Advertisement
ಇದೇ ಸಂದರ್ಭದಲ್ಲಿ ಕೃಷಿ ಮಸೂದೆ ಹಿಂಪಡೆಯಲು ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟದಲ್ಲಿ ಮಡಿದ ರೈತರಿಗೆ ಮಹದಾಯಿ ಹೋರಾಟಗಾರರು ಶ್ರದ್ಧಾಂಜಲಿ ಸಲ್ಲಿಸಿದರು.
Related Articles
Advertisement
ಲಕ್ಷ್ಮೇಶ್ವರ: ಪಟ್ಟಣದ ದುಂಡಿ ಬಸವೇಶ್ವರ ರಸ್ತೆಯಲ್ಲಿನ ಜಮೀನೊಂದರಲ್ಲಿ ಭಾನುವಾರ ತಾಲೂಕು ಕರವೇ ಸಂಘಟನೆಯಿಂದ ವೈಶಿಷ್ಟ್ಯಪೂರ್ಣವಾಗಿ ಸಂಘಟಿಸಲಾಗಿದ್ದ ಟಗರಿನ ಕಾಳಗ ನೋಡುಗರನ್ನು ಪುಳಕಿತರನ್ನಾಗಿಸಿತು.
ಹಾಲು ಹಲ್ಲು, 2, 4, 6, 8 ಹಲ್ಲುಮತ್ತು ಮುಕ್ತ ಹೀಗೆ 5 ವಿಭಾಗದಲ್ಲಿಹಮ್ಮಿಕೊಳ್ಳಲಾದ ಟಗರಿನ ಕಾಳಗಕ್ಕೆ ರಾಜ್ಯದ ಡಾವಣಗೆರೆ, ಚಿತ್ರದುರ್ಗ,ವಿಜಯಪುರ, ಹರಿಹರ, ಧಾರವಾಡ,ಬಾಗಲಕೋಟ, ಗದಗ, ಧಾರವಾಡ, ಹಾವೇರಿ, ಬಳ್ಳಾರಿ, ರಾಣಿಬೆನ್ನೂರ ಸೇರಿವಿವಿಧ ಜಿಲ್ಲೆಗಳಿಂದ 200ಕ್ಕೂ ಹೆಚ್ಚುಟಗರುಗಳು ಕಣದಲ್ಲಿ ಶಕ್ತಿ ಪ್ರದರ್ಶನ ನೀಡಲು ಆಗಮಿಸಿದ್ದವು. ಟಗರಿನ ಕಾಳಗ ನೋಡಲು ವಿವಿಧ ಜಿಲ್ಲೆಗಳಿಂದ ಕ್ರೀಡಾ ಅಭಿಮಾನಿಗಳು ಆಗಮಿಸಿದ್ದರು.
ಭಾನುವಾರ ಮತ್ತು ಸೋಮವಾರ 2 ದಿನಗಳ ಕಾಲ ನಡೆಯುವ ಟಗರಿನ ಕಾಳಗಕ್ಕೆಕರವೇ ಜಿಲ್ಲಾ ಪ್ರ. ಕಾರ್ಯದರ್ಶಿ ಶರಣು ಗೋಡಿ ಚಾಲನೆ ನೀಡಿ ಮಾತನಾಡಿ, ಕಳೆದ10 ತಿಂಗಳಿಂದ ಕೊರೊನಾದಿಂದಾಗಿಎಲ್ಲ ಗ್ರಾಮೀಣ ಕ್ರೀಡೆಗಳ ಪ್ರದರ್ಶನಕ್ಕೆಅವಕಾಶ ಇಲ್ಲದಂತಾಗಿದೆ. ಸದ್ಯ ಕೊಂಚ ನಿರಾಳ ಪರಿಸ್ಥಿತಿಯಿದ್ದು, ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ಟಗರಿನ ಕಾಳಗ ಏರ್ಪಡಿಸಲಾಗಿದೆ ಎಂದರು.
ಈ ವೇಳೆ ತಾಲೂಕು ಕರವೇ ಅಧ್ಯಕ್ಷ ನಾಗೇಶ ಅಮರಾಪುರ, ಆಸ್ಪಾಕಬಾಗೋಡಿ, ಅಪ್ಪು ಉಮಚಗಿ, ಶಂಕರ ಪಾಟೀಲ, ರಾಮು ನಾಯಕ, ಪ್ರವೀಣಬೇಪಾರಿ, ಕೈಸರ್ ಮುಲ್ಲಾ, ಪ್ರಕಾಶಉದ್ದನಗೌಡ್ರ, ಪ್ರವೀಣ ಗಾಣಿಗೇರ, ಕಾರ್ತಿಕ ಗುಡಗೇರಿ, ಸುಲೇಮಾನ ಬೂದಿಹಾಳ, ದುದ್ದುಸಾಬ ಅಕ್ಕಿ, ಮೈನು ಮನಿಯಾರ, ದ್ಯಾಮಣ್ಣ ಬಾಕಿ ಮುಂತಾದವರಿದ್ದರು.