ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ಮೂರು ತಿಂಗಳಿಂದ ಭೀಕರ ಬಿಸಿಲಿಗೆ ಕೃಷಿ ಚಟುವಟಿಕೆಗಳು ಸ್ಥಗಿತಕೊಂಡಿದ್ದು, ಕಳೆದ 15 ದಿನಗಳಿಂದ ಹಲವು ಕಡೆ ಉತ್ತಮ ಮಳೆಯಾಗಿದೆ. ರೈತರು ಹರ್ಷ ದಿಂದ ಕೃಷಿ ಚಟುವಟಿಕೆ ನಡೆಸಲು ಸಜ್ಜಾಗಿದ್ದಾರೆ.
ತಾಲೂಕಿನಲ್ಲಿ 26 ಸಾವಿರ ಹೆಕ್ಟೇರ್ ಕೃಷಿ ಭೂಮಿ ಇದೆ. ಹಲವೆಡೆ ರೈತರು ರಾಗಿ ಬೆಳೆ ಬಿತ್ತನೆ ಮಾಡಲು ತಮ್ಮ ಹೊಲಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ರಾಗಿ ತಳಿಗಳಾದ ಎಂ. 6 ಸರಣಿಗಳ ರಾಗಿ ಬೆಳೆ ಬೆಳೆಯಲು ಇದು ಉತ್ತಮ ಸಮಯವಾಗಿದೆ.
ಬೇಸಾಯ ಆರಂಭ: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ತುಂತುರು ಮಳೆ ಸೇರಿದಂತೆ, ಕೆಲ ಕಡೆಯಲ್ಲಿ ಹದವಾದ ಮಳೆಯಾಗಿದೆ. ರೈತರುಗಳು ತಮ್ಮ ಹೊಲಗಳಲ್ಲಿ ಬೇಸಾಯ ನೆಡೆಸುತ್ತಿದ್ದು, ಮಳೆ ಆಧಾರಿತ ಬೆಳೆಗಳನ್ನು ಬಿತ್ತನೆ ಮಾಡಲು ಸಿದ್ಧರಾಗುತ್ತಿದ್ದಾರೆ.
ಹಲವು ವರ್ಷದಿಂದ ಬೆಳೆಯಿಲ್ಲ: ಕಳೆದ ಹಲವು ವರ್ಷಗಳಿಂದ ರಾಗಿ ಬಿತ್ತನೆ ಸಮಯದಲ್ಲಿ ಉತ್ತಮ ಮಳೆ ಬಂದು, ರಾಗಿ ತೆನೆ ಬಲಿಯುವ ಸಮಯದಲ್ಲಿ ಮಳೆರಾಯ ಕೈಕೊಡುವ ವಾಡಿಕೆಯಾಗಿದ್ದು, ತಾಲೂಕಿನಲ್ಲಿ ಉತ್ತಮ ರಾಗಿ ಬೆಳೆ ಬರುವು ನಿರೀಕ್ಷೆ ಹುಸಿಯಾಗುತ್ತಿದೆ.
ರೈತರು ತಮ್ಮ ಹೊಲಗಳಿಗೆ ಬೆಳೆಗಾಗಿ ವಿನೋಗಿಸಿದ್ದ ಗೊಬ್ಬರ, ಉಳಿಮೆ, ಕೂಲಿ ಹಣವು ಸಹ ಬಾರದೇ ಸಂಕಷ್ಟ ಎದುರಿ ಸುವ ಪರಿಸ್ಥಿತಿ ಉಂಟಾಗಿದೆ.
ಕೃಷಿ ಇಲಾಖೆಯಿಂದ ಹೊಲಗಳಲ್ಲಿ ಬಿತ್ತನೆ ಮಾಡಲು ರಾಗಿಯನ್ನು ರಿಯಾಯಿತಿ ದರದಲ್ಲಿ ವಿತರಣೆ ಮಾಡಲಿದೆ. ಸರ್ಕಾರ ಸವಲತ್ತುಗಳನ್ನು ರೈತರು ಬಳಕೆ ಮಾಡಿಕೊಂಡು ಪ್ರಕೃತಿ ಮುನಿಸಿಗೆ ಅನುಭವಿಸುವ ನಷ್ಟಗಳನ್ನು ಕಡಿಮೆ ಮಾಡಿ ಕೊಳ್ಳಬಹುದ್ದಾಗಿದೆ.
● ಚೇತನ್ ಪ್ರಸಾದ್