Advertisement

ರೈತ ಸಂಘಟನೆ ಮುಖಂಡರ ವರ್ತನೆ ಹಾಸ್ಯಾಸ್ಪದ

04:02 PM Oct 25, 2022 | Team Udayavani |

ಚಾಮರಾಜನಗರ: ರೈತರ ಕುಂದುಕೊರತೆಗಳನ್ನು ಪರಿಹರಿಸಲು ಮುಂದಾಗಿದ್ದ ಸಚಿವ ವಿ.ಸೋಮಣ್ಣ ಅವರು ತಡವಾಗಿ ಬಂದರು ಎಂಬ ನೆಪ ಮಾಡಿ ಕೆಲ ರೈತ ಮುಖಂಡರು ಸಭೆಯಿಂದ ಹೊರ ಹೋಗಿದ್ದು ಹಾಸ್ಯಾಸ್ಪದವಾಗಿದೆ ಎಂದು ರೈತ ಮುಖಂಡ ಅಣಗಳ್ಳಿ ಬಸವರಾಜು ಟೀಕಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರ ಸಭೆ ಬಹಿಷ್ಕರಿಸಿ ರೈತ ಮುಖಂಡರು ಸಾಧಿಸಿ ದ್ದೇನು? ಜವಾಬ್ದಾರಿಯುತ ಸಚಿವರು ಒಂದು ಗಂಟೆ ತಡವಾಗಿ ಬಂದರು ಎಂದು ನೆಪ ಮಾಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು ರೈತ ಮುಖಂ ಡರೇ ಹೊರತು ಅಧಿಕಾರಿಗಳು ಹಾಗೂ ಸಚಿವರಲ್ಲ. ಸ್ವ ಪ್ರತಿಷ್ಠೆಗಾಗಿ ಕೆಲವೇ ರೈತ ಮುಖಂಡರು ಸಂಘಟನೆ ಯನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉದ್ದೇಶ ಪೂರ್ವಕವಾಗಿ ತಡವಾಗಿ ಬಂದಿಲ್ಲ: ಸಚಿವ ವಿ.ಸೋಮಣ್ಣ ಅವರು ಉದ್ದೇಶ ಪೂರ್ವಕ ವಾಗಿ ತಡವಾಗಿ ಬಂದಿಲ್ಲ. ಇಲ್ಲ ಅವರು ಪಕ್ಷದ ಸಭೆ ಯಲ್ಲಿ ಭಾಗವಹಿಸಿ ತಡವಾಗಿದ್ದರೆ ಇವರು ಪ್ರತಿಭಟನೆ ಮಾಡುವುದರಲ್ಲಿ ಅರ್ಥವಿರುತ್ತಿತ್ತು. ಇದಕ್ಕೂ ಮೊದಲು ಉಸ್ತುವಾರಿ ಸಚಿವರು ನಗರಕ್ಕೆ ಬರುವ ಮಾರ್ಗ ಮಧ್ಯೆದಲ್ಲಿ ಕೊಳ್ಳೇಗಾಲ ಪಟ್ಟಣದಲ್ಲಿ ನಿರ್ಮಾಣವಾಗಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಪುತ್ಥಳಿ ಅನಾವರಣಕ್ಕೆ ದಿನಾಂಕ ನಿಗದಿ ಮಾಡುವಂತೆ ದಲಿತ ಸಂಘಟನೆಗಳು ಮುಖಂಡರು ಕಾರು ತಡೆದು, ಅವರೊಂದಿಗೆ ಚರ್ಚೆ ಮಾಡಿದರು. ಸ್ಥಳಕ್ಕೂ ಅವರನ್ನು ಕರೆದೊಯ್ಯದರು. ಅಲ್ಲಿ, ತಡವಾಯಿತು.

ಶ್ರೀನಿವಾಸಪ್ರಸಾದ್‌ ಆರೋಗ್ಯ ವಿಚಾರಣೆ: ಅಲ್ಲದೇ ಸಭೆಗೂ ಮೊದಲು ಸಫಾಯಿ ಕರ್ಮಚಾರಿ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮ ಮಧ್ಯದಲ್ಲಿ ಸಂಸದರಾದ ವಿ.ಶ್ರೀನಿವಾಸಪ್ರಸಾದ್‌ ಆಗಮಿಸಿದರು. ಇವರೊಂದಿಗೆ ಮಾತನಾಡಿ, ಅವರಿಗೆ ಅಭಿನಂದನೆ ಸಲ್ಲಿಸಿ, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮತ್ತು ಆಗುಹೋಗುಗಳ ಬಗ್ಗೆ ಚರ್ಚೆ ಮಾಡಿ, ಹಿರಿಯರಾದ ಶ್ರೀನಿವಾಸಪ್ರಸಾದ್‌ ಅವರ ಆರೋಗ್ಯವನ್ನು ವಿಚಾರಿಸಿ, ಅಲ್ಲಿಂದ ನೇರವಾಗಿ ಜಿಲ್ಲಾಡಳಿತ ಭವನಕ್ಕೆ ಸಚಿವರು ಬಂದಿದ್ದಾರೆ. ಇಷ್ಟಕ್ಕೆ ರೈತ ಮುಖಂಡರು ತಡವಾಗಿ ಸಚಿವರು ಬಂದಿದ್ದಾರೆ ಎಂದು ಸಭೆಯಿಂದ ಹೊರ ನಡೆದಿರುವುದು ಸರಿಯಲ್ಲ. ಸಭೆ ಬಹಿಷ್ಕಾರ ಮಾಡಿದ ಮುಖಂಡರಿಗೆ ರೈತ ಸಮಸ್ಯೆಗಳು ಬಗೆಹರಿಸುವುದು ಬೇಕಾಗಿಲ್ಲ. ಹೀಗಾಗಿ ಅವರು ಹೊರ ಹೋದರು ಎಂದು ಆರೋಪಿಸಿದರು.

ನೋವಿನ ಸಂಗತಿಯಾಗಿದೆ: ನಂತರ ಸಚಿವರು ಧೃತಿಗಡೆದೇ ಅಧಿಕಾರಿಗಳು ಹಾಗೂ ರೈತರೊಂದಿಗೆ ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿ, ಅನೇಕ ಮಾರ್ಗದರ್ಶನವನ್ನು ನೀಡಿದ್ದಾರೆ. ಅವರಲ್ಲಿದ್ದ ರೈತ ಹಾಗೂ ಬಡವರ ಪರ ಕಾಳಜಿಯನ್ನು ರೈತ ಮುಖಂಡರು ಅರ್ಥ ಮಾಡಿಕೊಂಡಿಲ್ಲ ಎಂಬುದು ನೋವಿನ ಸಂಗತಿಯಾಗಿದೆ ಎಂದರು. ಸಚಿವ ವಿ. ಸೋಮಣ್ಣ ಅವರು ಮಹಿಳೆ ಕೆನ್ನೆಗೆ ಹೊಡೆದಿದ್ದಾರೆ ಎಂಬ ಆರೋಪಗಳ ಬಗ್ಗೆ ಮಾತನಾಡಿದ ಬಸವರಾಜು, ಹಂಗಳದಲ್ಲಿ ನಡೆದಿರುವ ಘಟನೆ ಬಗ್ಗೆ ನಾನು ಮಾಧ್ಯಮಗಳಲ್ಲಿ ನೋಡಿದೆ. ಆದರೆ, ನೊಂದ ಮಹಿಳೆಯು ಎಲ್ಲಿಯೂ ನನಗೆ ಅನ್ಯಾಯವಾಗಿದೆ. ಸಚಿವರು ನನಗೆ ಅಪಮಾನ ಮಾಡಿದ್ದಾರೆ ಎಂದು ದೂರು ನೀಡಿದ್ದರೆ ನಾನು ಅವರ ಬೆಂಬಲಕ್ಕೆ ನಿಲ್ಲುತ್ತೇನೆ ಎಂದರು.

Advertisement

ಆಕೆಯು ಮತ್ತೆ ಮಾಧ್ಯಮಗಳಿಗೆ ಮಾತನಾಡಿ, ನನಗೆ ಸೋಮಣ್ಣ ಅವರು ಹೊಡೆದಿಲ್ಲ. ನನ್ನ ಸಮಸ್ಯೆಯನ್ನು ಹೇಳಿಕೊಂಡೆ. ಅವರಿಗೆ ನಮಸ್ಕಾರ ಮಾಡಲು ಮುಂದಾದೆ. ಅವರು ವಿಚಲಿತರಾಗಿ ನನ್ನನ್ನು ಮೇಲೆಕ್ಕೆ ಎತ್ತಿದ್ದಾರೆ. ಅಲ್ಲದೇ ನನಗೆ ಒಳ್ಳೆದನ್ನು ಮಾಡಿದ್ದಾರೆ. ಹಕ್ಕು ಪತ್ರ ಕೊಡಿಸಿ, ನಾನು ನೀಡಿದ್ದ 4 ಸಾವಿರ ರೂ. ವಾಪಸ್‌ ಕೊಡಿಸಿದ್ದಾರೆ. ಎಂದು ಆಕೆ ಹೇಳಿದ ಮೇಲೆ ಇನ್ನು ಘಟನೆಯನ್ನು ಎಳೆದುಕೊಂಡು ಹೋಗುವುದರಲ್ಲಿ ಅರ್ಥವಿಲ್ಲ ಎಂದರು.

ರೈತ ಮುಖಂಡರಾದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಬೂದಿತಿಟ್ಟು ಗುರುಸ್ವಾಮಿ, ಷಣ್ಮುಖಸ್ವಾಮಿ, ವೀರಭದ್ರಸ್ವಾಮಿ, ರಾಮಕೃಷ್ಣ, ಸಿದ್ದಯ್ಯನಪುರ ಲಕ್ಷ್ಮಣ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next