ಮಂಡ್ಯ: ಜಿಲ್ಲೆ ಕೃಷಿಗೆ ಹೆಸರುವಾಸಿಯಾಗಿದೆ. ಭತ್ತ, ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಅದರಂತೆ ರಾಜಕೀಯದಲ್ಲೂ ಇಂಡಿಯಾದಲ್ಲಿ ಸದ್ದು ಮಾಡುತ್ತದೆ. ಚುನಾವಣೆ ಬಂತೆಂದರೆ ಗೆಲುವಿಗಾಗಿ ಜಿದ್ದಾಜಿದ್ದಿನ ಹೋರಾಟವೂ ನಡೆಯುತ್ತದೆ. ಅದರಂತೆ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಕಾವು ಏರಿದೆ.
ಪ್ರತಿ ದಿನ ಗದ್ದೆ, ಹೊಲ, ತೋಟ ಎಂದು ಕೃಷಿಚಟುವಟಿಕೆಗಳಲ್ಲಿ ತೊಡಗುತ್ತಿದ್ದ ರೈತರು ಕಳೆದ 20 ದಿನಗಳಿಂದ ಕಡಿಮೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದರಿಂದ ವ್ಯವಸಾಯದತ್ತ ಮುಖ ಮಾಡುತ್ತಿಲ್ಲ.
ಕೃಷಿ ಕೂಲಿಕಾರ್ಮಿಕರ ಕೊರತೆ: ಪ್ರಸ್ತುತ ಜಿಲ್ಲೆಯಲ್ಲಿ ಭತ್ತ ಹಾಗೂ ರಾಗಿ ಬೆಳೆಗಳ ಫಸಲು ಕಟಾವಿಗೆ ಬಂದಿದೆ. ಆದರೆ, ಗ್ರಾಮ ಪಂಚಾಯಿತಿ ಚುನಾವಣೆಯಿಂದ ಕೃಷಿ ಕೂಲಿ ಕಾರ್ಮಿಕರ ಕೊರತೆ ಕಾಡತೊಡಗಿದೆ. ಪ್ರತಿದಿನಪ್ರಚಾರಕ್ಕೆಂದುತೆರಳುವಮಂದಿಕೃಷಿಕೆಲಸಕಾರ್ಯಗಳಿಗೆ ವಿರಾಮ ಹಾಕಿದ್ದಾರೆ. ಇದರಿಂದ ಭತ್ತ ಹಾಗೂ ರಾಗಿ ಕಟಾವು ವಿಳಂಬವಾಗುತ್ತಿದೆ.
ಅಭ್ಯರ್ಥಿಗಳ ಹಿಂದೆ ದಂಡು: ಒಂದೊಂದು ಮೀಸಲು ಸ್ಥಾನಕ್ಕೆ ಕನಿಷ್ಠ 4ರಿಂದ 5 ಮಂದಿ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವುದರಿಂದ ಪ್ರತಿ ಅಭ್ಯರ್ಥಿಗಳ ಹಿಂದೆ 5 ರಿಂದ 10 ಮಂದಿ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ದಿನ ತಿಂಡಿ, ಊಟ, ಹಾಗೂ ,ಖರ್ಚಿಗೆ ಹಣ ಸಿಗುತ್ತಿರುವುದರಿಂದ ಚುನಾವಣೆಯಲ್ಲೇ ಮಗ್ನರಾಗಿದ್ದಾರೆ. ತಂಡೋಪ ತಂಡಗಳಾಗಿ ಪ್ರಚಾರ ನಡೆಯುತ್ತಿದೆ.
ಕೆಲಸ ನಿಭಾಯಿಸುತ್ತಿರುವ ಮಹಿಳೆಯರು: ಗ್ರಾಮದ ಗಂಡಸರು ಚುನಾವಣೆಯಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಮಹಿಳೆಯರು ಕೃಷಿ ಚಟುವಟಿಕೆಗಳನ್ನು ನಿಭಾಯಿಸುವಂತಾಗಿದೆ. ಮಹಿಳಾ ಕಾರ್ಮಿಕರು ಮುಯ್ನಾಳುಗಳನ್ನಾಗಿ ಮಾಡಿಕೊಂಡು ಭತ್ತಹಾಗೂ ರಾಗಿ ಕಟಾವಿಗೆ ತೆರಳುತ್ತಿದ್ದಾರೆ.
ಒತ್ತಡಕ್ಕೆ ಪ್ರಚಾರ: ಕೆಲವು ರೈತರು ಸಂಬಂಧಿಕರ ಒತ್ತಡಕ್ಕೆ ಮಣಿದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.ಗ್ರಾಮದಲ್ಲಿ ಸ್ನೇಹಿತರು, ಸಂಬಂಧಿಕರೇ ಅಭ್ಯರ್ಥಿಗಳಾಗಿರುವುದರಿಂದ ನನ್ನ ಪರವಾಗಿ ಪ್ರಚಾರ ಮಾಡಲಿಲ್ಲ ಎಂದು ಅಸಮಾಧಾನ, ಮನಸ್ತಾಪ ಬರಬಾರದು ಎಂಬ ಉದ್ದೇಶದಿಂದ ಪ್ರಚಾರದಲ್ಲಿ ತೊಡಗಿಸಿಕೊಂಡರೆ, ಮತ್ತೆ ಕೆಲವರು ಇಬ್ಬರೂಅಭ್ಯರ್ಥಿಗಳು ನಮ್ಮವರೇ ಒಬ್ಬರ ಪರ ಪ್ರಚಾರ ಮಾಡಿದರೆ ಮತ್ತೂಬ್ಬರಿಗೆ ನಿಷ್ಠುರ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ತಟಸ್ಥರಾಗಿದ್ದು, ಸದ್ದಿಲ್ಲದೆ ಹೊಲ, ಗದ್ದೆಗಳಿಗೆ ತೆರಳುತ್ತಾರೆ. ಇತ್ತ ನಮ್ಮ ಸಂಬಂಧಿಕರೇ ನಿಂತಿದ್ದಾರೆ. ಅತ್ತನನ್ನ ಸ್ನೇಹಿತನೂ ನಿಂತಿದ್ದಾನೆ. ಯಾರ ಪರ ಪ್ರಚಾರಮಾಡುವುದು. ಅದಕ್ಕೆ ಯಾರ ಕೈಗೂ ಸಿಗದಂತೆ ಮೌನವಾಗಿರುವುದು ಒಳ್ಳೆಯದು ಎಂದು ಗ್ರಾಮದ ರೈತರೊಬ್ಬರು ತಿಳಿಸಿದರು.
-ಎಚ್.ಶಿವರಾಜು