ದೇವನಹಳ್ಳಿ: ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವುದರಿಂದ ರೈತರಿಗೆ ಅನುಕೂಲವಾಗುತ್ತಿದೆ. ರೈತರು ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕು. ಈ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ದಿನ್ನೂರು ರಾಮಣ್ಣ ತಿಳಿಸಿದರು.
ತಾಲೂಕಿನ ಕುಂದಾಣ ಗ್ರಾಮದ ಕುಂದಾಣ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ನಡೆದ 2019-20ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಮಹಾಸಭೆಯಲ್ಲಿ ಮಾತನಾಡಿ, ರೈತರ ಜೀವನಾಡಿಯೇ ನಮ್ಮ ಸಹಕಾರಸಂಘವಾಗಿದೆ. ವ್ಯವಸಾಯ ಸೇವಾ ಸಹಕಾರ ಸಂಘಗಳಿಂದ ರೈತರಿಗೆ ಅನೇಕ ಸೌಲಭ್ಯ ನೀಡಲಾಗುತ್ತಿದೆ. ಸಂಘವು 1 ಲಕ್ಷ 36 ಸಾವಿರ ರೂ.ಗಳಷ್ಟು ಲಾಭದಲ್ಲಿದೆ ಎಂದು ಹೇಳಿದರು.
ಕೋವಿಡ್ ದಿಂದ ಲಾಭ ಕಡಿಮೆ: ಸಂಘದ ಉಪಾಧ್ಯಕ್ಷರು, ನಿರ್ದೇಶಕರೊಂದಿಗೆ ಸಂಘದ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಚರ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣವಾಗುತ್ತದೆ. ಸಂಘದಲ್ಲಿ 1885 ಸದಸ್ಯರಿದ್ದು, 581 ಸದಸ್ಯರು ಕೆಸಿಸಿ ಸಾಲವನ್ನು ಪಡೆದುಕೊಂಡಿದ್ದಾರೆ. 3 ಕೋಟಿ 52ಲಕ್ಷ ಸಾಲ ನೀಡಲಾಗಿದೆ. ಕೋವಿಡ್ ದಿಂದ ಲಾಭ ಕಡಿಮೆಯಾಗಿದೆ. ಮುಂದಿನ ವರ್ಷದಲ್ಲಿ ಲಾಭ ಹೆಚ್ಚಾಗುತ್ತದೆ. ರೈತರಿಗೆ ಹೆಚ್ಚಿನ ಸೌಲಭ್ಯ ನೀಡುವುದರ ಮೂಲಕ ಸಂಘವನ್ನು ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸಬೇಕು. ಸಂಘದ ಅಭಿವೃದ್ಧಿ ನಮ್ಮ ಗುರಿಯಾಗಿದೆ. ಎಲ್ಲರ ಸಹಕಾರ ಅವಶ್ಯ ಎಂದು ಹೇಳಿದರು.
ಕಾಲಕಾಲಕ್ಕೆ ಸಾಲ ಸೌಲಭ್ಯ: ಪಿಕಾರ್ಡ್
ಬ್ಯಾಂಕ್ ನಿರ್ದೇಶಕ ಪಟಾಲಪ್ಪ ಮಾತನಾಡಿ, ಕುಂದಾಣ ವಿಎಸ್‌ಎಸ್‌ಎನ್‌ನಿಂದ ರೈತರಿಗೆ ಸಾಕಷ್ಟು ಅನುಕೂಲಗಳನ್ನು ಕಲ್ಪಿಸಲಾಗಿದೆ.ರೈತರಿಗೆ ಕಾಲ ಕಾಲಕ್ಕೆ ಸಾಲ ಸೌಲಭ್ಯಗಳನ್ನುನೀಡುತ್ತಿದೆ. ಸಹಕಾರ ಸಂಘದ ತತ್ವದಡಿಯಲ್ಲಿಕಾರ್ಯನಿರ್ವಹಿಸುತ್ತಿದೆ ಎಂದರು.
ಸಂಘದ ಉಪಾಧ್ಯಕ್ಷೆ ಭಾಗ್ಯಮ್ಮ,ನಿರ್ದೇಶಕರಾದ ಚನ್ನಕೃಷ್ಣಪ್ಪ, ಮಂಜುನಾಥ್, ಬಸವರಾಜ್, ಮಧು, ಪ್ರಭಾಕರ್, ಮಲ್ಲಪ್ಪ, ವಿಜಯ್, ಸುಶೀಲಮ್ಮ, ಚಿಕ್ಕಮುನಿಶಾಮಪ್ಪ,ಗೋವಿಂದರಾಜು, ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ಪ್ರಕಾಶ್, ವಿಎಸ್ ಎಸ್‌ಎನ್‌ಸಿಇಒಕೆ.ರಮೇಶ್, ಕೆ.ಎಂ.ಸುಮ, ಸಹಾಯಕ ತಿಮ್ಮರಾಯಪ್ಪ, ಮುಖಂಡ ಬಾಲಕೃಷ್ಣ ಹಾಜರಿದ್ದರು.