ಆಲೂರು: ಪ್ರಗತಿಪರ ರೈತ,ಆಲೂರು ತಾಲ್ಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಹೆಚ್.ಡಿ.ಗೋಪಾಲ್ ಉರೂಫ್ ರಘು ದಂಪತಿ ಅವರನ್ನು ಕೆ.ಹೊಸಕೋಟೆ ಹೋಬಳಿ ರೈತ ಸಂಘದ ಮುಖಂಡರು ಹಾಗೂ ವಿವಿಧ ಪಕ್ಷಗಳ ಮುಖಂಡರು ಗೌರವಿಸಿ ಸನ್ಮಾನಿಸಿದರು.
ರೈತ ಮುಖಂಡ ಮೋಹನ್ ಮಾತನಾಡಿ ಗೋಪಾಲ ಅವರು 12 ಎಕರೆಯಲ್ಲಿ ಕಾಫಿ ಮೆಣಸು ಉತ್ತಮವಾಗಿ ಬೆಳೆದಿದ್ದು ಬೆಳೆಯ ಗುಣಮಟ್ಟದ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಹೋಬಳಿ ಮಟ್ಟದ ರೈತರು ತೋಟಕ್ಕೆ ಕರೆದುಕೊಂಡು ಬಂದು ವೀಕ್ಷಣೆ ಮಾಡಿ ಇತರರಿಗೆ ಇವರ ಉತ್ತಮ ಬೆಳೆಯ ಬಗ್ಗೆ ಮಾಹಿತಿ ನೀಡಿದರು.
ಜೆಡಿಎಸ್ ಮುಖಂಡ ಕೆ.ಎನ್.ಕಾಂತರಾಜ್ ಮಾತನಾಡಿ ತಾಲ್ಲೂಕಿನಲ್ಲಿ ಗೋಪಾಲ ಅವರು ಗೊಬ್ಬರ ಬಳಸಿ ಅತೀ ಹೆಚ್ಚು ಇಳುವರಿ ಗಳಿಸಿ ಮಾದರಿಯಾಗಿದ್ದಾರೆ ಗೋಪಾಲ ದಂಪತಿಗಳನ್ನು ಸನ್ಮಾನಿಸುತ್ತಿರುವುದು ಸಂತೋಷ ತಂದಿದೆ.
ಕರ್ನಾಟಕ ರಕ್ಷಣ ವೇದಿಕೆ ಕೆ.ಹೊಸಕೋಟೆ ಹೋಬಳಿ ಅಧ್ಯಕ್ಷ ವಿವೇಕ್ ವೈದ್ಯನಾಥ್ ಮುಖಂಡ ಮಾತನಾಡಿ ಗೋಪಾಲ ಅವರು ಗ್ರಾಮದ ಪ್ರಗತಿಪರ ರೈತ ಗೋಪಾಲ ಅವರು ರೈತರಲ್ಲಿಯೇ ಭಿನ್ನವಾಗಿ ಕಾಣುತ್ತಾರೆ.
ಕಳೆದ 15 ವರ್ಷಗಳ ಹಿಂದೆ ಇವರಿಗೆ ಬಂದ ಅಲ್ಪ ಜಮೀನು ಇತ್ತು. ಇದು ತಂದೆಯಿಂದ ಬಂದ ಅಲ್ಪ ಜಮೀನು.ಇದನ್ನೇ ಬಂಡವಾಳ ಮಾಡಿಕೊಂಡ ಗೋಪಾಲ್ ದಂಪತಿ ಎಲ್ಲರಂತೆ ಕಷ್ಟ ಪಟ್ಟು ದುಡಿದರು. ಲಾಭ ನಷ್ಟ ಎರಡೂ ಅನುಭವಿಸಿದ್ದು ಈಗ ಉತ್ತಮವಾಗಿ ಇಳುವರಿ ಗಳಿಸುವುದರ ಮೂಲಕ ಅತೀ ಹೆಚ್ಚು ಲಾಭ ಗಳಿಸಿ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ರೈತ ಮುಖಂಡ ಹೈದೂರು ಜಯಣ್ಣ,ವಿವೇಕ್ ವೈದ್ಯನಾಥ್, ಇಂದ್ರೇಶ್ ಮಲಗಳಲೆ,ಪರಮೇಶ್ ಮಲಗಳಲೆ,ಮಲ್ಲಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರತ್,ಸತೀಶ್ ಹರಿಹಳ್ಳಿ,ಹಾಗೂ ಇತರರು ಇದ್ದರು.