Advertisement
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಮೆ ಯೋಜನೆಯಿಂದ ರೈತರಿಗೆ ಲಾಭಕ್ಕಿಂತ ಹಾನಿಯೇ ಹೆಚ್ಚು ಆಗುತ್ತಿದೆ ಎಂಬ ದೂರುಗಳಿದ್ದವು. ಈ ಬಗ್ಗೆ ಆರು ವರ್ಷಗಳ ಅಧ್ಯಯನ ನಡೆಸಿದಾಗ ವಿಮೆ ಕಂಪನಿಗೆ ಸುಮಾರು 2 ಸಾವಿರ ಕೋಟಿ ರೂ. ಲಾಭ ಆಗಿರುವುದು ಬಹಿರಂಗವಾಗಿತ್ತು. ಹಾಗಾಗಿ ಸರ್ಕಾರದ ಮಾರ್ಗಸೂಚಿಗಳಲ್ಲಿ ಬದಲಾವಣೆ ತರಲಾಗುತ್ತಿದ್ದು, ಶೇ. 100 ರಲ್ಲಿ ಶೇ. 20 ಕ್ಕಿಂತ ಅಧಿಕ ಲಾಭವನ್ನು ಕಂಪನಿ ಪಡೆಯುವಂತಿಲ್ಲ ಮತ್ತು ಇನ್ನುಳಿದ ಶೇ. 80 ರಷ್ಟು ಸರ್ಕಾರಕ್ಕೆ ಸೇರುವಂತೆ ನಿಯಮ ರೂಪಿಸಲಾಗಿದೆ ಎಂದು ತಿಳಿಸಿದರು.
ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂ. ಮೀಸಲಿಡಲಾಗಿದೆ. ಸದ್ಯ ರಾಜ್ಯದ 24 ಜಿಲ್ಲೆಗಳ 106 ತಾಲೂಕುಗಳಲ್ಲಿ ಕೃಷಿ ಭಾಗ್ಯ ಯೋಜನೆ ಜಾರಿಯಲ್ಲಿದೆ. ರೈತರ ಬೇಡಿಕೆ ಮತ್ತು ಉಸ್ತುವಾರಿ ಸಚಿವರ ಮನವಿಯಂತೆ ಯೋಜನೆಯನ್ನು ಬೀದರ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಜತೆಗೆ ಸೂಕ್ಷ್ಮ ನೀರಾವರಿ ಮತ್ತು ಹನಿ ನೀರಾವರಿ ಸೇರಿದಂತೆ ಜಿಲ್ಲೆಗೆ ಯಂತ್ರೋಪಕರಣಗಳ ವಿತರಣೆಗೆ ಹೆಚ್ಚುವರಿ ಅನುದಾನವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಕೇಂದ್ರದ ವಿಳಂಭ ಧೋರಣೆ ನಡುವೆಯೂ ರಾಜ್ಯದಲ್ಲಿ 4600 ಕೋಟಿ ರೂ. ಬರ ಪರಿಹಾರ ನೀಡಲಾಗಿದೆ. 1700 ಕೋಟಿ ರೂ. ಮುಂಗಾರು ಹಂಗಾಮಿನ ವಿಮೆ ಪರಿಹಾರ ಇತ್ಯರ್ಥ ಮಾಡಲಾಗಿದೆ. ರಾಜ್ಯದಲ್ಲಿ ಒಂದು ಸಾವಿರ ಕೋಟಿ ವೆಚ್ಚದಲ್ಲಿ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲಾಗಿದೆ. ಜತೆಗೆ ಸರ್ಕಾರ ಈ ಬಜೆಟ್ ನಲ್ಲಿಯೂ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಇದು ರೈತರ ಬಗ್ಗೆ ಸರ್ಕಾರದ ಬದ್ದತೆಗೆ ಸಾಕ್ಷಿ ಎಂದು ಹೇಳಿದರು.
Related Articles
Advertisement
ಕ-ಕ ಭಾಗದಲ್ಲಿ ಖಾಲಿ ಇರುವ 42 ಕೃಷಿ ಅಧಿಕಾರಿಗಳು ಮತ್ತು 231 ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ತುಂಬಲು ಕೆಪಿ.ಸ್‌ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟಾರೆ ರಾಜ್ಯಾದ್ಯಂತ ಕೃಷಿ ಇಲಾಖೆಯಲ್ಲಿ979 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.