ಯಾದಗಿರಿ: ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿದ್ದು, ಇದರಿಂದ ರೈತ ಸಮುದಾಯಕ್ಕೆ ಲಾಭವಾಗಲಿದೆ ಎಂದು ರಾಯಚೂರು-ಯಾದಗಿರಿ ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ವಲಯದ ಅಮೂಲಾಗ್ರಸುಧಾರಣೆ ಮತ್ತು ಅನ್ನದಾತರಿಗಾಗಿ ಕೇಂದ್ರ ಸರ್ಕಾರ 3 ಹೊಸ ಕಾಯ್ದೆ ಅಂಗೀಕರಿಸಿ ಜಾರಿಗೊಳಿಸುವುದರಿಂದರೈತರಿಗೆ ಅನುಕೂಲವಾಗಲಿದೆ. ಕೇಂದ್ರ ಕೃಷಿ ಸಚಿವರು ಮಂಡಿಸಿದ ಕೃಷಿ ವಲಯಕ್ಕೆ ಸಂಬಂ ಧಿಸಿದಂತೆ 3 ಮಸೂದೆಗಳು ಮೊದಲು ತಜ್ಞರ ಸಮಿತಿ, ನೀತಿ ಆಯೋಗ ಸಭೆಯಲ್ಲಿ ಮತ್ತು 12ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ ವಿವಿಧ ಹಂತದಲ್ಲಿ ಚರ್ಚೆಯಾಗಿ ಕೃಷಿ ಕ್ಷೇತ್ರದಲ್ಲಿ ಬದಲಾವಣೆ ತಂದು ರೈತರ ಕಲ್ಯಾಣದ ಉದ್ದೇಶವಿದೆ ಎಂದರು.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ ಹಾಗೂ ರೈತರ ಬೆಲೆ ಭರವಸೆ ಎರಡು ಕೃಷಿ ತಿದ್ದುಪಡಿ ಮಸೂದೆಗಳಿಗೆ ಲೋಕಸಭೆ- ರಾಜ್ಯಸಭೆಗಳಲ್ಲಿ ಅನುಮೋದನೆ ಹಾಗೂ ರಾಷ್ಟ್ರಪತಿಗಳಿಂದ ಒಪ್ಪಿಗೆ ದೊರಕಿದೆ. ಕೃಷಿ ಸೇವೆಗಳ (ಒಪ್ಪಂದ ಮತ್ತು ಅಗತ್ಯ ಸರಕು) ಮಸೂದೆಗೆ ಸದ್ಯ ಲೋಕಸಭೆಯಲ್ಲಿ ಅನುಮೋದನೆ ದೊರಕಿದೆ ಎಂದರು.
ಕೃಷಿ ಕ್ಷೇತ್ರ ಸಂಪೂರ್ಣ ಪಾರ ದರ್ಶಕವಾಗಲಿದ್ದು, ಆಹಾರ ಕೊರತೆ ನೀಗಿಸುವುದಕ್ಕೆ ಜಾರಿಯಲ್ಲಿರುವ ಕಾನೂನುಗಳು ರೈತರ ಕಟ್ಟಿ ಹಾಕಿರುವುದು, ಈ ಸಂಕಲನದಿಂದ ರೈತರು ಮುಕ್ತವಾಗಿಸಿ ಸ್ವಾತಂತ್ರ್ಯ ಸದೃಢ ಬದುಕು ಕಟ್ಟಿಕೊಳ್ಳಲು ಹೊಸ ಕಾಯ್ದೆಗಳು ಅನುಕೂಲ ಎಂದರು.
ಕನಿಷ್ಟ ಬೆಂಬಲ ಬೆಲೆ ಯೋಜನೆ, ಕೃಷಿ ಮಾರುಕಟ್ಟೆ ಯಥಾ ರೀತಿ ಮುಂದುವರಿಯುತ್ತದೆ. ಅಲ್ಲದೇ ಬೆಂಬಲ ಬೆಲೆ ರದ್ದಾಗುವುದಿಲ್ಲ. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ರೈತರ ಉತ್ಪಾದನಾ ವೆಚ್ಚಕ್ಕೆ 1.5ರಿಂದ 2 ಪಟ್ಟು ಹೆಚ್ಚು ಬೆಲೆ ನಿಗದಿಪಡಿಸಲಾಗುತ್ತದೆ. ಈ ಬಗ್ಗೆ ವಿಪಕ್ಷಗಳು ತಪ್ಪು ಮಾಹಿತಿ ನೀಡುತ್ತಿವೆ ಎಂದರು.
ಈ ವೇಳೆ ಜಿಲ್ಲಾಧಕ್ಷ ಡಾ| ಶರಣಭೂಪಾಲರಡ್ಡಿ, ಮಾಜಿ ಶಾಸಕಡಾ| ವೀರಬಸವಂತರಡ್ಡಿ ಮುದ್ನಾಳ,ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿಚಂದ್ರಶೇಖರ್ ಮಾಗನೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಂದ್ರನಾಥ ನಾದ, ಗುರು ಕಾಮ ಇತರರು ಇದ್ದರು.