Advertisement

“ರೈತನಿಲ್ಲದಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆ ಗತಿ’ 

01:48 PM Dec 28, 2021 | Team Udayavani |

ಯಾದಗಿರಿ: ನಮ್ಮನ್ನು ಆಳುವ ರಾಜಕಾರಣಿಗಳು, ಕಾರ್ಯಾಂಗದ ಮುಖ್ಯಸ್ಥರು, ಮಠಾಧಿಧೀಶರು,ಐಎಎಸ್‌, ಐಪಿಎಸ್‌ ಅಧಿಕಾರಿಗಳು ಇಲ್ಲದಿದ್ದರೂ ದೇಶ ನಡೆಯುತ್ತದೆ. ಆದರೆ, ಒಬ್ಬ ರೈತ ಇಲ್ಲದಿದ್ದರೆ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆಯೇಗತಿಯಾಗಿತ್ತು ಎಂದು ಹೆಡಗಿಮದ್ರಾ ಶಾಂತ ಶಿವಯೋಗಿ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮಿಗಳು ಹೇಳಿದರು.

Advertisement

ಇಲ್ಲಿನ ಆತ್ಮಲಿಂಗೇಶ್ವರ ದೇವಸ್ಥಾನದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ (ರೈತ ಸೇನೆ)ಯಿಂದ ಆಯೋಜಿಸಿದ್ದ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವರ್ಷಪೂರ್ತಿ ಜಮೀನಿನಲ್ಲಿ ನೇಗಿಲು ಹೊತ್ತು ಜಗಕೆ ಅನ್ನ ನೀಡುವ ಅನ್ನದಾತ ಪ್ರಾರ್ಥಸ್ಮರಣಿಯಾಗಿದ್ದಾನೆ ಎಂದರು.

ಅನ್ನದಾತ ಎಂದಿಗೂ ತನ್ನ ಸ್ವಾರ್ಥದ ಬಗ್ಗೆ ಯೋಚನೆ ಮಾಡಿದವನಲ್ಲ. ಆತಬೆಳೆಯುವ ಉತ್ಪನ್ನ ಕೇವಲ ತನಗಾಗಿ ಎಂದಿಗೂ ಮೀಸಲಿರಿಸಿಕೊಳ್ಳುವುದಿಲ್ಲ. ಆದರೆ, ಇಂದಿನ ದಿನಗಳಲ್ಲಿ ಶ್ರಮಿಕ ವರ್ಗ ನಿರಂತರ ಶೋಷಣೆ, ದಬಾಳಿಕೆಗೆ ಒಳಗಾಗುತ್ತಿದ್ದಾರೆ. ವಿಜ್ಞಾನ, ತಂತ್ರಜ್ಞಾನಗಳು ಎಷ್ಟೇ ಬೆಳೆದರೂ ಅನ್ನವನ್ನು ಕೃತಕವಾಗಿ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ರೈತರು ಬೆಳೆದಉತ್ಪನ್ನಗಳಿಗೆ ಆಳುವ ಸರ್ಕಾರಗಳು ವೈಜ್ಞಾನಿಕ ಬೆಲೆ ನೀಡುವ ಮೂಲಕಅವರನ್ನು ಆರ್ಥಿಕವಾಗಿ ಬಲಪಡಿಸುವ ಅಗತ್ಯವಿದೆ ಎಂದು ಹೇಳಿದರು.

ಜೆಡಿಎಸ್‌ ಸಂಘಟನಾ ಕಾರ್ಯದರ್ಶಿ ಹನಮೇಗೌಡ ಬೀರನಕಲ್‌ಮಾತನಾಡಿ, ಹಗಲು-ರಾತ್ರಿಜಮೀನಿನಲ್ಲಿ ದುಡಿಯುವ ರೈತರಿಗೆಕೃಷಿ ಬಗ್ಗೆ ಸರ್ಕಾರ ಸೂಕ್ತ ಮಾಹಿತಿನೀಡದಿರುವುದು ಬೇಸರದ ಸಂಗತಿ ಎಂದು ಆರೋಪಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಕಾಂತು ಪಾಟೀಲ್‌ ಮದ್ದರಕಿ ಅಧ್ಯಕ್ಷತೆ ವಹಿಸಿ, ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ರೈತರು 7 ಸಾವಿರಕೋಟಿ ವಿಮೆ ಕಂತು ಭರಿಸಿದ್ದಾರೆ. ಅದರಲ್ಲಿ 4800 ಕೋಟಿ ಮಾತ್ರ ರೈತರಿಗೆ ವಿಮೆ ಪರಿಹಾರ ದೊರಕಿದ್ದು, ಕೃಷಿ ಅಧಿಕಾರಿಗಳು ಸಮರ್ಪಕವಾಗಿ ಸಮೀಕ್ಷೆ ಮಾಡದ ಕಾರಣ ರೈತರು ಬೆಳೆ ಪರಿಹಾರದಿಂದ ವಂಚಿತಗೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಇದೇ ವೇಳೆ ಜಿಲ್ಲೆಯಲ್ಲಿನ 21 ಜನ ಪ್ರಗತಿಪರ ರೈತರಿಗೆ ಪಾದಪೂಜೆ ನೆರವೇರಿಸಿ, ನೇಗಿಲಯೋಗಿ ಪ್ರಶಸ್ತಿ ನೀಡಿಗೌರವಿಸಲಾಯಿತು. ಪ್ರಮುಖರಾದ ನಾಗರತ್ನ ಅನಪುರ, ಬಸ್ಸುಗೌಡ ಬಿಳ್ನಾರ, ಪಂಪನಗೌಡ (ಸನ್ನಿ) ತುನ್ನೂರ, ರಾಜಶೇಖರಗೌಡ ಅಮಲಾಪುರ, ಗುರುಕಾಮಾ, ಡಾ| ಶರಣಬಸವ ಕಾಮರಡ್ಡಿ, ಡಾ| ವೀರೇಶ ಜಾಖಾ, ಸಂಘದ ಜಿಲ್ಲಾಧ್ಯಕ್ಷ ಮಹಾವೀರ ಲಿಂಗೇರಿ, ಗೌರವಾಧ್ಯಕ್ಷ ವೆಂಕಟೇಶ ಮಿಲ್ಟರಿ, ತಾಲೂಕಾಧ್ಯಕ್ಷ ಮುದುಕಪ್ಪ ಚಾಮನಳ್ಳಿ, ನಗರಾಧ್ಯಕ್ಷ ಶ್ರೀನಿವಾಸ ಚಾಮನಳ್ಳಿ, ವೆಂಕಟೇಶ ನಾಯಕ ಶಾರದಳ್ಳಿ, ಸುಭಾಷ ನಡುವಿನಕೆರಿ, ರಾಘು ಬಂಗಾರಿ,ನಾಗರಾಜ ಗುಂಡಕನಾಳ, ಸಿಂದಗಿ ತಾಲೂಕಾಧ್ಯಕ್ಷ ಮುದುಕಣ್ಣ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next