Advertisement

ಕಾರ್ಖಾನೆ ಅಭಿವೃದ್ಧಿಗೆ ರೈತರ ಸಹಕಾರ ಅವಶ್ಯ

12:26 PM Oct 23, 2017 | |

ಆಲಮೇಲ: ದೇಶದಲ್ಲಿ ಕಬ್ಬು ಬೆಳೆಯುವದರಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು ಕಬ್ಬು ಬೆಳೆಗಾರರು ಸಹಕಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ನೀಡಿದರೆ ಸಹಕಾರಿ ಕಾರ್ಖಾನೆ ಬೆಳೆಯುತ್ತದೆ ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.

Advertisement

ವಿರಕ್ತಮಠದಲ್ಲಿ ಇಂಡಿ ತಾಲೂಕಿನಿ ಮರಗೂರಿನ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಉದ್ಘಾಟನೆ ನಿಮಿತ್ತ ನಡೆದ ಕಾರ್ಖಾನೆ ಷೇರುದಾರರು, ರೈತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಹಕಾರಿ ಸಂಘದಲ್ಲಿ ಪ್ರಾಮಾಣಿಕತೆ ಇಲ್ಲದರಿಂದ ಹಾನಿಗಿಡಾಗುತ್ತಿದೆ. ಪ್ರಾಮಾಣಿಕತೆ ಇದ್ದರೆ ಸಹಕಾರಿ ಸಂಘಗಳು ಬೆಳೆಯುತ್ತವೆ. ಪ್ರಾಮಾಣಿಕತೆ, ಜ್ಯಾತ್ಯತೀತ, ಪಕ್ಷಾತೀತವಾಗಿದ್ದರೆ ಸಂಘ ಬೆಳೆಯಲು ಸಾಧ್ಯ. ಸಿಂದಗಿ ಇಂಡಿ ಎರಡು ತಾಲೂಕಿನ ಕಬ್ಬು ಬೆಳೆಗಾರರು, ರೈತರ ಷೇರಿನಿಂದ ನಿರ್ಮಾಣವಾಗಬೇಕಾಗಿದ್ದ ಮರಗೂರ ಭೀಮಾಶಂಕರ ಸಕ್ಕರೆ ಕಾರ್ಖಾನೆ ಅಂದಿನ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹಾಗೆ ಉಳಿದುಕೊಂಡಿತು. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಈಡೇರಿಸಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. 37 ವರ್ಷದ ಕನಸು ಇಂದು ನನಸಾಗಲಿದೆ. ಇದರಿಂದ ಈ ಭಾಗದ ಕಬ್ಬು ಬೆಳೆಗಾರರ ಜೀವನಮಟ್ಟ ಸುಧಾರಣೆ ಮಾಡಲಿದೆ.

ಸರ್ಕಾರ ಸಹಕಾರಿ ಸಂಘಕ್ಕೆ ಅತ್ಯಂತ ಹೆಚ್ಚಿನ ಅನುದಾನದ ಮೊತ್ತ ನೀಡಿರುವುದು ಈ ಕಾರ್ಖಾನೆಗೆ ಮಾತ್ರ. ಅನೇಕ ಸಹಕಾರಿ ಬ್ಯಾಂಕುಗಳಿಂದ ಒಟ್ಟು 192 ಕೋಟಿ ರೂ. ಸಾಲ ಪಡೆದುಕೊಂಡು ಸುದೀರ್ಘ‌ವಾದಂತ ಹೈಟೆಕ್‌ ಕಾರ್ಖಾನೆ ನಿರ್ಮಾಣ ಮಾಡಲಾಗಿದೆ. 3,500 ಟನ್‌ ಕಬ್ಬು ನುರಿಸಲಿದ್ದು 14 ಮೇ.ವ್ಯಾ. ವಿದ್ಯುತ್‌ ಉತ್ಪಾದನೆ ಮಾಡಲಿದೆ. ಕಾರ್ಖಾನೆ ನಿರ್ಮಾಣಕ್ಕೆ ಪಡೆದುಕೊಂಡ ಸಾಲ 7 ವರ್ಷದಲ್ಲಿ ಮರುಪಾವತಿ ಮಾಡಬೇಕು. ಅದಕ್ಕೆ ರೈತರು ಷೇರು ಹೊಂದಿದ ಈ ಕಾರ್ಖಾನೆಗೆ ಕಬ್ಬು ನೀಡಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಅ. 24ರಂದು ಮುಖ್ಯಮಂತ್ರಿಗಳಿಂದ ಕಾರ್ಖಾನೆ ಉದ್ಘಾಟನೆ ಆಗಬೇಕಿತ್ತು. ಅಂದು ರಾಷ್ಟ್ರಪತಿಗಳು ರಾಜ್ಯಕ್ಕೆ ಆಗಮಿಸುವುದರಿಂದ ಕಾರ್ಯಕ್ರಮವನ್ನು ನ. 10ಕ್ಕೆ ಮುಂದೂಡಲಾಗಿದೆ ಎಂದು ಹೇಳಿದರು. ವಿರಕ್ತಮಠದ ಜಗದೇವ ಮಲ್ಲಿಭೂಮ್ಮಯ್ಯ ಸ್ವಾಮೀಜಿ, ಮಲಘಾಣದ ಯಶವಂತ್ರಾಯಗೌಡ ರೂಗಿ ಮಾತನಾಡಿದರು. ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಶಿವುಕುಮಾರ ಗುಂದಗಿ ಅಧ್ಯಕ್ಷತೆ ವಹಿಸಿದ್ದರು. ಡಾ| ಸಂದೀಪ ಪಾಟೀಲ, ಶರಣಬಸವ ಶರಣರು, ಬಸವರಾಜ ಧನಶ್ರೀ, ರಾಜಅಮ್ಮದ ಬೆಣ್ಣೆಸೂರ, ಶ್ರೀಮಂತ ದುದ್ದಗಿ, ಸಿದ್ದು ಕೋಳಾರಿ ಇದ್ದರು.

ವೇತಾಳ ಜ್ಯೋಶಿ, ಹನುಮಂತ ಹೂಗಾರ, ಐಶ್ವರ್ಯ ಕೋಳಾರಿ ಸ್ವಾಗತಗೀತೆ ಹಾಡಿದರು. ಕಾರ್ಖಾನೆ ಅಧಿಕಾರಿ
ಶ್ರೀಶೈಲ ಮಠಪತಿ ಸ್ವಾಗತಿಸಿದರು. ಶಿವಶರಣ ಗುಂದಗಿ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next