ಚಂಢೀಗಡ: ಬೆಳೆ ಹಾನಿಗೆ ಪರಿಹಾರ ನೀಡಲು ಒತ್ತಾಯಿಸಿ ರೈತ ಸಂಘಟನೆಯೊಂದು 12 ಸರ್ಕಾರಿ ಅಧಿಕಾರಿಗಳನ್ನು ಕೆಲ ಗಂಟೆಗಳ ಕಾಲ ಒತ್ತೆಯಲ್ಲಿರಿಸಿಕೊಂಡ ಘಟನೆ ಪಂಜಾಬ್‌ನಲ್ಲಿ ನಡೆದಿದೆ.
ಪಂಜಾಬ್‌ನ ಲಂಬಿ ಪ್ರದೇಶದ ಉಪ ತಹಶೀಲ್ದಾರರ ಕಚೇರಿಯಲ್ಲಿ ಇಂತಹ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆಯೇ ರೈತ ಸಂಘಟನೆಯೊಂದರ 100ಕ್ಕೂ ಅಧಿಕ ರೈತರು ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಹತ್ತಿ ಬೆಳೆ ಹಾನಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ. ಸಂಜೆಯ ವೇಳೆ ಕಚೇರಿಯೊಳಗೆ ನುಗ್ಗಿದ ರೈತರು, ಅಧಿಕಾರಿಗಳನ್ನು ಒತ್ತೆಯಲ್ಲಿರಿಸಿಕೊಂಡಿದ್ದಾರೆ.
ಇದನ್ನೂ ಓದಿ:ಧರ್ಮಾಪುರದಲ್ಲಿ ಮಾರಮ್ಮದೇವರ ಉತ್ಸವ : ತಂಬಿಟ್ಟು ಆರತಿ ಹೊತ್ತು ಸಾಗಿಬಂದ ಹೆಂಗಳೆಯರು
ಈ ವಿಚಾರ ಪೊಲೀಸರಿಗೆ ತಿಳಿದುಬಂದಿದ್ದು, ಸ್ಥಳಕ್ಕೆ ಬಂದ ಪೊಲೀಸರು ಸೋಮವಾರ ಮಧ್ಯ ರಾತ್ರಿ ಹೊತ್ತಿಗೆ ಅಧಿಕಾರಿಗಳನ್ನು ರಕ್ಷಿಸಿದ್ದಾರೆ. ಅಧಿಕಾರಿಗಳನ್ನು ಒತ್ತೆಯಾಳಾಗಿಸಿಕೊಂಡದ್ದನ್ನು ಖಂಡಿಸಿ ಮಂಗಳವಾರ ತೆರಿಗೆ ಇಲಾಖೆಯ ಅಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ.