ಶಿರಸಿ: ರಾಜ್ಯ ಸರಕಾರವು ನೀರು ಬಿಡೋದು ನಿಲ್ಲಿಸಿ ಕನ್ನಡ ನಾಡಿನ ಹಿತ ಕಾಪಾಡಬೇಕು. ಕಾವೇರಿ ನ್ಯಾಯ ರಾಜ್ಯಕ್ಕೆ ಸಿಗಬೇಕು ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿ ಪಾದಿಸಿದರು.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ, ಬಿಜೆಪಿ ಹಾಗೂ ಜೆಡಿಎಸ್ ರಾಜ್ಯ ಸರಕಾರದ ಮೇಲೆ ಕರ್ನಾಟಕದ ಹಿತ ಕಾಯಲು ಒತ್ತಡ ತರುತ್ತಿದೆ. ಆದರೆ ಕಾಂಗ್ರೆಸ್ ಸರಕಾರ ಅಧಿಕಾರ ಹಣ ಬಳಕೆಗೆ ಮಾತ್ರ ಬಳಸುತ್ತಿದೆ. ಈ ದುರಾಡಳಿತದ ಕಾರಣದಿಂದ ಸಮಸ್ಯೆ ಆಗುತ್ತಿದೆ ಎಂದರು.
ಕಾವೇರಿ ನೀರನ್ನು ಕಳೆದ ಒಂದು ತಿಂಗಳುಗಳಿಂದ ತಮಿಳುನಾಡಿಗೆ ಬಿಡುತ್ತಿದೆ. ರಾಜ್ಯ ರಾಜಕಾರಣದಲ್ಲಿ ಅಧಿಕಾರದ ದುರ್ಬಳಕೆ ಮಾಡಿಕೊಂಡಿದೆ. ಇಂಡಿಯಾದ ಮೈತ್ರಿಗಾಗಿ ರಾಜ್ಯದ ಹಿತ ಬಲಿ ಕೊಡಲಾಗುತ್ತಿದೆ. ಸಿಎಂ, ಡಿಸಿಎಂ, ಕೃಷಿ, ಕಾನೂನು ಸಚಿವರ ವಿಫಲತೆ ಕ್ಷಣ ಕ್ಷಣಕ್ಕೆ ಕಾಣುತ್ತಿದೆ ಎಂದರು.
ಅರಣ್ಯ ಅತಿಕ್ರಮಣದಾರರಿಗೆ ಸಚಿವ ಈಶ್ವರ ಖಂಡ್ರೆ ಅವರ ಪತ್ರ ಒಕ್ಕಲೆಬ್ಬಿಸಲು ಕಾರಣ ಆಗುವಂತೆ ಇದ್ದು, ಇದು ಆಘಾತಕಾರಿ ಎಂದೂ ಹೇಳಿದರು.
ಈ ವೇಳೆ ಆರ್.ಡಿ.ಹೆಗಡೆ, ಗಣಪತಿ ನಾಯ್ಕ, ರಾಜೇಶ ಶೆಟ್ಟಿ, ಸದಾನಂದ ಭಟ್ಟ, ಉಷಾ ಹೆಗಡೆ, ನಂದನ ಸಾಗರ್, ನಾಗರಾಜ ಶೆಟ್ಟಿ ಇತರರು ಇದ್ದರು.
ಇದನ್ನೂ ಓದಿ: Karnataka Bandh: ಕಾವೇರಿಗಾಗಿ ಕಾಫಿನಾಡಲ್ಲಿ ತೀವ್ರಗೊಂಡ ಹೋರಾಟ.. ಅರೆಬೆತ್ತಲೆ ಉರುಳು ಸೇವೆ