Advertisement

ಪಿಕೆಪಿಎಸ್‌ ಬೆಳೆಯಲು ರೈತರೇ ಆಧಾರ ಸ್ತಂಭ: ಚಿಕ್ಕೊಂಡ

07:50 PM Sep 24, 2022 | Shwetha M |

ಬಸವನಬಾಗೇವಾಡಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹೆಮ್ಮರವಾಗಿ ಬೆಳೆಯಬೇಕಾದರೆ ಅದಕ್ಕೆ ಆಧಾರ ಸ್ತಂಭವೇ ಅನ್ನದಾತರು ಎಂದು ಪಿಕೆಪಿಎಸ್‌ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಹೇಳಿದರು.

Advertisement

ಶುಕ್ರವಾರ ಪಟ್ಟಣದಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 78ನೇ ವಾರ್ಷಿಕ ಮಹಾಸಭಾ ಹಾಗೂ ಸಂಘದಿಂದ ಬೀಜ ಹಾಗೂ ರಸಗೊಬ್ಬರ ಗೋದಾವನ ನಿರ್ಮಾಣ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರೈತರು ತಮ್ಮ ಸಾಲವನ್ನು ಸಕಾಲದಲ್ಲಿ ಮರು ಪಾವತಿ ಮಾಡಿರುವುದರಿಂದ ಸಹಕಾರಿ ಸಂಘಗಳು ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ. ರೈತರ ಅನುಕೂಲಕ್ಕಾಗಿ ನಮ್ಮ ಸಂಘದಿಂದ ಕಡಿಮೆ ದರದಲ್ಲಿ ಬೀಜ ಹಾಗೂ ರಸಗೊಬ್ಬರ ನೀಡುತ್ತಿದ್ದು. ಗೋದಾವನ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಈಗಾಗಲೇ ನಮ್ಮ ಸಂಘದಿಂದ ರೈತರಿಗೆ ಅಗತ್ಯ ಇರುವ ಬೀಜ ಹಾಗೂ ರಸಗೊಬ್ಬರ, ದ್ರಾಕ್ಷಿ ಇನ್ನಿತರ ಔಷಧೋಪಚಾರವನ್ನು ಕಡಿಮೆ ದರದಲ್ಲಿ ನೀಡುತ್ತಿದ್ದು. ನಮ್ಮ ಸ್ವಂತ ಜಾಗೆಯಲ್ಲಿ ಇಂದು ಬೀಜ ಹಾಗೂ ರಸಗೊಬ್ಬರ ಗೋದಾವನ ನಿರ್ಮಿಸಲಾಗುವುದು. ಎಂದು ಹೇಳಿದರು.

ರೈತರು ಇದರ ಸದುಪಯೋಗವನ್ನು ಪಡೆಯಬೇಕು. ರೈತರಿಗೆ ಶೇ. 3ರ ಬಡ್ಡಿದರದಲ್ಲಿ ಕೃಷಿ ಸಾಲ ಕುರಿಸಾಗಾಣಿಕೆ, ಹೈನುಗಾರಿಕೆ, ಪೈಪ್‌ಲೈನ್‌, ಕಿಸಾನ್‌ ಸೇರಿದಂತೆ ಅನೇಕ ಕೃಷಿ ಚಟುವಟಿಕೆಗೆ ಅಗತ್ಯ ಇರುವ ಸಾಲ ಸೌಲಭ್ಯವನ್ನು ನೀಡಲಾಗುತ್ತಿದ್ದು. ಇದರ ಸೌಲಭ್ಯವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕೆಂದು ಹೇಳಿದರು.

Advertisement

ಬ್ಯಾಂಕಿನ ವ್ಯವಸ್ಥಾಪಕ ಪ್ರವೀಣ ಚಿಕ್ಕೊಂಡ ಮಾತನಾಡಿ, ನಮ್ಮ ಬ್ಯಾಂಕಿನ ದುಡಿಯುವ ಬಂಡವಾಳ 52.93 ಕೋಟಿ ರೂ. ಹೊಂದಿದ್ದು ರೈತರ ಸಹಕಾರದಿಂದ ಮತ್ತು ಸಕಾಲದಲ್ಲಿ ಸಾಲವನ್ನು ಮರುಪಾವತಿ ಮಾಡಿದ ಹಿನ್ನೆಲೆಯಿಂದ ಈ ವರ್ಷ 70 ಲಕ್ಷ ನಿವ್ವಳ ಲಾಭ ಹೊಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು, ಉಪಾಧ್ಯಕ್ಷ ಮಲ್ಲೇಶಿ ಕಡಕೊಳ, ನಿರ್ದೇಶಕರಾದ ನಿಂಗಪ್ಪ ಅವಟಿ, ಮಹಾಂತೇಶ ಹಾರಿವಾಳ, ಮುದುಕಪ್ಪ ಅಸ್ಕಿ, ನಿಂಗಪ್ಪ ಕೂಲಗೇರಿ, ಶ್ರೀಶೈಲ ಪರಮಗೊಂಡ, ಈರಣ್ಣ ವಂದಾಲ, ಸುರೇಶ ನಾಯಕ, ಗಂಗುಬಾಯಿ ಕಡ್ಲಿಮಟ್ಟಿ, ಮಹಾದೇವಿ ಮೈಲೇಶ್ವರ, ಸಂಗಪ್ಪ ಅಡಿಗಿಮನಿ ಸೇರಿದಂತೆ ಅನೇಕರು ಇದ್ದರು. ಇದೇ ಸಂದರ್ಭದಲ್ಲಿ ಪ್ರಗತಿ ಪರ ರೈತರಿಗೆ ಸಮಾಜ ಸೇವಕರಿಗೆ ಸನ್ಮಾನಿಸಲಾಯಿತು. ಈ ವರ್ಷದ ಎಸ್‌ ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next