ಬಂಗಾರಪೇಟೆ: ಕೆರೆಗಳು ತವರು ಎಂದು ಹೆಸರು ಪಡೆದಿರುವ ಜಿಲ್ಲೆಯಲ್ಲಿ ದಿನೇ ದಿನೆ ನಶಿಸಿ ಹೋಗುತ್ತಿವೆ. ಇತ್ತೀಚೆಗೆಸುರಿಯುತ್ತಿರುವ ಭಾರಿ ಮಳೆಗೆರಾಜಕಾಲುವೆಗಳಿಲ್ಲದೆ ಮಳೆ ನೀರು ಕೆರೆಗೆ ಸೇರದೆ ರೈತರ ಹೊಲ, ತೋಟಗಳಿಗೆ ನುಗ್ಗಿ ಬೆಳೆನಾಶ ಆಗುತ್ತಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷಕೆ.ನಾರಾಯಣಗೌಡ ಹೇಳಿದರು.
ತಾಲೂಕಾದ್ಯಂತ ಒತ್ತುವರಿಯಾಗಿರುವಕೆರೆ, ರಾಜಕಾಲುವೆ, ಗುಂಡುತೋಪುಗಳನ್ನುರಾಜ್ಯ ಹೈಕೋರ್ಟ್ ಆದೇಶದಂತೆ ತೆರವುಗೊಳಿಸಿ ಅಭಿವೃದ್ಧಿಪಡಿಸಬೇಕೆಂದು ಸಾಮೂಹಿಕ ನಾಯಕತ್ವ ರೈತಸಂಘದಿಂದ ತಾಲೂಕು ಕಚೇರಿ ಎದುರು ಹೋರಾಟ ಮಾಡಿ, ಶಿರಸ್ತೇದಾರ್ ರವಿಕುಮಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದರು.
ಹಣ ಲೂಟಿ: ಮನುಷ್ಯನ ದುರಾಸೆಯೇ ಕೆರೆಗಳ ಸರ್ವನಾಶಕ್ಕೆ ಮೂಲ ಕಾರಣವಾಗಿವೆ. ಮತ್ತೂಂದೆಡೆ ಪೂರ್ವಜರು ಬೆವರು ಸುರಿಸಿ ಕಟ್ಟಿ ಬೆಳೆಸಿದಂತಹ ಕೆರೆ, ರಾಜಕಾಲುವೆಗಳುಒತ್ತುವರಿದಾರರ ಪಾಲಾಗುತ್ತಿದ್ದರೂ ಒತ್ತುವರಿ ತೆರವುಗೊಳಿಸಲು ಜಿಲ್ಲಾಡಳಿತ, ತಾಲೂಕು ಆಡಳಿತ ವಿಫಲವಾಗಿವೆ. ಮತ್ತೂಂದೆಡೆ ಕೆರೆ, ರಾಜಕಾಲುವೆಗಳ ಅಭಿವೃದ್ಧಿಗೆ ನೂರಾರು ಕೋಟಿ ರೂ. ಅನುದಾನ ಬಿಡುಗಡೆ ಯಾಗುತ್ತಿದ್ದರೂ ಕೆರೆ ಹೆಸರಿನಲ್ಲಿ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿ ಮಾಡಿ ಕೋಟ್ಯಂತರರೂ. ಹಣ ಲೂಟಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಹುಡುಕಾಡಿದರೂ ಸಂಬಂಧಪಟ್ಟ ಇಲಾಖೆಗಳಿಂದ ಯಾವುದೇಕೆರೆ ಅಭಿವೃದ್ಧಿಯಾಗಿಲ್ಲ. ಅಭಿವೃದ್ಧಿ ಮಾಡದೆಟೆಂಡರ್‌ದಾರರು, ಅಧಿಕಾರಿಗಳು ಹಣಲೂಟಿ ಮಾಡುವ ದಂಧೆಯಲ್ಲಿ ತೊಡಗಿದ್ದರೂ ಇವರ ವಿರುದ್ಧ ಯಾವುದೇ ಕ್ರಮ ಏಕಿಲ್ಲ? ರಾಜಕಾರಣಿಗಳಒತ್ತಡಕ್ಕೆಮಣಿದುಒತ್ತುವರಿದಾರರತಂಟೆಗೂ ಹೋಗುತ್ತಿಲ್ಲ. ಇಷ್ಟೆಲ್ಲಾ ಅವ್ಯವಸ್ಥೆತಾಲೂಕಿನಲ್ಲಿ ತಾಂಡವವಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನೀರು ಸಂರಕ್ಷಿಸುತ್ತಿಲ್ಲ: ರೈತ ಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಮಾತನಾಡಿ,ಮತ್ತೂಂದೆಡೆ ಜನಪ್ರತಿನಿಧಿಗಳು ಕೆರೆಗಳನ್ನು ಉಳಿಸಿಕೊಂಡು ಪ್ರಕೃತಿದತ್ತವಾಗಿ ಬರುವ ಮಳೆ ನೀರು ಸಮರ್ಪಕವಾಗಿ ಸಂಗ್ರಹಿಸಲು ಕಾರ್ಯ ಮಾಡುತ್ತಿಲ್ಲ. ಸಾವಿರಾರು ಕೋಟಿ ಖರ್ಚು ಮಾಡಿ ನೀರಾವರಿ ಯೋಜನೆ ಜಾರಿ ಮಾಡುತ್ತೇವೆಂದು ಜನರ ತೆರಿಗೆ ಹಣದಲ್ಲಿ ಕಮಿಷನ್ ಪಡೆಯುತ್ತಿದ್ದಾರೆ ಎಂದುದೂರಿದರು.
ಕಷ್ಟಕ್ಕೆ ಸಿಕ್ಕ ಜಯ: ಭವಿಷ್ಯದ ಹಿತದೃಷ್ಟಿಯಿಂದ ಹೈಕೋರ್ಟ್ ರಾಜ್ಯಾದ್ಯಂತಒತ್ತುವರಿಯಾಗಿರುವ ಕೆರೆ, ರಾಜಕಾಲುವೆ, ಗುಂಡುತೋಪುಗಳನ್ನು ಸರ್ವೆ ಮಾಡಿಸಿ, ಎಷ್ಟೇ ಪ್ರಭಾಯಾಗಿದ್ದರೂ ಮುಲಾಜಿಲ್ಲದೆ ತೆರವುಗೊಳಿಸುವಂತೆ ಆದೇಶ ಮಾಡಿರುವುದುಪೂರ್ವಜರ ಕಷ್ಟಕ್ಕೆ ಹಾಗೂ ಕೆರೆ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಹೇಳಿದರು.
ಹೋರಾಟದಲ್ಲಿ ತಾಲೂಕು ಅಧ್ಯಕ್ಷ ಐತಾಂಡಹಳ್ಳಿ ಮುನ್ನಾ, ಹಸಿರು ಸೇನೆ ಜಿಲ್ಲಾಧ್ಯಕ್ಷಕಿರಣ್, ಜಿಲ್ಲಾ ಉಪಾಧ್ಯಕ್ಷ ಚಾಂದ್ ಪಾಷ, ಜಿಲ್ಲಾ ಕಾರ್ಯಾಧ್ಯಕ್ಷ ಮರಗಲ್ ಮುನಿಯಪ್ಪ, ಆಂಜಿ, ಮಂಜುನಾಥ್, ಬಾಬಾಜಾನ್, ನವಾಜ್, ಜುàರ್, ಜಾವೀದ್, ಘೌಸ್, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮಂಜುನಾಥ್, ಕದಿರಿನತ್ತ ಗುಲ್ಲಟ್ಟಿ ಚಲಪತಿ, ಬೂದಿಕೋಟೆ ಹೋಬಳಿ ಅಧ್ಯಕ್ಷ ನಾಗಯ್ಯ ಮುಂತಾದವರು ಉಪಸ್ಥಿತರಿದ್ದರು.