ಕಿಕ್ಕೇರಿ: ಪಟ್ಟಣದ ಹಾಲಿನ ಡೇರಿಯಲ್ಲಿ ರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಕೃಷ್ಣ) ಹಾಲು ವಿತರಕ ರೈತ ರೊಂ ದಿಗೆ ಅನೂಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಹೈನುಗಾರರು ಅಧಿಕಾರಿಗಳಿಗೆ ದೂರು ನೀಡಿದರು.
ಮಂಗಳವಾರ ಸಿಬ್ಬಂದಿ ಇಲ್ಲವೆಂದು ಹಾಲು ವಿತರಕರಿಂದ ಹಾಲು ಪಡೆ ಯಲು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹಾಲಿನ ಡೇರಿ ಆಡಳಿತಾಧಿಕಾರಿ (ಮನ್‌ಮುಲ್ ತಾಲೂಕು ವಿಸ್ತರಣಾಧಿ ಕಾರಿ) ಗುರುರಾಜ್ ಆಗಮಿಸಿದಾಗ ಸಮಸ್ಯೆಗಳ ಸುರಿಮಳೆಗೈದರು. ರೈತರೊಂದಿಗೆ ಸೌಜನ್ಯದಿಂದ ವರ್ತಿಸದೇ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾರೆ. ವ್ಯವಹಾರ ಮಾಡಿದ, ಪಶು ಆಹಾರ ಖರೀದಿಸಿದ, ಹಸುಗಳಿಗೆ ಕೃತಕಗರ್ಭಧಾರಣೆ ಮಾಡಿಸಿ ದಾಗ, ಹಾಲು ವಿತರಣೆ ಮಾಡಿದ ರೈತ ರಿಗೆ, ಹಾಲು ಪಡೆಯುವ ಗ್ರಾಹಕರಿಗೆ ರಸೀದಿ ನೀಡುತ್ತಿಲ್ಲ. 368 ಷೇರುಗಳಿದ್ದ ಡೇರಿಯಲ್ಲಿ ವಿವಿಧ ನೆಪ ಹೇಳಿ ಯಾವುದೇ ನೋಟಿಸ್ ನೀಡದೆ ಷೇರುದಾರರನ್ನು ಕಿತ್ತು ಹಾಕಿ 80ಕ್ಕೆ ಇಳಿಸಿದ್ದಾರೆಂದರು.
ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಹೈಕೋರ್ಟ್‌ನಲ್ಲಿ ತಾತಾಲ್ಕಿಕ ತಡೆಯಜ್ಞೆ ತಂದು ನೆಮ್ಮದಿ ಹಾಳಾಗಿದೆ. ಡೇರಿಯಲ್ಲಿ ಒಳ ರಾಜಕೀಯ ನಡೆಯು ತ್ತಿದೆ. ಕಡ್ಡಾಯವಾಗಿ ನಿತ್ಯ ಹಾಲು ಸರಬರಾಜು ಮಾಹಿತಿ ನಾಮಫಲಕದಲ್ಲಿ ಅಳ ವಡಿಸಲು, ಕನ್ನಡದಲ್ಲಿ ವ್ಯವಹಾರ ವಹಿ ವಾಟು ರಸೀದಿ ನೀಡಲು, ಸಿಬ್ಬಂದಿ ಅನು ಕೂಲಕ್ಕೆ ತಕ್ಕಂತೆ ಹಾಲು ಸಂಗ್ರಹ ಸಮಯ ಬದಲಾಯಿಸುತ್ತಿದ್ದಾರೆಂದರು.
ಆಡಳಿತಾಧಿಕಾರಿ ಗುರುರಾಜ್ ಮಾತ ನಾಡಿ, ತಮ್ಮ ವ್ಯಾಪ್ತಿಗೆ ಬರುವ ಎಲ್ಲವನ್ನು ಕಾನೂನಾತ್ಮಕವಾಗಿ ಬಗೆಹರಿಸಲಾಗು ವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಆರ್.ವಾಸುದೇವ, ಪರಮೇಶ, ಮೋ ಹನ, ಕೆ.ಜಿ.ತಮ್ಮಣ್ಣ, ಮಂಜೇಗೌಡ, ಪು ಟ್ಟಣ್ಣಯ್ಯ, ಪ್ರಾಥಮಿಕ ಕೃಷಿ ಪತ್ತಿನ ಸಹ ಕಾರ ಸಂಘದ ಅಧ್ಯಕ್ಷ ಶೇಖರ್, ತಾರಾ ನಾಥ್, ಮಂಜೇಗೌಡ ಮತ್ತಿತರರಿದ್ದರು