Advertisement

ಸಿಡಿಲಬ್ಬರದ ಮಳೆಗೆ ರೈತರಿಬ್ಬರ ಸಾವು

03:45 AM Jun 04, 2017 | |

ಬೆಂಗಳೂರು: ಮಂಗಳೂರು, ಔರಾದ, ಮಲೆಮಹದೇಶ್ವರ ಬೆಟ್ಟ, ಭಾಗಮಂಡಲ ಸೇರಿದಂತೆ ರಾಜ್ಯದ ಕೆಲವೆಡೆ ಮಳೆಯಾಗುತ್ತಿದ್ದು, ಬೀದರ ಜಿಲ್ಲೆ ಔರಾದ ತಾಲೂಕಿನಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. 

Advertisement

ಈ ಮಧ್ಯೆ, ಶನಿವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕಾರವಾರ ಮತ್ತು ಆಗುಂಬೆಯಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ, 7 ಸೆಂ.ಮೀ.ಗಳಷ್ಟು ಮಳೆ ಸುರಿಯಿತು.

ಔರಾದ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ವೇಳೆ ಸಿಡಿಲು ಬಡಿದು ಗೋದಾವರಿ ಜಗನಾಥ (45) ಹಾಗೂ ಹುಲ್ಯಾಳ ಗ್ರಾಮದಲ್ಲಿ ಸಂತೋಷ ವೀಠಲ ಪವಾರ (32) ಎಂಬುವರು ಅಸುನೀಗಿದ್ದಾರೆ. ನಾಗನಾಥ ಲಕ್ಷ್ಮಣ, ಭಾರತಿಬಾಯಿ ನಾಗನಾಥ ಎಂಬುವರು ಗಾಯಗೊಂಡಿದ್ದು, ಔರಾದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಹುಲ್ಯಾಳ ಗ್ರಾಮದಲ್ಲಿ ಸುಮಾರು 70 ಸಾವಿರ ರೂ. ಮೌಲ್ಯದ ಎತ್ತು, ಮಮದಾಪುರ ಗ್ರಾಮದಲ್ಲಿ ಸುಮಾರು 50 ಸಾವಿರ ರೂ. ಮೌಲ್ಯದ ಎರಡು ಎಮ್ಮೆಗಳು ಸಿಡಿಲಿಗೆ ಆಹುತಿಯಾಗಿವೆ.

ಮುಂದಿನ 24 ತಾಸುಗಳಲ್ಲಿ ಕರಾವಳಿಯಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next