Advertisement

ರೈತರು ಉದ್ಯಮಿಗಳಾಗಿ ಆರ್ಥಿಕವಂತರಾಗಿ; ಡಾ|ಚನ್ನಬಸವಶ್ರೀ

06:30 PM Dec 20, 2022 | Team Udayavani |

ಜಮಖಂಡಿ: ರೈತರು ಕೃಷಿಯನ್ನು ಉದ್ಯಮವನ್ನಾಗಿಸಿಕೊಂಡು ಆರ್ಥಿಕವಾಗಿ ಸಬಲರಾದಾಗ ದೇಶ ಆರ್ಥಿಕ ಉತ್ತಮಗೊಳ್ಳಲು ಸಾಧ್ಯವೆಂದು ಓಲೇಮಠದ ಡಾ| ಚನ್ನಬಸವ ಶ್ರೀ ಹೇಳಿದರು.

Advertisement

ಸಾವಳಗಿಯಲ್ಲಿ ನೂತನವಾಗಿ ಕಬ್ಬಿಣರಸ ಉತ್ಪಾದನಾ ಘಟಕ ಉದ್ಘಾಟನೆ ಮತ್ತು ಜಿನಸೇನ ಅಲ್ಪ ಸಂಖ್ಯಾತರ ಶಿಕ್ಷಣ ಸಂಸ್ಥೆ ಮಾತೃಛಾಯಾ ಶಾಲಾ ಕಟ್ಟಡದ ಅಡಿಗಲ್ಲು ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬ ರೈತ ಸಾವಯವ ಕೃಷಿ ಪದ್ದತಿ ರೂಢಿಸಿಕೊಂಡು ಕೃಷಿ ನಡೆಸುವ ಕಾಲ ಮತ್ತೇ ಬರಲಿದೆ. ಕ್ರಿಮಿನಾಶಕಗಳು ಆರೋಗ್ಯಕ್ಕೆ ಹಾನಿಕರವಾಗಿವೆಎಂದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿ, ರೈತ ಆರ್ಥಿಕವಾಗಿ ಬೆಳೆಯಬೇಕಾದರೆ ಉದ್ಯೋಗದಲ್ಲಿ ಹೆಚ್ಚು ಆಸಕ್ತನಾಗಬೇಕು.

ಬೆಳೆದ ಬೆಳೆಗೆ ಸೂಕ್ತ ಬೆಂಬಲ ಬೆಲೆ ಲಭಿಸಲು ಸಾವಯವ ಕೃಷಿ ಪದ್ದತಿಗೆ ಶರಣಾಗಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕದಲ್ಲಿ ವ್ಯತ್ಯಾಸಗಳು ಕಂಡು ಬಂದಿದ್ದು, ಯಾರನ್ನು ನಂಬುವ ಸ್ಥಿತಿಯಲ್ಲಿಲ್ಲ. ರೈತನು ಉದ್ಯಮಿದಾರನಾದರೆ ಮಾತ್ರ ಆತನಿಗೆ ಸಾಲದ ಸಂಕಷ್ಟ ತಪ್ಪಲು ಸಾಧ್ಯ. ಸರ್ಕಾರಗಳು ರಿಯಾಯತಿಯಲ್ಲಿ ಸಾಲ ಸೌಲಭ್ಯ ಒದಗಿಸುತ್ತಿದ್ದು, ಸದುಪಯೋಗ ಮಾಡಿಕೊಳ್ಳಬೇಕೆಂದರು.

ಶಿವಮೊಗ್ಗದ ಸುಭೀಕ್ಷಾ ಆರ್ಗಾನಿಕ ಸಂಸ್ಥೆ ಅಧ್ಯಕ್ಷ ಆನಂದ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನಿಗಳಾದ ಡಾ| ಟಿ.ಟಿ.ಭೋರ್ಸೆ, ಎ.ಚಕ್ರವರ್ತಿ, ಡಾ| ಸಂಜಯ ಪಾಟೀಲ, ಡಾ| ಕೆ.ಆರ್‌. ಹುಲ್ಲುನಾಜೇಗೌಡ, ಅಪರಾಧ ವಿಭಾಗದ ಎಸ್ಪಿ ಜಿನೇಂದ್ರ ಖನಗಾವಿ, ಪ್ರಶಾಂತ ಭಾಗವತ್‌, ಅಭಯ ನಾಂದ್ರೇಕರ ಮಾತನಾಡಿದರು.

Advertisement

ರಾಜಸ್ಥಾನ ತಿಜಾರಾ ಪದ್ಮಾವತಿಧಾಮದ ಸೌರಭಸೇನ ಭಟ್ಟಾರಕಜೀ ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ಜಗಸೀಶ ಗುಡಗುಂಟಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಜಿ.ಎಸ್‌.ನ್ಯಾಮಗೌಡ, ಆರ್‌  .ಟಿ.ಪಾಟೀಲ, ಪತ್ರಕರ್ತ ಗುರುರಾಜ ವಾಳ್ವೆಕರ, ಸಿ.ಟಿ.ಉಪಾಧ್ಯೆ, ಧಾರವಾಡದ ಖೋತ, ಕಿಶನ್‌ ಚಕ್ರವರ್ತಿ, ಸಂಗಪ್ಪ ಲೋಬೋಗೋಳ, ಡಾ| ಆನಂದ ಉಪಾಧ್ಯೆ, ಸಾವಳಗಿ ಗ್ರಾಪಂ ಅಧ್ಯಕ್ಷೆ ಸುನಂದಾ ಮಾನೋಜ, ಉಪಾಧ್ಯಕ್ಷೆ ಮನ್ನುಮತಿ ಉಪಾಧ್ಯೆ, ಕೃಷಿ ಸಹಾಯಕ ನಿರ್ದೆಶಕ ಬಿ.ಜಿ.ಬುಜರುಖ್‌, ಶ್ರೀಮಂತವ್ವ ಚಂದು ಆಲಗೂರ ಇದ್ದರು.ತವನಪ್ಪ ಆಲಗೂರ ಸ್ವಾಗತಿಸಿದರು. ಚಿತ್ತ್ರಂಜನ್‌ ನಾಂದ್ರೇಕರ ನಿರೂಪಿಸಿದರು. ಪಾಶ್ವನಾಥ ಉಪಾಧ್ಯೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next