌

11:20 AM Jan 30, 2018 | |

ಮಣಿಪಾಲ: ಆಹಾರ ಪದಾರ್ಥಗಳನ್ನು ಒದಗಿಸುವ ಮೂಲಕ ವಿಶೇಷ ಸೇವೆಯನ್ನು ಮಾಡುತ್ತಿರುವ ರೈತರ ಆರೋಗ್ಯದತ್ತ ಗಮನ ಹರಿಸಲು ಸರಕಾರಗಳು ಮರೆತಂತಿವೆ. ರಾಜ್ಯ ಸರಕಾರ ಈಗಿನಿಂದಲೇ ಅವರ ಆರೋಗ್ಯವನ್ನು ಕಾಪಾಡಲು ಚಿಂತನೆ ನಡೆಸುತ್ತದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಸೋಮವಾರ ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಮಹಾ ವಿದ್ಯಾಲಯ, ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗದ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಡಾ| ಟಿ.ಎಂ.ಎ. ಪೈ ಸಭಾಂಗಣದಲ್ಲಿ ಜರಗಿದ “ರಾಜ್ಯದ ರೈತರ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ| ಪ್ರಕಾಶ್‌ ಕಮ್ಮರಡಿ ಪ್ರಸ್ತಾವಿಸಿ, ರಾಜ್ಯದಲ್ಲಿ ಮಣ್ಣಿನ ಆರೋಗ್ಯವನ್ನು ನೋಡಲಾಗುತ್ತಿದೆ, ಆದರೆ ರೈತರ ಆರೋಗ್ಯವನ್ನು ಅವಗಣಿಸಲಾಗುತ್ತಿದೆ ಎಂದರು.

ರಾಜ್ಯದ 8 ಜಿಲ್ಲೆಗಳ 743 ರೈತರಿಗೆ ವಿವಿಧ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಪೈಕಿ 258 ಜನರಿಗೆ ಅಧಿಕ ರಕ್ತದೊತ್ತಡ, 256 ಜನರಿಗೆ ಹಿಮೋಗ್ಲೋಬಿನ್‌ ಕೊರತೆ ಹಾಗೂ 364 ರೈತರಿಗೆ ರಕ್ತ ಅಥವಾ ಮೂತ್ರದಲ್ಲಿ ಕೀಟನಾಶಕ ವಿಷವಿರುವುದು ಪತ್ತೆಯಾಗಿದೆ ಎಂದು ಫೊರೆನ್ಸಿಕ್‌ ಮೆಡಿಸಿನ್‌ ವಿಭಾಗದ ಡಾ| ಶಂಕರ ಬಕಣ್ಣನವರ್‌ ಮಾಹಿತಿ ನೀಡಿದರು. ಕೆಎಂಸಿಯ ಸಹ ಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಉಪಸ್ಥಿತರಿದ್ದರು. 

ಡೀನ್‌ ಡಾ| ಪ್ರಜ್ಞಾ ರಾವ್‌ ಅವರು ಸ್ವಾಗತಿಸಿದರು. ಡಾ| ವಿನುತಾ ಭಟ್‌ ಅವರು ವಂದಿಸಿದರು. ಡಾ| ಶೋಭಾ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು.

Advertisement

ರೈತರ ದೇಹದಲ್ಲಿ ವಿಷ !
ಮಾಹೆ ಅಧ್ಯಯನ ನಡೆಸಿದ ರಾಜ್ಯದ 8 ಜಿಲ್ಲೆಯ 8 ಗ್ರಾಮಗಳಲ್ಲಿ ಶೇ. 51ರಷ್ಟು ರೈತರ ದೇಹದಲ್ಲಿ ಕೀಟನಾಶಕ ವಿಷ ಪತ್ತೆಯಾಗಿರುವುದು ಅತ್ಯಂತ ಕಳವಳಕಾರಿಯಾಗಿದೆ ಎಂದು ಪ್ರಮೋದ್‌ ಮಧ್ವರಾಜ್‌ ಹೇಳಿದರು.

ಕೃಷಿಕರ ಆರೋಗ್ಯದ ಬಗ್ಗೆ ಅತೀವ ಕಾಳಜಿಯಿಂದ ಮಾಹೆ ವಿಶೇಷ ಅಧ್ಯಯನ ನಡೆಸಿದೆ. ಈ ಹಿನ್ನೆಲೆಯಲ್ಲಿ ರೈತರ ಆರೋಗ್ಯಕ್ಕೆ ಸಹಕಾರಿಯಾಗಿ ಮಾಹೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಿದೆ. ಇದರಲ್ಲಿ ಶೇ. 10ರಷ್ಟು ರೈತರು, ಶೇ. 50ರಷ್ಟು ಕೆಎಪಿಸಿ ಮತ್ತು ಉಳಿದ ಶೇ. 40ರಷ್ಟನ್ನು ಮಾಹೆ ಭರಿಸಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next