Advertisement

ಅನ್ನದಾತರ ಬಟ್ಟೆ ಬಿಚ್ಚಿಸಿ ಕೂರಿಸಿದ ಪೊಲೀಸರು!

07:05 AM Oct 05, 2017 | |

ಬುಂದೇಲ್‌ಖಂಡ್‌: ಪ್ರತಿಭಟಿಸುತ್ತಿದ್ದ ನೂರಾರು ರೈತರನ್ನು ಬಂಧಿಸಿದ ಪೊಲೀಸರು, ಅವರನ್ನು ವಿವಸ್ತ್ರಗೊಳಿಸಿ, ಕೋಣೆಯೊಂದರ ಒಳಗೆ ಗಂಟೆಗಟ್ಟಲೆ ಕೂರಿಸಿದ ಘಟನೆ ಮಧ್ಯ ಪ್ರದೇಶದ ಬುಂದೇಲ್‌ಖಂಡ್‌ನ‌ಲ್ಲಿ ನಡೆದಿದೆ. 

Advertisement

ರೈತರ ಮೈಮೇಲೆ ಅಂಡರ್‌ವೆàರ್‌ ಒಂದನ್ನು ಬಿಟ್ಟು ಉಳಿದೆಲ್ಲ ಬಟ್ಟೆಗಳನ್ನು ಬಿಚ್ಚಿಸಿದ ಪೊಲೀ ಸರು, ಅವರನ್ನೆಲ್ಲಾ ನೆಲದ ಮೇಲೆ ಕೂರಿಸಿ ದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಈ ಕುರಿತ ಫೋಟೋಗಳನ್ನು ಅಂತರ್ಜಾಲದಲ್ಲಿ ಹರಿಬಿಟ್ಟಿದೆ. ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ನೂರಾರು ರೈತರು ಮನವಿ ಪತ್ರ ಸಲ್ಲಿಸಲು ಸರ್ಕಾರಿ ಕಚೇರಿಗೆ ಹೋಗಿದ್ದಾರೆ. ಈ ವೇಳೆ ಪ್ರತಿಭಟನೆ ಹಿಂಸೆಗೆ ತಿರುಗಿದೆ. 

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಲಾಠಿಪ್ರಹಾರ ಮಾಡಿ, ಆಶ್ರು ವಾಯು ಪ್ರಯೋಗಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ. ನಂತರ ಪ್ರತಿಭಟನಾನಿತರ ರೈತರನ್ನು ಬಂಧಿಸಿದ್ದಾರೆ. ಬಂಧಿಸಿದ ರೈತರನ್ನು ಠಾಣೆಗೆ ಕರೆದೊಯ್ದ ಆರಕ್ಷಕರು, ಬಟ್ಟೆಗಳನ್ನು ಬಿಚ್ಚಿಸಿ ನೆಲದ ಮೇಲೆ ಕೂರಿಸಿರುವುದು ಹಾಗೂ  ಬಿಡುಗಡೆಯಾದ ರೈತರು ಬಟ್ಟೆಗಳನ್ನು ಸುತ್ತಿಕೊಂಡು ಕೈಲಿ ಹಿಡಿದು ಠಾಣೆಯಿಂದ ಹೊರನಡೆಯುತ್ತಿರುವ ಫೋಟೋಗಳನ್ನು ಕಾಂಗ್ರೆಸ್‌ ಪೋಸ್ಟ್‌ ಮಾಡಿದೆ. 

ಘಟನೆ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಚೌಹಾಣ್‌, “ಕಾಂಗ್ರೆಸ್‌ನವರು ವಿನಾ ಕಾರಣ ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ,’ ಎಂದಿದ್ದಾರೆ.

ಕುತ್ತಿಗೆವರೆಗೆ ಹೂತುಕೊಂಡ ರೈತರು
ಜೈಪುರ ಅಭಿವೃದ್ಧಿ ಪ್ರಾಧಿಕಾರದ ಗೃಹ ನಿರ್ಮಾಣ ಯೋಜನೆಗಾಗಿ ಕೃಷಿ ಭೂಮಿ ವಶಪಡಿಸಿಕೊಳ್ಳುವುದನ್ನು ಖಂಡಿಸಿ ಸುಮಾರು 50ಕ್ಕೂ ಹೆಚ್ಚು ರೈತರು ಹಾಗೂ ರೈತ ಮಹಿಳೆಯರು ಕುತ್ತಿಗೆವರೆಗೆ ನೆಲದಲ್ಲಿ ಹೂತುಕೊಳ್ಳುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ್ದಾರೆ. ಕಳೆದ 15 ದಿನಗಳಿಂದ ಪ್ರತಿಭಟಿಸಿದರೂ ಯಾರೂ ತಮ್ಮ ಸಮಸ್ಯೆ ಆಲಿಸದ ಕಾರಣ 3 ದಿನಗ ಳಿಂದ ಈ ರೀತಿ ತಮ್ಮನ್ನು ತಾವು ಹೂತು ಕೊಂಡಿರುವುದಾಗಿ ಜೈಪುರದ ನಿಂದಾರ್‌ ಗ್ರಾಮದ ರೈತರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next