ಮುಧೋಳ: ಬರಗಾಲ, ಅತಿವೃಷ್ಟಿ, ಬೆಳೆದ ಬೆಳೆಗೆಸೂಕ್ತ ಬೆಲೆ ದೊರೆಯದಿರುವುದು ಸೇರಿದಂತೆ ಹತ್ತಾರುಸಮಸ್ಯೆ ಎದುರಿಸುವ ತಾಲೂಕಿನ ರೈತರಿಗೆ ಹೊಸಸಂಕಷ್ಟವೊಂದು ಶುರುವಾಗಿದೆ. ಬೇಸಿಗೆ ಬೆಳೆಯಾದಶೇಂಗಾ ಬೆಳೆ ತಿನ್ನಲು ಹಿಂಡು ಹಿಂಡಾಗಿ ನುಗ್ಗುತ್ತಿರುವ ನವಿಲುಗಳು ರೈತರನ್ನು ಕಂಗೆಡಿಸಿವೆ. ನವಿಲಿನ ಹಾವಳಿಗೆ ನಲುಗಿರುವ ಅನ್ನದಾತ ಅಸಹಾಯಕತೆಯಿಂದ ಕೈ ಕೈ ಹಿಸುಕಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಮೆಳ್ಳಿಗೇರಿ, ಹಲಗಲಿ ಮತ್ತು ಕಿಶೋರಿ ಭಾಗದಲ್ಲಿರುವ ಯಡಹಳ್ಳಿ ಚೀಂಕಾರರಕ್ಷಿತಾರಣ್ಯದಲ್ಲಿನ ನವಿಲುಗಳು ಆಹಾರ ಅರಸಿ ರೈತರ ಹೊಲಗಳಿಗೆ ಲಗ್ಗೆಯಿಡುತ್ತಿರುವುದರಿಂದ ರೈತರಹೊಲದಲ್ಲಿನ ಶೇಂಗಾ ಬೆಳೆಯ ಇಳುವರಿಯಲ್ಲಿಕುಂಠಿತವಾಗುವ ಭೀತಿ ಎದುರಾಗಿದೆ.
ಹಿಂಡು ಹಿಂಡಾಗಿ ದಾಳಿ: ಹಲಗಲಿ ಭಾಗದ ಹೊರವಲಯದಲ್ಲಿನ ಶೇಂಗಾ ಹೊಲಗಳಿಗೆಬೆಳಗ್ಗೆ ಹಾಗೂ ಸಂಜೆ ವೇಳೆ ಹಿಂಡು ಹಿಂಡಾಗುಲಗ್ಗೆಯಿಡುವ ನವಿಲುಗಳು ಶೇಂಗಾ, ಅಲಸಂದಿಬೆಳೆ ತಿಂದು ಹಾಳುಗೆಡುವುತ್ತಿವೆ. ನವಿಲುಗಳು ಬೆಳೆಹಾಳು ಮಾಡುತ್ತಿರುವುದರಿಂದ ಸಾಲಸೋಲ ಮಾಡಿಬೇಸಾಯ ಮಾಡಿರುವ ರೈತ ಕಂಗಾಲಾಗಿದ್ದಾನೆ.
ಅಸಹಾಯಕರಾದ ರೈತರು: ತಮ್ಮ ಹೊಲದಲ್ಲಿನವಿಲುಗಳು ಬೆಳೆಹಾನಿ ಮಾಡುತ್ತಿದ್ದರೂ ರೈತರು ಅಸಹಾಯಕರಾಗಿ ಮೂಕವಿಸ್ಮಿತರಂತೆ ನೋಡುವಂತಾಗಿದೆ. ಬೇರೆ ಪ್ರಾಣಿ, ಪಕ್ಷಿಯಾಗಿದ್ದರೆ ಬೆದರಿಸಿ ಅವುಗಳನ್ನು ಕಾಡಿಗೆ ಅಟ್ಟುತ್ತಿದ್ದೆವು. ಆದರೆ,ನವಿಲು ನಮ್ಮ ರಾಷ್ಟ್ರಪಕ್ಷಿ ಅವುಗಳನ್ನು ಬೆದರಿಸುವ ಭರದಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಇಲಾಖೆ ತನಿಖೆ ಹಾಗೂ ಕೋರ್ಟ್ ಕಚೇರಿ ಅಲೆದಾಡುವ ತಾಪತ್ರಯ ಎದುರಾಗುತ್ತದೆ. ಅದಕ್ಕಿಂತ ಅವುಗಳುತಿಂದು ಬಿಟ್ಟಷ್ಟನ್ನು ನಾವು ನಮ್ಮ ಉಪಜೀವನಕ್ಕೆಬಳಕೆ ಮಾಡಿಕೊಂಡರಾಯಿತು ಎಂಬ ನಿಲುವಿಗೆ ಬಂದಿದ್ದಾರೆ.
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ: ಕರ್ನಾಟಕದ ಮುಕುಟುಮಣಿಯಂತಿರುವ ಯಡಹಳ್ಳಿ ಚೀಂಕಾರರಕ್ಷಿತಾರಣ್ಯದ ಭದ್ರತೆಗೆ ಕಟಿಬದ್ಧರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಬೆಳೆಗಳ ಬಗ್ಗೆ ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಅದರಲ್ಲೂ ಮುಖ್ಯವಾಗಿ ಅರಣ್ಯ ಪ್ರದೇಶದ ವ್ಯಾಪ್ತಿಗೆ ಹೊಂದಿಕೊಂಡಿರುವ ಜಮೀನುಗಳಲ್ಲಿನ ಪ್ರಾಣಿಪಕ್ಷಿಗಳ ಹಾವಳಿ ತಡೆಯಲು ಅಧಿಕಾರಿಗಳು ಇದುವರೆಗೂ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದಿರುವುದು ರೈತರನ್ನು ಮತ್ತಷ್ಟುಕಂಗೆಡಿಸಿದೆ. ನವಿಲುಗಳು ಬೆಳೆ ಹಾನಿ ಮಾಡುವ ಬಗ್ಗೆ ಇತ್ತೀಚೆಗೆ ಹಲಗಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಮಧ್ಯೆ ನಡೆದ ಸಭೆಯಲ್ಲಿ ಗ್ರಾಮಸ್ಥರು ನವಿಲಿನ ಹಾವಳಿ ಬಗ್ಗೆ ಕ್ರಮ ಕೈಗೊಂಡು ರೈತರ ಬೆಳೆ ಉಳಿಸಿ ಎಂದು ಮೌಖೀಕವಾಗಿ ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಇನ್ನಾದರೂ ಅಧಿಕಾರಿಗಳು ನಮ್ಮ ಬೆಳೆಗಳ ಉಳಿವಿಗೆ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದ್ದಾರೆ.
ಅರಣ್ಯದಲ್ಲಿ ಆಹಾರದ ಕೊರತೆ: ನೆರೆಯ ಬೀಳಗಿ ಹಾಗೂ ಮುಧೋಳ ತಾಲೂಕಿನಲ್ಲಿ ಅಂದಾಜು9636 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ಆವರಿಸಿರುವ ಯಡಹಳ್ಳಿ ಚೀಂಕಾರ ರಕ್ಷಿತಾರಣ್ಯ ಪ್ರದೇಶದಲ್ಲಿಪ್ರಾಣಿಗಳಿಗೆ ಆಹಾರದ ಸಮಸ್ಯೆ ತಲೆದೋರಿದೆ.ಬಿರು ಬೇಸಿಗೆ ಸೆಕೆಗೆ ಬಾಯಾರುವ ಪ್ರಾಣಿ ಪಕ್ಷಿಗಳುನೀರು ಹಾಗೂ ಆಹಾರ ಅರಸಿ ರೈತರ ಜಮೀನುಗಳಿಗೆ ನುಗ್ಗುತ್ತಿವೆ.
ಹೆಚ್ಚುತ್ತಿದೆ ಕಾಡುಹಂದಿಗಳ ಹಾವಳಿ: ಒಂದೆಡೆನವಿಲಿನ ಹಾವಳಿ ರೈತರನ್ನು ಕಂಗೆಡಿಸಿದ್ದರೆ ಮತ್ತೂಂದೆಡೆಕಾಡುಹಂದಿಗಳ ಹಾವಳಿಯೂ ಹೆಚ್ಚುತ್ತಿದೆ. ಅರಣ್ಯಕ್ಕೆಹೊಂದಿಕೊಂಡಿರುವ ಕಬ್ಬು, ಗೋಧಿ ಯಂತಹಬೆಳೆಗಳ ಹೊಲಕ್ಕೆ ಹೆಚ್ಚಾಗಿ ರಾತ್ರಿ ವೇಳೆ ನುಗ್ಗುವಕಾಡುಹಂದಿಗಳು ರೈತರ ಬೆಳೆಯನ್ನು ಮನಸೋಇಚ್ಛೆನಾಶಗೊಳಿಸುತ್ತಿವೆ. ಸಂಬಂಧಿ ಸಿದ ಅಧಿ ಕಾರಿಗಳು ಶೀಘ್ರವೇ ಪ್ರಾಣಿಗಳ ಹಾವಳಿಯಿಂದ ಮುಕ್ತಿ ನೀಡಿ ನಮ್ಮ ಬೆಳೆಗಳನ್ನು ಉಳಿಸಿಕೊಡಬೇಕು ಎಂಬುದು ಚೀಂಕಾರ ರಕ್ಷಿತಾರಣ್ಯಕ್ಕೆ ಹೊಂದಿಕೊಂಡಿರುವ ರೈತರ ಆಗ್ರಹವಾಗಿದೆ.
ನಾವು ಸಾಲಸೋಲ ಮಾಡಿ ಹೊಲದಲಿ ಶೇಂಗಾ ಬೆಳೆದಿದ್ದೇವೆ.ಇಳುವರಿಯೂ ಚೆನ್ನಾಗಿಬಂದಿದೆ. ಆದರೆ, ನವಿಲುಗಳಹಾವಳಿಯಿಂದ ಬೆಳೆದ ಬೆಳೆ ಕೈಗೆ ಬರುತ್ತೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಪ್ರತಿದಿನ ಬೆಳಗ್ಗೆ ಹಾಗೂಸಂಜೆ ವೇಳೆ ಹೊಲಕ್ಕೆಹಿಂಡು ಹಿಂಡಾಗಿ ನುಗ್ಗುವನವಿಲುಗಳು ಶೇಂಗಾ ಬೆಳೆನಾಶಪಡಿಸುತ್ತಿವೆ. ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ನಮ್ಮ ಬೆಳೆಉಳಿಸಿಕೊಡಬೇಕು.
– ಹೆಸರು ಹೇಳಲಿಚ್ಚಿಸದ ಹಲಗಲಿ ರೈತ
ನವಿಲುಗಳ ಹಾವಳಿ ತಡೆಯುವ ಬಗ್ಗೆನಮ್ಮ ಮೇಲಧಿಕಾರಿಗಳಗಮನಕ್ಕೆ ತರುತ್ತೇನೆ.ರೈತರ ಹೊಲಗಳಲ್ಲಿ ಕಾಡುಪ್ರಾಣಿಗಳು ಹಾನಿಯುಂಟುಮಾಡಿದ್ದರೆ ಅವರಿಗೆಸಹಾಯಧನನೀಡಲಾಗುವುದು. ರೈತರು ತಮ್ಮ ಗದ್ದೆಯಲ್ಲಿ ಪ್ರಾಣಿಗಳಿಂದ ಬೆಳೆ ಹಾನಿಯಾಗಿದ್ದರೆ ನಮಗೆ ಮಾಹಿತಿ ನೀಡಿ ಪರಿಹಾರ ಪಡೆಯಬಹುದು.
– ಲಿಂಗಾರೆಡ್ಡಿಮಂಕಣಿ, ಮುಧೋಳ ವಲಯ ಅರಣ್ಯಾಧಿಕಾರಿ
-ಗೋವಿಂದಪ್ಪ ತಳವಾರ