Advertisement
ಜಿಲ್ಲಾ ಸಹಕಾರ ಬ್ಯಾಂಕುಗಳು ಹಾಗೂ ಅಪೆಕ್ಸ್ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟವರಷ್ಟೇ ಅಲ್ಲದೇ ಅನೇಕ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿಯೂ ಸಾಕಷ್ಟು ಠೇವಣಿ ಇಟ್ಟಿದ್ದಾರೆ. ಹೀಗಾಗಿ, ಸಹಕಾರ ಸಂಘ ಹಾಗೂ ಬ್ಯಾಂಕುಗಳಲ್ಲಿ ಠೇವಣಿ ಇಟ್ಟವರಿಗೆ ಸಾಲಮನ್ನಾ ಅನ್ವಯ ಆಗುವುದಿಲ್ಲ ಎಂಬ ಷರತ್ತು ಸರ್ಕಾರ ಸಡಿಲಿಸದಿದ್ದರೆ ಸುಮಾರು 20 ಲಕ್ಷ ರೈತರು ಸಾಲಮನ್ನಾದಿಂದ ವಂಚಿತರಾಗುತ್ತಿದ್ದರು.
Related Articles
Advertisement
ಡಿಸಿಸಿ ಬ್ಯಾಂಕುಗಳಲ್ಲಿನ ರೈತರ ಠೇವಣಿ ವಿವರಜಿಲ್ಲೆಗಳು ಠೇವಣಿ ಹಣ(ಕೋಟಿಗಳಲ್ಲಿ)
ಬಾಗಲಕೋಟೆ 1932
ಬೆಳಗಾವಿ 3065
ಬಳ್ಳಾರಿ 810
ಬೆಂಗಳೂರು 574
ಬೀದರ್ 1317
ವಿಜಯಪುರ 1695
ಚಿಕ್ಕಮಗಳೂರು 590
ಚಿತ್ರದುರ್ಗ 178
ದಾವಣಗೆರೆ 226
ಧಾರವಾಡ 485
ಕಲಬುರಗಿ 180
ಹಾಸನ 774
ಕೊಡಗು 769
ಕೋಲಾರ 181
ಮಂಡ್ಯ 993
ಮೈಸೂರು 406
ರಾಯಚೂರು 535
ಶಿವಮೊಗ್ಗ 683
ದಕ್ಷಿಣ ಕನ್ನಡ 3,534
ಉತ್ತರ ಕನ್ನಡ 2028
ತುಮಕೂರು 820 ಸರ್ಕಾರ ಠೇವಣಿ ಷರತ್ತು ವಾಪಸ್ ತೆಗೆದುಕೊಂಡಿದ್ದು ಸ್ವಾಗತಾರ್ಹ. ಇದೇ ರೀತಿ ಆದಾಯ ತೆರಿಗೆ, ಸಂಬಳ ಪಡೆಯುವವರು ಎಂಬ ಷರತ್ತು ಹೇರದೇ ಹಿಂದೆ ಸಾಲ ಮನ್ನಾ ಮಾಡಿದ ರೀತಿಯಲ್ಲಿಯೇ ಜಾರಿಗೊಳಿಸಬೇಕು.
– ಲಕ್ಷ್ಮಣ ಸವದಿ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ. ಸಾಲಮನ್ನಾ: ಸಹಕಾರ ಸಂಘಗಳಿಗೆ ನಿಯಮಾವಳಿ ರವಾನೆ
ಬೆಂಗಳೂರು: ರೈತರ ಸಾಲ ಮನ್ನಾಗೆ ಸಂಬಂಧಿಸಿದಂತೆ ಸರ್ಕಾರ ಅಧಿಕೃತ ನಿಯಮಾವಳಿಯನ್ನು ಎಲ್ಲ ಸಹಕಾರ ಸಂಘಗಳಿಗೆ ರವಾನಿಸಿದ್ದು ಅ.5 ರೊಳಗೆ ಜುಲೈ ಮತ್ತು ಆಗಸ್ಟ್ ತಿಂಗಳ ಕ್ಲೈಮ್ ಕಳುಹಿಸುವಂತೆ ಸೂಚನೆ ನೀಡಿದೆ. 9448 ಕೋಟಿ ರೂ. ಸಾಲ ಮನ್ನಾ ಪೈಕಿ ಎರಡು ತಿಂಗಳ ಕ್ಲೈಮ್ 312 ಕೋಟಿ ರೂ. ಅ.15 ರೊಳಗೆ ಚುಕ್ತಾ ಆಗಲಿದೆ. ದಸರಾ ಮತ್ತು ದೀಪಾವಳಿ ನಡುವೆ 22.65 ಲಕ್ಷ ರೈತರಿಗೂ ಋಣಮುಕ್ತ ಪತ್ರ ಸಹ ಸಾಲಮನ್ನಾ ಆಗುವ ದಿನಾಂಕದ ನಮೂದಿನೊಂದಿಗೆ ಮನೆ ಬಾಗಿಲಿಗೆ ತಲುಪಲಿದೆ. ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್, ರೈತರು ಠೇವಣಿ ಇಟ್ಟಿದ್ದರೆ ಸಾಲಮನ್ನಾ ಅನ್ವಯ ಆಗುವುದಿಲ್ಲ ಎಂಬ ಷರತ್ತಿಗೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಅದನ್ನು ತೆಗೆದುಹಾಕಲಾಗಿದೆ. ಹೀಗಾಗಿ, ಸಾಲಮನ್ನಾ 22.65 ಲಕ್ಷ ರೈತರಿಗೆ ಅನ್ವಯ ಆಗಲಿದೆ ಎಂದು ಹೇಳಿದರು. ಸಾಲಮನ್ನಾ ಜತೆಗೆ ರೈತರ ಇತರೆ ಸಾಲದ ಹಣ ಚುಕ್ತಾ ಆಗುತ್ತಿದ್ದಂತೆ ಹೊಸದಾಗಿ ಸಾಲ ನೀಡಲಾಗುವುದು. ಈ ವರ್ಷ ಹದಿನೈದು ಲಕ್ಷ ರೈತರಿಗೆ ಹೊಸದಾಗಿ ಸಾಲ ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. 9448 ಕೋಟಿ ರೂ. ಪೈಕಿ ಜುಲೈ-ಆಗಸ್ಟ್- 312 ಕೋಟಿ ರೂ., ಸೆಪ್ಟೆಂಬರ್-236 ಕೋಟಿ ರೂ.,ಅಕ್ಟೋಬರ್ 203 ಕೋಟಿ ರೂ., ಫೆಬ್ರವರಿ-1100 ಕೋಟಿ ರೂ., ಮಾರ್ಚ್-2000 ಕೋಟಿ ರೂ., ಮೇ-1700 ಕೋಟಿ ರೂ., ಜೂನ್-1500 ಕೋಟಿ ರೂ. ಕ್ಲೈಮ್ ಬರಲಿದೆ ಎಂದು ವಿವರಿಸಿದರು. ಸಾಲಮನ್ನಾ ಮೊತ್ತವನ್ನು ರೈತರ ಉಳಿತಾಯ ಖಾತೆಗೆ ಡಿಬಿಟಿ ಮೂಲಕ ಜಮಾ ನೀಡಲಾಗುವುದು ಎಂಬ ಷರತ್ತು ಸಡಿಲಿಸಿ ರೈತರ ಉಳಿತಾಯ ಖಾತೆಗೆ ಸಾಲ ಮನ್ನಾ ಮೊತ್ತ ಜಮಾ ನೀಡಿ ಡಿಸಿಸಿ ಬ್ಯಾಂಕುಗಳು ಈ ಮೊತ್ತವನ್ನು ಸಹಕಾರ ಸಂಘ/ಬ್ಯಾಂಕಿನಲ್ಲಿ ರೈತರ ಸಾಲದ ಖಾತೆಗೆ ತಕ್ಷಣ ವರ್ಗಾಯಿಸುವುದು ಎಂದು ತಿಳಿಸಲಾಗಿದೆ ಎಂದರು. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ 17613 ಕೋಟಿ ರೂ. ಸಹಕಾರ ಸಂಘಗಳಲ್ಲಿ ರೈತರು ಮಾಡಿದ್ದ ಸಾಲ ಮನ್ನಾ ಆಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ 8165 ಕೋಟಿ ರೂ., ಇದೀಗ ಸಮ್ಮಿಶ್ರ ಸರ್ಕಾರದಲ್ಲಿ 9448 ಕೋಟಿ ರೂ. ಎಂದು ಹೇಳಿದರು. ಹಿಂದಿನ ಸರ್ಕಾರದ ಸಾಲಮನ್ನಾ ಬಾಬಿ¤ನ ಕೊನೇ ಕಂತು 1495 ಕೋಟಿ ರೂ. ಸಹ ಪಾವತಿಸಲಾಗಿದೆ ಎಂದು ಹೇಳಿದರು. ತಿದ್ದುಪಡಿ ಷರತ್ತು
ರೈತರು ಸಹಕಾರ ಸಂಗಗಳು ಅಥವಾ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿದ್ದರೆ ಸಾಲಮನ್ನಾ ಅನ್ವಯವಾಗದು ಎಂಬ ಷರತ್ತಿಗೆ ತೀವ್ರ ವಿರೋಧ ವ್ಯಕ್ತವಾದ ಕಾರಣ ಅದನ್ನು ಕೈ ಬಿಡಲಾಗಿದೆ. ರೈತರು ಸಹಕಾರ ಸಂಘಗಳು/ ಸಹಕಾರಿ ಬ್ಯಾಂಕ್/ವಾಣಿಜ್ಯ ಬ್ಯಾಂಕ್‌ಗಳಲ್ಲಿ ಹೊಂದಿರುವ ಮುದ್ದತ್ತು ಠೇವಣಿ ಇದ್ದಲ್ಲಿ, ಅಂತಹ ಮೊತ್ತ ಹೊರಬಾಕಿಯಲ್ಲಿ ಕಳೆಯತಕ್ಕದ್ದು ಎಂಬ ಷರತ್ತು ಕೈ ಬಿಡತಕ್ಕದ್ದು ಎಂದು ಇದೀಗ ಆದೇಶ ಹೊರಡಿಸಲಾಗಿದೆ. ಜತೆಗೆ 20 ಸಾವಿರ ರೂ. ಮಾಸಿಕ ವೇತನದಾರರು/ಆದಾಯ ತೆರಿಗೆ ಪಾವತಿದಾರರಿಂದ ಸ್ವಯಂ ಘೋಷಣಾ ಪತ್ರ ಪಡೆದು ಯೋಜನೆ ಜಾರಿಗೊಳಿಸುವುದು ಎಂದು ತಿಳಿಸಲಾಗಿದೆ. – ಶಂಕರ ಪಾಗೋಜಿ