Advertisement

ರೈತ ದಿನಾಚರಣೆ: ಹಜಾರೆ ಫೌಂಡೇಶನ್ ಮಕ್ಕಳಿಗೆ ಪ್ರಾಯೋಗಿಕ ವ್ಯವಸಾಯದ ಮಾಹಿತಿ

07:09 PM Dec 24, 2021 | Team Udayavani |

ರಬಕವಿ-ಬನಹಟ್ಟಿ : ತಮ್ಮ ಶಾಲೆಯಲ್ಲಿ ಓದುತ್ತಿರುವ ನೂರಾರು ಮಕ್ಕಳಿಗೆ ಕೃಷಿ ಎಂದರೇನು ಅದರ ವಿಶೇಷತೆಗಳೇನು, ಅದನ್ನು ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಪರಿಕಲ್ಪನೆ, ಪ್ರಾಯೋಗಿಕವಾಗಿ ತೋರಿಸಬೇಕು ಎಂಬ ಉದ್ದೇಶದಿಂದ ರಬಕವಿ-ಬನಹಟ್ಟಿ ತಾಲೂಕಿನ ಹಜಾರೆ ಫೌಂಡೇಶನ್‌ರವರ ಹೊಸೂರಿನ ಪದ್ಮಾವತಿ ಇಂಟರ್‌ನ್ಯಾಷನಲ್ ಶಾಲೆಯವರು ವಿದ್ಯಾರ್ಥಿಗಳನ್ನು ತೋಟಕ್ಕೆ ಕರೆದುಕೊಂಡು ಹೋಗಿ ವಿಭಿನ್ನವಾಗಿ ರೈತ ದಿನಾಚರಣೆ ಆಚರಿಸಿದರು.

Advertisement

ಶುಕ್ರವಾರ ಸಮೀಪದ ಕೃಷಿ ಪಂಡಿತ ಪ್ರಶಸ್ತಿ ವಿಜೇತ ಮಹಾದೇವ ಚೋಳಿಯವರ ತೋಟಕ್ಕೆ ತೆರಳಿ ಅಲ್ಲಿ ನಾಟಿ ಹೇಗೆ ಮಾಡಬೇಕು? ಸಸಿಗಳನ್ನು ಹೇಗೆ ಸಂರಕ್ಷಿಸಬೇಕು? ಅವುಗಳಿಗೆ ಅಗತ್ಯ ಪೋಷಕಾಂಶಗಳನ್ನು ಹೇಗೆ ನಿರ್ವಹಿಸಬೇಕು? ಹೈನುಗಾರಿಕೆ ಹಾಗೂ ವಿವಿಧ ವಿವಿಧ ವಿಷಯಗಳ ಬಗ್ಗೆ ಮಕ್ಕಳು ರೈತ ಮಹಾದೇವ ಚೋಳಿ ಅವರಿಂದ ಪ್ರಾಯೋಗಿಕ ಮಾಹಿತಿ ಪಡೆದುಕೊಂಡರು.

ತೋಟದಲ್ಲಿ ಬೆಳೆ ಬೆಳೆಯುವ ಪದ್ದತಿ ಹಾಗೂ ಅವುಗಳ ಬಗ್ಗೆ ಮಕ್ಕಳು ಕುತೂಹಲದಿಂದ ಕೇಳಿಸಿಕೊಂಡು ಅವುಗಳನ್ನು ತಮ್ಮ ಪುಸ್ತಕದಲ್ಲಿ ಬರೆದುಕೊಳ್ಳುತ್ತಿರುವುದು ಕಂಡು ಬಂತು. ಹಾಗೂ ಅದರ ಬಗ್ಗೆ ತಾವು ಸ್ವತಃ ಅನುಭವವನ್ನು ಪಡೆದುಕೊಂಡರು.
ಪ್ರಾಂಶುಪಾಲರಾದ ಬಸವರಾಜ ಕಲಾದಗಿ ಸೇರಿದಂತೆ ಶಿಕ್ಷಕ ವೃಂದದವರು ಪಾಲ್ಗೊಂಡಿದ್ದರು.

ನಾವು ಕೇವಲ ಪುಸ್ತಕದಿಂದ ಅಥವಾ ಶಾಲೆಯ ನಾಲ್ಕು ಗೋಡೆಯಲ್ಲಿ ಕಲಿಯಲು ಸಾಧ್ಯವಾಗದ ಹಲವಾರು ವಿಷಯಗಳಿವೆ. ಬೇಸಾಯವು ಎಲ್ಲಾ ವಯಸ್ಸಿನ ಮಕ್ಕಳಿಗೆ ಆಹಾರವನ್ನು ಬೆಳೆಸುವುದು, ಕಷ್ಟಪಟ್ಟು ಕೆಲಸ ಮಾಡುವುದು, ಸಂವಹನ, ಇತರರನ್ನು ನೋಡಿಕೊಳ್ಳುವುದು ಮತ್ತು ಇನ್ನೂ ಹೆಚ್ಚಿನ ಜೀವನ ಕೌಶಲ್ಯಗಳನ್ನು ಕಲಿಸುತ್ತದೆ
– ಸತೀಶ ಹಜಾರೆ, ಚೇರಮನ್ನರು, ಪದ್ಮಾವತಿ ಅಂತರಾಷ್ಟ್ರೀಯ ಶಾಲೆ ಹೊಸೂರ

ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಕೃಷಿ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಇದನ್ನು ಹಮ್ಮಿಕೊಳ್ಳಲಾಗಿದೆ

Advertisement

– ಭಾರತಿ ತಾಳಿಕೋಟಿ ಆಡಳಿತಾಧಿಕಾರಿಗಳು ಪದ್ಮಾವತಿ ಅಂತರಾಷ್ಟ್ರೀಯ ಶಾಲೆ ಹೊಸೂರ

Advertisement

Udayavani is now on Telegram. Click here to join our channel and stay updated with the latest news.

Next