ರಾಯಚೂರು: ಕೃಷಿಯನ್ನು ನಂಬಿ ಬದುಕುವ ರೈತರಿಗೆ ಬೇಡವಾಗಿಡುವ ಮೂರು ಕಾಯ್ದೆಗಳ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದನಡೆ ಖಂಡನೀಯ. ಕೂಡಲೇ ಕಾಯ್ದೆಗಳನ್ನು ಹಿಂಪಡೆದು ರೈತರ ಹಿತ ಕಾಯಲಿ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದ ಸ್ವಾಮಿ ಆಗ್ರಹಿಸಿದರು.
ಡಿಸಿ ಕಚೇರಿ ಎದುರಿನ ಉದ್ಯಾನದಲ್ಲಿ ರೈತ ಕಾರ್ಮಿಕ ವಿರೋಧಿ ಕೃಷಿ ಸಂಬಂಧಿ ಸಿ ಕಾಯ್ದೆಗಳ ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ ಪ್ರಚಾರ ಜಾಥಾದ ಸಮಾರೋಪಸಮಾರಂಭದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕಾಯ್ದೆಗಳು ರೈತ ವಿರೋಧಿ ಯಾಗಿದ್ದು, ಕೃಷಿ ಕ್ಷೇತ್ರಕ್ಕೆಮಾರಕವಾಗಿವೆ. ಯಾವುದೇ ಕಾರಣಕ್ಕೂ ಜಾರಿ ಮಾಡದಂತೆ ಆಗ್ರಹಿಸಿ ದೆಹಲಿ ಎರಡು ತಿಂಗಳಿಂದ ಹೋರಾಟ ನಡೆಸಲಾಗುತ್ತಿದೆ. ಈ ಕಾಯ್ದೆಗಳಿದ ದೊಡ್ಡ ವರ್ತಕರು, ಬಂಡವಾಳಶಾಹಿಗಳಿಗೆ ಅನುಕೂಲವಾಗಲಿದೆ ಎಂದು ದೂರಿದರು.
ಕೆಪಿಆರ್‌ಎಸ್‌ನ ರಾಜ್ಯ ಕಾರ್ಯದರ್ಶಿ ಬಸವರಾಜ ಮಾತನಾಡಿ, ಕೇಂದ್ರ ಸರ್ಕಾರ ಹಠಮಾರಿತನ ಬಿಟ್ಟು ರೈತರ ನೆರವಿಗೆ ಬರಲಿ. ಸರ್ವಾ ಧಿಕಾರ ಧೋರಣೆಯಿಂದ ಬಡವರು, ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಕೃಷಿ ಕಾಯ್ದೆ ಹಿಂಪಡೆಯುವ ಆಶ್ವಾಸನೆ ನೀಡುತ್ತಿಲ್ಲ. ಬೇಡಿಕೆ ಈಡೇರದಿದ್ದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ:ಹೊನಗುಂಟಿ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ
ಕೆಪಿಆರ್‌ಎಸ್‌ನ ರಾಜ್ಯ ಕಾರ್ಯದರ್ಶಿ ಚಂದ್ರಪ್ಪ ಹೊಸಕೇರಾ, ಸಹಕಾರ್ಯದರ್ಶಿ ದಾವಲ್‌ಸಾಬ್ ನದಾಫ್, ಜಾಥಾ ಸಂಚಾಲಕ ಶರಣಪ್ಪ ಮಮ್‌ಶೆಟ್ಟಿ, ಕೂಲಿಕಾರರ ಸಂಘದ ಜಿಲ್ಲಾ ಸಂಚಾಲಕ ಕರಿಯಪ್ಪ ಹಚ್ಚೊಳ್ಳಿ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ, ಡಿ.ಎಸ್. ಶರಣಬಸವ, ಜಿಲ್ಲಾಧ್ಯಕ್ಷೆ ವರಲಕ್ಷ್ಮಿ, ದೇವದಾಸಿ ಮಹಿಳಾ ವಿಮೋಚನಾ ಸಂಘದ ಜೆ.ತಾಯಮ್ಮ, ಎಸ್ ಎಫ್‌ಐ ಜಿಲ್ಲಾಧ್ಯಕ್ಷ ರಮೇಶ್ ಮೀರಾಪೂರ, ವಿಮಾ ನೌಕರರ ಸಂಘದ ಅಧ್ಯಕ್ಷ ಎಂ.ಶರಣಗೌಡ, ಸದಸ್ಯರಾದ ಎಂ.ರವಿ, ಶ್ರೀಧರ್, ಕೆಪಿಆರ್‌ಎಸ್‌ನ ಡಿ.ವೀರನಗೌಡ, ಮಾರೆಪ್ಪ ಹರವಿ, ಪ್ರವೀಣರೆಡ್ಡಿ ಗುಂಜಹಳ್ಳಿ, ರಂಗಮ್ಮ ಅನ್ವಾರ ಇದ್ದರು. ನಗರದ ಬಸವೇಶ್ವರ ವೃತ್ತದಿಂದ ಡಿಸಿ ಕಚೇರಿ ಎದುರಿನ ಉದ್ಯಾನವನದವರೆಗೆ ರ್ಯಾಲಿ ನಡೆಸಿ ಬಳಿಕ ಬಹಿರಂಗ ಸಭೆ ನಡೆಸಲಾಯಿತು