Advertisement

ರೈತರ ಹೆಚ್ಚಿನ ಬೇಡಿಕೆಗೆ ಕೇಂದ್ರ ಅಸ್ತು : ಶೀಘ್ರ ಆಂದೋಲನ ಅಂತ್ಯ

03:26 PM Oct 02, 2018 | Team Udayavani |

ಹೊಸದಿಲ್ಲಿ : ಕೇಂದ್ರ ಸರಕಾರ ಭಾರತೀಯ ಕಿಸಾನ್‌ ಸಂಘ (ಬಿಕೆಯು) ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿ ಅವರ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ರೈತರ ಆಂದೋಲನ ಬೇಗನೆ ಮುಗಿಯಲಿದೆ ಎಂಬ ಸೂಚನೆಗಳು ದೊರಕಿವೆ. 

Advertisement

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಬಿಕೆಯು ಉನ್ನತ ನಾಯಕರೊಂದಿಗೆ ಇಂದು ಮಾತುಕತೆ ನಡೆಸಿ ರೈತರ ಹೆಚ್ಚಿನ ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಸಹಾಯಕ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಹೇಳಿದ್ದಾರೆ. 

“ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರು ಬಿಕೆಯು ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿ ಅವರ ಹಲವು ಬಹು ಮುಖ್ಯ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿರುವ ಕಾರಣ ರೈತರ ನಾಯಕರು, ಯುಪಿ ಸಚಿವರಾದ ಲಕ್ಷ್ಮೀ ನಾರಾಯಣ ಜೀ, ಸುರೇಶ್‌ ರಾಣಾ ಜಿ ಮತ್ತು ನಾನು ಈಗಿನ್ನು ರೈತರನ್ನು ಭೇಟಿಯಾಗಲು ಹೋಗುತ್ತಿದ್ದೇವೆ’ ಎಂದು ಕೇಂದ್ರ ಸಹಾಯಕ ಕೃಷಿ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು. 

ಇಂದು ಬೆಳಗ್ಗೆ ಕಿಸಾನ್‌ ಕ್ರಾಂತಿ ಪಾದಯಾತ್ರೆ ದಿಲ್ಲಿ-ಯುಪಿ ಗಡಿಯನ್ನು ತಲುಪಿದಾಗ ಅದನ್ನು ಪೊಲೀಸರು ಬಲವಂತದಿಂದ ತಡೆದ ಸಂದರ್ಭದಲ್ಲಿ ನಡೆದ ಸಂಘರ್ಷ ಏರ್ಪಟ್ಟಿತ್ತು. ಪೊಲೀಸರು ಪ್ರತಿಭಟನೆ ನಿರತ ರೈತರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದರು. ಆಗ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆಂದೋಲನ ನಿರತ ರೈತರಿಗೆ ತಮ್ಮ ಸಂಪೂರ್ಣ ಬೆಂಬಲ ಘೋಷಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next