Advertisement

ಅಧಿಕಾರಿಗಳು ಒತ್ತಡಕ್ಕೆ ಮಣಿದು ನಿಯಮ ಉಲ್ಲಂಘಿಸಿ ದಾಖಲಾತಿ ನೀಡಿದರೆ ಉಪವಾಸ ಸತ್ಯಾಗ್ರಹ

07:43 PM Nov 27, 2021 | Team Udayavani |

ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಕಚೇರಿ ಎದುರು ಧರಣಿ ಮಾಡುವ ಮೂಲಕ ರೈತಸಂಘದ ಎಂ ಮಂಜುನಾಥ್ ಎಂಬುವವರು ಅದಿಕಾರಿಗಳಿಗೆ ಜಮೀನಿಗೆ ಸಂಬಂಧಿಸಿದ ದಾಖಲಾತಿಗಳನ್ನು ನೀಡಲು ನಿಯಮಬಾಹಿರವಾಗಿ ಒತ್ತಡ ಹೇರುತ್ತಿದ್ದು ಅಧಿಕಾರಿಗಳು ಒತ್ತಡಕ್ಕೆ ಮಣಿದು ನಿಯಮ ಉಲ್ಲಂಘಿಸಿ ದಾಖಲಾತಿಗಳನ್ನು ನೀಡಿದರೆ ತಾಲ್ಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ಬಿಳ್ಳೂರಿನ ರೈತರಾದ ಪಿ.ಎ ಪುಟ್ಟಸ್ವಾಮೇಗೌಡ ತಿಳಿಸಿದ್ದಾರೆ.

Advertisement

ಕೊಟ್ಟಿಗೆಹಾರದಲ್ಲಿ ಶನಿವಾರ ರೈತರಾದ ಪಿ.ಎ ಪುಟ್ಟಸ್ವಾಮೇಗೌಡ, ಪಿ.ಬಿ ರಾಜಮೋಹನ್, ಪಿ.ಕೆ ಕುಲ್‌ದೀಪ್ ಅವರು ಜಂಟಿಸುದ್ದಿಗೋಷ್ಠಿ ನಡೆಸಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎ ಪುಟ್ಟಸ್ವಾಮೇಗೌಡ ಅವರು, ಕಡಿದಾಳು ಗ್ರಾಮದಲ್ಲಿ ಸರ್ವೆ ನಂ 76 ರಲ್ಲಿ 108ಎಕರೆ ಜಾಗವಿದ್ದು ಈ 108 ಎಕರೆ ಜಾಗದಲ್ಲಿ ನಮ್ಮ ತಂದೆಯವರಿಗೆ 59.20 ಗುಂಟೆ ಜಾಗವಿದೆ.  ಆ ಜಮೀನಿಗೆ ಈಗ 6 ಜನ ಖಾತೆದಾರರಾಗಿದ್ದು ಆ ಖಾತೆದಾರರಲ್ಲಿ 1983 ನೇ ಇಸವಿಯಲ್ಲಿ  ಎಂ. ಮಂಜುನಾಥ್‌ಗೌಡ ಎಂಬುವವರು ನಮ್ಮ ತಾಯಿ ತಮ್ಮನ ಆಸ್ತಿಯಲ್ಲಿ 32 ಎಕರೆಯನ್ನು ಖರೀದಿ ಮಾಡಿದ್ದಾರೆ. ಆದರೆ ಈಗ ನಮ್ಮ 59.20 ಗುಂಟೆ  ಜಾಗದಲ್ಲಿ 2 ಎಕರೆ ಅವರಿಗೆ ಸೇರುತ್ತದೆ ಎಂದು ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಯಾವುದೇ ದಾಖಲಾತಿ ಇಲ್ಲದೇ 2 ಎಕರೆ ನಮ್ಮ ಜಮೀನು ನಮಗೆ ಕೊಡಿಸಿ ಎಂದು ತಾಲ್ಲೂಕು ಅಧಿಕಾರಿಗಳ ಕಚೇರಿಯ ಮುಂದೆ ಧರಣಿ ಕೂರುವ ಮೂಲಕ, ನಮ್ಮ ಜಮೀನಿನ ಗಡಿಯ ಬೇಲಿಯನ್ನು ಕೀಳುವ ಮೂಲಕ ಅಧಿಕಾರಿಗಳಿಗೆ ಹಾಗೂ ನಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಧರಣಿ ಮಾಡುವ ಮೂಲಕ ಅಧಿಕಾರಿಗಳಿಗೆ ಒತ್ತಡ ಹಾಕುತ್ತಿದ್ದಾರೆ. ಅಧಿಕಾರಿಗಳು  ಎಂ. ಮಂಜುನಾಥ್‌ಗೌಡ ಅವರ ಒತ್ತಡಕ್ಕೆ ಮಣಿದು ಅಧಿಕಾರಿಗಳು ನಿಯಮ ಬಾಹಿರವಾಗಿ ದಾಖಲಾತಿಗಳನ್ನು ಮಾಡಿಕೊಟ್ಟರೆ ಕುಟುಂಬ ಸಮೇತರಾಗಿ ತಾಲ್ಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರೈತರಾದ ಪಿ.ಬಿ ರಾಜಮೋಹನ್, ಪಿ.ಕೆ ಕುಲ್‌ದೀಪ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next