ದಾವಣಗೆರೆ: ನಮ್ಮ ದೇಶಕೃಷಿಯಾಧಾರಿತವಾಗಿದ್ದು ಕೃಷಿಯಲ್ಲಿ ಬೀಜ ಬಿತ್ತಿ ಬೀಜ ಪಡೆಯುವರೆಗೆ ಅಂದರೆ ಬಿತ್ತನೆಯಿಂದ ಕಟಾವಿನವರೆಗೆ ಮಹಿಳೆಯರು ನಿರ್ವಹಿಸುವ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಕೃಷಿ ಇಲಾಖೆ ಆತ್ಮ ಯೋಜನೆಯ ಯೋಜನಾ ನಿರ್ದೇಶಕರು ಹಾಗೂ ಉಪಕೃಷಿ ನಿರ್ದೇಶಕ ಶಿವಕುಮಾರ್ ಹೇಳಿದರು.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಆತ್ಮ ಯೋಜನೆಯಡಿ ಗುರುವಾರ ಏರ್ಪಡಿಸಿದ್ದ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೈತ ಮಹಿಳೆಯರು ಕೃಷಿ ಕಾರ್ಯವನ್ನುಸ್ಮರಿಸಿಕೊಳ್ಳಲೆಂದೇ ಅಕ್ಟೋಬರ್ 15ನೇ ದಿನವನ್ನು ರೈತ ಮಹಿಳೆಯರ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನ ರೈತ ಮಹಿಳೆಯರಿಗೆ ದೇಶಾದ್ಯಂತ ಗೌರವವನ್ನು ಸಲ್ಲಿಸಲಾಗುತ್ತದೆ ಎಂದರು.
ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ| ಮಾರುತೇಶ್ ಮಾತನಾಡಿ, ಪ್ರತಿಯೊಬ್ಬಮನುಷ್ಯನೂ ಸಮತೋಲನವಾದ ಆರೋಗ್ಯ ಕಾಪಾಡಿಕೊಳ್ಳಲು ಆರು ರೀತಿಯ ಪೌಷ್ಟಿಕಾಂಶಗಳಾದ ಕಾಬೋìಹೈಡ್ರೇಟ್ಸ್, ಪ್ರೊಟೀನ್ಸ್, ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ಸ್, ಮಿನರಲ್ಸ್‌ಗಳುಳ್ಳ ಆಹಾರ ಪದಾರ್ಥಗಳನ್ನು ಕ್ರಮಬದ್ಧವಾಗಿ ಸೇವಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಸಹಾಯಕ ಕೃಷಿ ನಿರ್ದೇಶಕಿ ಪ್ರತಿಭಾ ಮಾತನಾಡಿ, ಹಿಂದಿನಿಂದಲೂಬೇಸಾಯದಲ್ಲಿ ಕೌಶಲ್ಯಾಧಾರಿತ ಕೆಲಸಗಳನ್ನು ಮಹಿಳೆಯರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾಬಂದಿದ್ದಾರೆ. ಬಿತ್ತನೆ ಬೀಜಗಳ ಶೇಖರಣೆ, ಬಿತ್ತನೆ, ಕಳೆ ನಿರ್ವಹಣೆ, ಕಟಾವು, ಒಕ್ಕಲು ಮಾಡುವುದು ಸೇರಿದಂತೆ ಒಟ್ಟಾರೆ ಶೇ. 50ರಷ್ಟು ಕೃಷಿ ಕೆಲಸಗಳನ್ನು ಮಹಿಳೆಯರೇ ನಿರ್ವಹಿಸುತ್ತಿದ್ದಾರೆ ಎಂದರು.
ಸಹಾಯಕ ಕೃಷಿ ಅಧಿಕಾರಿ ಬಿ. ದುರುಗಪ್ಪ, ಆತ್ಮ ಯೋಜನೆಯ ಸಿಬ್ಬಂದಿ ವೆಂಕಟೇಶ್ ಬಿ.ಎಸ್., ರೈತ ಅನುವುಗಾರರಾದ ಸಿದ್ದಲಿಂಗಪ್ಪ, ರಾಜಪ್ಪ, ಪ್ರಭಾಕರ್ ಮತ್ತು ರೈತ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹಿಂದಿನಿಂದಲೂ ಬೇಸಾಯದಲ್ಲಿ ಕೌಶಲ್ಯಾಧಾರಿತ ಕೆಲಸಗಳನ್ನು ಮಹಿಳೆಯರು ಅಚ್ಚುಕಟ್ಟಾಗಿನಿರ್ವಹಿಸುತ್ತಾ ಬಂದಿದ್ದು, ಕೃಷಿ ಕ್ಷೇತ್ರಕ್ಕೆ ಅವರ ಕೊಡುಗೆ ಮರೆಯಲಾಗದು.
– ಪ್ರತಿಭಾ, ಸಹಾಯಕ ಕೃಷಿ ನಿರ್ದೇಶಕಿ