Advertisement

ರೈತರ ಸೆಳೆದ ಕೃಷಿ ವಸ್ತು ಪ್ರದರ್ಶನ

04:04 PM Jul 21, 2019 | Suhan S |

ತುಮಕೂರು: ಗಾಜಿನ ಮನೆಯಲ್ಲಿ 2ದಿನಗಳಿಂದ ನಡೆಯುತ್ತಿರುವ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿಂದ ನಡೆಯುತ್ತಿರುವ ಸೌತ್‌ ಇಂಡಿಯಾ ಆಗ್ರೋ ಎಕ್ಸ್‌ಪೋ ಕೃಷಿ ಮತ್ತು ಪೂರಕ ವಸ್ತು ಪ್ರದರ್ಶನ ರೈತರು, ಉದ್ಯಮಿಗಳು, ನಾಗರಿಕರನ್ನು ಆಕರ್ಷಿಸುತ್ತಿದೆ.

Advertisement

ಉಪಕರಣ ಮಾರಾಟ: ಮೇಳದಲ್ಲಿ ಕೃಷಿಗೆ ಪೂರಕ ವಾಗಿರುವ ಹಲವು ಯಂತ್ರಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇವೆ. ತುಮಕೂರು ಜಿಲ್ಲೆ ತೆಂಗು ಬೆಳೆಯುವ ನಾಡಾಗಿರುವುದರಿಂದ ತೆಂಗು ಬೆಳೆ ಯುವ ರೈತರು ಮನೆಗೆ ಬೇಕಾಗಿರುವ ಎಣ್ಣೆ ಮನೆ ಯಲ್ಲೇ ಮಾಡಿಕೊಳ್ಳಬಹುದಾದ ಯಂತ್ರ, ಕಬ್ಬಿನ ಹಾಲು ತೆಗೆಯುವ ಯಂತ್ರ, ಗೃಹಪಯೋಗಿ ವಸ್ತು ಗಳು ಜೊತೆಗೆ ರೈತರು ಬೆಳೆಯುವ ಸಾವಯವ ಪ್ಲಾಸ್ಟಿಕ್‌ ಚೀಲ ಸೇರಿದಂತೆ ವಿವಿಧ ಬಗೆಯ ವಸ್ತುಗಳು ಆಕರ್ಷಿಸುತ್ತಿವೆ. ಹನಿ, ತುಂತುರು ನೀರಾವರಿ, ಸಬ್‌ ಮರ್ಸಿಬಲ್ ಪಂಪ್‌, ಬೋರ್‌ವೆಲ್ಗೆ ಅಳವಡಿಸುವ ಉಪಕರಣ, ವಿದ್ಯುತ್‌ ಉಳಿತಾಯ ಉಪಕರಣ, ಗ್ಯಾಸ್‌ನಿಂದ ಆಗುವ ತೊಂದರೆ ನೀಗಿಸುವ ಉಪಕರಣಗಳ ಪ್ರದರ್ಶನ, ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

ವಿಚಾರಗೋಷ್ಠಿಗೆ ಆದ್ಯತೆ: ಕೃಷಿ ಚಟುವಟಿಕೆ ಪೂರಕ ಉಪಕರಣಗಳ ಜೊತೆಗೆ ದಿನ ಉಪಯೋಗಿ ವಸ್ತುಗಳು, ಆಯುರ್ವೇದಿಕ್‌ ಔಷಧಿ, ಗೃಹಪಯೋಗಿ ವಸ್ತುಗಳ ಪ್ರದರ್ಶನ, ಮಾರಾಟ ನಡೆಯುತ್ತಿದೆ. ಮೇಳದಲ್ಲಿ ವಿಚಾರ ಸಂಕಿರಣ, ಕೃಷಿ, ತೋಟಗಾರಿಕೆ, ಪುಷ್ಪೋದ್ಯಮ, ರೇಷ್ಮೆ, ಜೈವಿಕ ತಂತ್ರಜ್ಞಾನ, ಮೀನುಗಾರಿಕೆ, ಪಶು ಸಂಗೋಪನೆ, ಡೈರಿ, ಕೋಳಿ ಸಾಕಾಣಿಕೆ, ಅಹಾರ ಸಂಸ್ಕರಣೆ ಮಾಹಿತಿ ಸೇರಿದಂತೆ ತಜ್ಞರಿಂದ ವಿಚಾರಗೋಷ್ಠಿಗೂ ಆದ್ಯತೆ ನೀಡಿರುವುದು ವಿಶೇಷ.

ರೈತಪಯೋಗಿ ಪ್ಲಾಸ್ಟಿಕ್‌ ಚೀಲ: ಧವಸಧಾನ್ಯ ಸಂರಕ್ಷಣೆ ರೈತರಿಗೆ ಕಷ್ಟವಾಗುತ್ತಿದೆ. ಚೀಲಗಳಲ್ಲಿ ತುಂಬಿ ಇಟ್ಟರೆ, ನೀರು ತಾಗಿದರೆ ಧವಸ ಹಾಳಾಗುತ್ತವೆ. ಜೊತೆಗೆ ಹುಳುವಿನ ಕಾಟ. ಇದಕ್ಕೆ ಪರಿಹಾರವಾಗಿ ಬೆಂಗಳೂರಿನ ಯುನಿವರ್ಸಲ್ ಎಂಟರ್‌ಪ್ರೖಸಸ್‌ ರೈತಪಯೋಗಿ ಪ್ಲಾಸ್ಟಿಕ್‌ ಚೀಲ ತಯಾರಿಸಿದೆ. ಗಾಳಿಮುಕ್ತ, ಕೀಟನಾಶಕ ರಹಿತ, ಸಾವಯವ ಸಂಗ್ರಹಣೆ ಇರುವ ಪರಿಸರ ಸ್ನೇಹಿ ಪ್ಲಾಸ್ಟಿಕ್‌ ಇದಾಗಿದ್ದು, 7 ಏಳು ಪದರಗಳ ರಕ್ಷಣೆ ಇದೆ. ಆಹಾರ ಪದಾರ್ಥಗಳ ತಾಜಾತನ, ಸುವಾಸನೆ, ರುಚಿ ಉಳಿಸಬಹುದು ಎನ್ನುತ್ತಾರೆ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಪೂರ್ಣಿಮಾ.

 

Advertisement

● ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next