Advertisement
ಪಟ್ಟಣದ ಪ್ರವಾಸಿ ಮಂದಿರದಲ್ಲಿ ವಿಶ್ವಚೇತನ ನಾಯಕ ಎಂ.ಡಿ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾ ಟಕ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ವತಿ ಯಿಂದ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಸಭೆ ಯಲ್ಲಿ ಮಾತನಾಡಿ, ರೈತರು ಸಾಲಸೋಲ ಮಾಡಿ ಬೆಳೆಗಳನ್ನು ಬೆಳೆದರೂ ಸಹ ಅವರು ಹಾಕಿದ ಹಣ ಅವರ ಕೈಸೇರುತ್ತಿಲ್ಲ. ಅದಕ್ಕಾಗಿ ಸಿದ್ದ ರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತರನ್ನು ಮೇಲೆತ್ತಲು ರೈತರಿಗೆ ತಾವು ಬೆಳೆದ ಎಲ್ಲಾ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು. ಅವರು ನೀಡಿರುವ ಗ್ಯಾರಂಟಿ ಕಾರ್ಡ್‌ನಲ್ಲಿನ ಎಲ್ಲ ಅಂಶಗಳನ್ನು ಜಾರಿಗೆ ತರ ಬೇಕು. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವಂತಾಗಬೇಕು. ರೈತ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಡಲಾಗುವುದು. ರೈತರಿಗೆ ಅನ್ಯಾಯ ಆದಾಗಿ ಜಿಲ್ಲೆಯಾದ್ಯಂತ ಹೋರಾಟ ಗಳನ್ನು ಮಾಡಿ ನ್ಯಾಯ ಒದಗಿಸುವ ಕೆಲಸವನ್ನು ಹಳ್ಳಿಯಿಂದ ಹಿಡಿದು ದೆಹಲಿವರೆಗೆ ಹೋರಾಟ ಮಾಡುತ್ತೇವೆ. ರೈತ ಸಂಘವನ್ನು ಪ್ರತಿ ಹಳ್ಳಿಯಲ್ಲಿ ಸಂಘಟಿಸುತ್ತೇವೆ. ರೈತರಿಗೆ ಎಲ್ಲೇ ಅನ್ಯಾಯವಾದರೂ ಅವರ ಪರವಾಗಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
Advertisement
ಜಿಲ್ಲೆಯ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ
02:17 PM May 21, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.