Advertisement

ಕೊಡೇಕಲ್‌ನಲ್ಲಿ ರೈತ ದಿನಾಚರಣೆ

12:43 PM Dec 26, 2021 | Team Udayavani |

ನಾರಾಯಣಪುರ: ರೈತರು ಕೃಷಿಯಲ್ಲಿ ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡಲ್ಲಿ ಕೃಷಿಯನ್ನು ಲಾಭದಾಯಕವಾಗಿ ಮಾಡಿಕೊಳ್ಳಬಹುದು ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಮನಗೌಡ ಮಾಲಿಪಾಟೀಲ ಹೇಳಿದರು.

Advertisement

ಕೊಡೇಕಲ್‌ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಜರುಗಿದ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ರೈತರ ಶ್ರೇಯೋಭಿವೃದ್ಧಿಗೆ ಸರ್ಕಾರದಿಂದ ಹಲವಾರು ಯೋಜನೆಗಳು ಜಾರಿಯಲ್ಲಿದ್ದು, ರೈತರು ಸದುಪಯೋಗ ಪಡೆದುಕೊಳ್ಳಬೇಕು. ಎರಡು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಭೂಮಿ ಅಗತ್ಯಕ್ಕೆ ಅನುಗುಣವಾಗಿ ರಾಸಾಯನಿಕ ಬಳಸುವಂತೆ ಸಲಹೆ ನೀಡಿದರು.

ರೈತ ಮುಖಂಡ ಸಾಯಬಣ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ವೀರಸಂಗಪ್ಪ ಹಾವೇರಿ ಮತ್ತು ಆನಂದಪ್ಪ ಅವರನ್ನು ಕೃಷಿ ಇಲಾಖೆಯಿಂದ ಸನ್ಮಾನಿಸಲಾಯಿತು. ಈ ವೇಳೆ ಷಣ್ಮುಖಪ್ಪ ಡೊಣ್ಣಿಗೇರಿ, ಸೋಮಲಿಂಗಪ್ಪ ದೋರಿ, ಬಸವರಾಜ, ರೇವಣಸಿದ್ದಪ್ಪ, ರೇಣುಕಾ, ಭೀಮಬಾಯಿ, ಸೋಮನಗೌಡ, ರವಿ ಸೇರಿದಂತೆ ಇತರರಿದ್ದರು. ಸಹಾಯಕ ಕೃಷಿ ಅಧಿಕಾರಿ ಮಹಾನಂದಿ ಹಡಪದ ನಿರೂಪಿಸಿದರು. ಕಾಶಿಂರಾಮ್‌ ಸ್ವಾಗತಿಸಿದರು. ಹಣಮಂತ ರಾಮಣ್ಣೊರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next