Advertisement
ಹೌದು.. ಈ ಹಿಂದೆ ನಮ್ಮ ಪೂರ್ವಜರು ಮಳೆಗಾಲದಲ್ಲೇ ಅತಿಹೆಚ್ಚು ಜೋಳ, ಗೋ ಧಿ ಸೇರಿದಂತೆ ಇತರೆಬೆಳೆ ಬೆಳೆಯುತ್ತಿದ್ದರು. ಆಗೆಲ್ಲ ಮಣ್ಣಿನಮನೆಗಳಾಗಿದ್ದರಿಂದ ಮಳೆಗಾಲದಲ್ಲಿ ಮನೆಗಳು ಸೋರುವುದು, ಇಲಿ,ಹೆಗ್ಗಣಗಳ ಕಾಟದಿಂದ ಉತ್ಪನ್ನ ಸಂರಕ್ಷಣೆಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು.ಅಲ್ಲದೇ ಉತ್ಪನ್ನಗಳಿಗೆ ಹುಳು ಬಾಧೆ ಹೆಚ್ಚಾಗುತ್ತಿತ್ತು. ಜೊತೆಗೆ ಹಿಂದೆಹೆಚ್ಚು ಬೆಳೆಯುತ್ತಿದ್ದರಿಂದ ಆಗಲೂಮಾರುಕಟ್ಟೆಯಲ್ಲಿ ಜೋಳ, ಗೋಧಿ ಯಂತಹ ಉತ್ಪನ್ನಕ್ಕೆ ಬೆಲೆಯೂ ಸಿಗುತ್ತಿರಲಿಲ್ಲ. ಇದೇ ಉದ್ದೇಶದಿಂದಲೇಈ ಹಿಂದಿನ ರೈತಾಪಿ ವರ್ಗ ಹಗೇವುಸಂಸ್ಕೃತಿಯನ್ನು ಆರಂಭಿಸಿತ್ತು. ಆದರೆಅವು ಮರೆಯಾಗುತ್ತಿರುವುದು ನಿಜಕ್ಕೂ ಬೇಸರ ತರಿಸಿದೆ.
Related Articles
Advertisement
ಜಿಲ್ಲೆಯಲ್ಲಿ ಕೆಲವೊಂದು ಭಾಗದಲ್ಲಿ ಹಗೇವುಗಳು ಮಾಯವಾಗಿದ್ದರೆ,ಇನ್ನು ಕೆಲವು ಭಾಗದಲ್ಲಿ ಇಂದಿಗೂ ಇವೆ. ಯಲಬುರ್ಗಾ ತಾಲೂಕಿನ ಸಿದ್ನೆಕೊಪ್ಪ, ಹರೆ ಹಂಚಿನಾಳ ಸೇರಿದಂತೆ ಹಲವು ಗ್ರಾಮಗಳ ರೈತರುಇಂದಿಗೂ ನೂರಾರು ಚೀಲದ ಜೋಳದ ರಾಶಿಯನ್ನು ಹಗೇವುಗಳಲ್ಲಿಸಂಗ್ರಹಿಸಿಕೊಂಡು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಬಂದಾಗ ತೆಗೆದು ಮಾರಾಟ ಮಾಡುತ್ತಾರೆ. ಕೊಪ್ಪಳ ತಾಲೂಕಿನ ಬೆಟಗೇರಿ ಸೇರಿದಂತೆ ಇತರೆ ಭಾಗದಲ್ಲೂ ಕೆಲವೊಂದು ಹಗೇವುಗಳು ಸಂರಕ್ಷಿಸಲ್ಪಟ್ಟಿವೆ.ಹಗೇವು ಇರುವ ಸ್ಥಳಗಳಲ್ಲಿ ಭಾರವಾದ ವಾಹನಗಳಿಗೆಓಡಾಟಕ್ಕೆ ಅವಕಾಶವಿಲ್ಲ. ತೇವಾಂಶ ಆಗದಂತೆಯೂ ಅವುಗಳ ಬಗ್ಗೆ ರೈತಾಪಿ ವಲಯ ನಿಗಾ ವಹಿಸಿರುತ್ತದೆ.
ನಮ್ಮ ಹಿರಿಯರು ಮಾಡಿದ ಹಗೇವುಗಳನ್ನು ನಾವು ಇಂದಿಗೂ ಬಳಕೆ ಮಾಡುತ್ತಿದ್ದೇವೆ. ಕಳೆದ ವರ್ಷ ಬೆಳೆದ ಜೋಳವನ್ನು ಹಗೇವುನಲ್ಲಿ ಹಾಕಿದ್ದೇವೆ. ಇನ್ನು ಹೊರ ತೆಗೆದಿಲ್ಲ. ಉತ್ತಮ ಬೆಲೆ ಮಾರುಕಟ್ಟೆಯಲ್ಲಿ ಬಂದಾಗಅವುಗಳನ್ನು ತೆಗೆದು ನಾವು ಮಾರಾಟ ಮಾಡುತ್ತೇವೆ. ಕೆಲವೊಂದು ಭಾಗದಲ್ಲಿ -ಹಗೇವು ಬಳಕೆಯಾಗುತ್ತಿಲ್ಲ. ಬಸಯ್ಯ ಹಿರೇಮಠ, ಸಿದ್ನೆಕೊಪ್ಪದ ರೈತ
ಈ ಹಿಂದೆ ರೈತರು ಅತಿ ಹೆಚ್ಚು ಜೋಳ, ಗೋಧಿ ಬೆಳೆಯುತ್ತಿದ್ದರು. ಎಲ್ಲವನ್ನೂ ಮಾರಾಟ ಮಾಡಲಾಗದೇ ಚೀಲ ಸೇರಿ ರೋಗ, ಮಳೆಯಿಂದ ಉತ್ಪನ್ನ ಸಂರಕ್ಷಿಸಿಕೊಳ್ಳಲು ಹಗೇವಿಗೆ ಜೋಳ ಹಾಕುತ್ತಿದ್ದರು.ವರ್ಷದ ಬಳಿಕ ತೆಗೆದು ಮಾರುಕಟ್ಟೆಯಲ್ಲಿ ಬೆಲೆ ಇದ್ದಾಗ ಮಾರಾಟಮಾಡುತ್ತಿದ್ದರು. ಇಂದು ಹಗೇವುಗಳು ಮರೆಯಾಗಿವೆ. ನಮ್ಮ ಭಾಗದಲ್ಲಿಇಂದಿಗೂ ಹಗೇವುಗಳನ್ನು ನಾವು ಕಾಣಬಹುದು. – ಅಂದಪ್ಪ ಕೋಳೂರು, ರೈತ ಮುಖಂಡ
-ದತ್ತು ಕಮ್ಮಾರ